ಯಾದಗಿರಿ: ಗೂಗಲ್ ಸರ್ಚ್‍ನಲ್ಲಿ ಸಿಕ್ಕ ಫ್ಲಿಪ್ಕಾರ್ಟ್ ಕಸ್ಟಮರ್ ಕೇರ್ ನಂಬರಿಗೆ ಕಾಲ್ ಮಾಡಿ ವ್ಯಕ್ತಿಯೊಬ್ಬರು ಎರಡು ಲಕ್ಷ ಕಳೆದುಕೊಂಡ ಘಟನೆ ಯಾದಗಿರಿಯಲ್ಲಿ ನಡೆದಿದೆ.
ಯಾದಗಿರಿಯ ಗಣೇಶ ನಗರದ ನಿವಾಸಿ ಹೇಮನಾರಾಯಣ ಎಂಬವರು, ಫ್ಲಿಪ್ಕಾರ್ಟ್‍ನಲ್ಲಿ ಬಟ್ಟೆಯನ್ನು ಆರ್ಡರ್ ಮಾಡಿದ್ದು, ಬಟ್ಟೆಯು ಇಷ್ಟವಾಗದ ಕಾರಣ ಆರ್ಡರನ್ನು ಕ್ಯಾನ್ಸಲ್ ಮಾಡಿದ್ದಾರೆ. ಆರ್ಡರ್ ಕ್ಯಾನ್ಸಲ್ ಮಾಡಿದ ಹಿನ್ನೆಲೆ ಅವರ ಖಾತೆಗೆ ಹಣ ಮರಳಿ ಬಾರದೆ ಇರುವುದರಿಂದ, ಗೂಗಲ್‍ನಲ್ಲಿ ಫ್ಲಿಪ್ಕಾರ್ಟ್ ಕಸ್ಟಮರ್ ಕೇರ್ ನಂಬರ್ ಹುಡುಕಾಡಿದ್ದಾರೆ. ಇದನ್ನೂ ಓದಿ: ಜೆಡಿಎಸ್ ಬಗ್ಗೆ ಕಾಂಗ್ರೆಸ್ ನಡೆಸಿದ ಅಪಪ್ರಚಾರಕ್ಕೆ ಫಲಿತಾಂಶವೇ ಉತ್ತರ ನೀಡಿದೆ: ಹೆಚ್‌ಡಿಕೆ
Advertisement
Advertisement
ಬಳಿಕ ಅಲ್ಲಿ ಸಿಕ್ಕ ನಂಬರಿಗೆ ಕಾಲ್ ಮಾಡಿ ವಿಚಾರಿಸಿದಾಗ, ಅವರು ಹೇಮನಾರಾಯಣರವರ ಬ್ಯಾಂಕಿಗೆ ಸಂಬಂಧಪಟ್ಟ ವಿಷಯಗಳನ್ನು ಕೇಳಿದ್ದಾರೆ. ಇದಕ್ಕೆ ನಾರಾಯಣರವರು ಮಾಹಿತಿಯನ್ನು ನೀಡಿದ್ದಾರೆ. ಅಲ್ಲದೆ ಅವರ ಮೊಬೈಲಿಗೆ ಬಂದ ಓಟಿಪಿ ಸಹ ಹೇಳಿದ್ದಾರೆ. ಓಟಿಪಿ ಶೇರ್ ಆದ ತಕ್ಷಣ ನಾರಾಯಣ ಅವರ ಬ್ಯಾಂಕ್ ಖಾತೆಗೆ ಕನ್ನಹಾಕಿದ್ದ ಖದೀಮರು, ಅವರ ಖಾತೆಯಿಂದ ಸುಮಾರು ಎರಡು ಲಕ್ಷ ರೂಪಾಯಿಗಳನ್ನು ಎಗರಿಸಿದ್ದಾರೆ. ಇದನ್ನೂ ಓದಿ: ಸಿಂದಗಿ ಉಪ ಚುನಾವಣೆ; ಜಯದ ನಗೆ ಬೀರಿದ ಬಿಜೆಪಿ
Advertisement
Advertisement
ಹಣ ಕಟ್ ಆದ ಬಳಿಕ ಮತ್ತೆ ಆ ನಂಬರಿಗೆ ಕಾಲ್ ಮಾಡಿದಾಗ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ತಮಗೆ ಆದ ಆನ್ ಲೈನ್ ಮೋಸದ ಬಗ್ಗೆ ತಡವಾಗಿ ಅರಿತುಕೊಂಡ ನಾರಾಯಣ ಸೈಬರ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ನೀಟ್ ಪರೀಕ್ಷೆಯಲ್ಲಿ 384ನೇ ರ‍್ಯಾಂಕ್ ಪಡೆದ RLS ವಿದ್ಯಾರ್ಥಿ