ನವದೆಹಲಿ: ಆಪ್ ಮೂಲಕ ಬಳಕೆದಾರರನ್ನು ಟ್ರಾಕ್ ಹಾಗೂ ಅವರ ಮಾಹಿತಿ ಸೋರಿಕೆ ಮಾಡುತ್ತಿದ್ದ 7 ಆಪ್‍ಗಳನ್ನು ಗೋಗಲ್ ತನ್ನ ಪ್ಲೇ ಸ್ಟೋರ್ ನಿಂದ ತೆಗೆದು ಹಾಕಿದೆ.
ಈ ಆಪ್ ಗಳನ್ನು ಆಂಟಿ ವೈರಸ್ ಕಂಪನಿ ಅವಸ್ತ್ ವರದಿ ಮಾಡಿದ್ದು, ಈ ಸ್ಟಾಕರ್ ವೇರ್ ಆಪ್ ಗಳಿಂದ ಬಳಕೆದಾರರನ್ನು ಟ್ರ್ಯಾಕ್ ಮಾಡಲಾಗುತ್ತಿತ್ತು ಎಂದು ಕಂಪನಿ ಬ್ಲಾಗ್ ಪೋಸ್ಟ್ ನಲ್ಲಿ ತಿಳಿಸಿದೆ. ಈ ಅಪ್ಲಿಕೇಶನ್‍ಗಳ ಮೂಲಕ ಟ್ರ್ಯಾಕ್ ಮಾಡುವುದು ಮಾತ್ರವಲ್ಲದೆ, ಲೊಕೇಶನ್ ಡಾಟಾ, ಕಾಂಟ್ಯಾಕ್ಟ್ಸ್, ಕಾಲ್ ಲಾಗ್ಸ್ ಹಾಗೂ ಎಸ್‍ಎಂಎಸ್ ಮಾಹಿತಿಗಳನ್ನು ಕದಿಯುತ್ತಿದ್ದವು. ಇವು ರಷ್ಯನ್ ಅಭಿವೃದ್ಧಿಪಡಿಸಿರುವ ಆಪ್‍ಗಳಾಗಿವೆ ಎಂದು ಅವಸ್ತ್ ತಿಳಿಸಿದೆ.
Advertisement
Advertisement
ಈ ಎಲ್ಲ ಆಪ್‍ಗಳನ್ನು ಗೂಗಲ್ ತೆಗೆದು ಹಾಕಿದ್ದು ಒಂದು ವೇಳೆ ನಿಮ್ಮ ಆಂಡ್ರಾಯ್ಡ್ ಮೊಬೈಲ್‍ನಲ್ಲಿದೆಯೇ ಪರಿಶೀಲಿಸಿಕೊಳ್ಳಿ. ಇದ್ದಲ್ಲಿ ಕೂಡಲೇ ತೆಗೆದುಹಾಕಿ ಎಂದು ಗೂಗ್ಲ್ ಸೂಚಿಸಿದೆ. ಈ ಆಪ್‍ಗಳನ್ನು 1.30 ಲಕ್ಷ ಬಾರಿ ಇನ್‍ಸ್ಟಾಲ್ ಮಾಡಲಾಗಿದ್ದು, ಇದೀಗ ಸ್ನೂಪ್‍ಗಳ ಮೂಲಕ ಆ ಆಪ್‍ಗಳನ್ನು ಡೌನ್‍ಲೋಡ್ ಮಾಡಬಹುದಾಗಿದ್ದು, ಕೇವಲ ಉದ್ದೇಶಿತ ಮೊಬೈಲ್‍ಗಳಲ್ಲಿ ಮಾತ್ರ ಬಳಸಬಹುದಾಗಿದೆ.
Advertisement
Advertisement
ಹೇಗೆ ಮಾಹಿತಿ ಕದಿಯುತ್ತಾರೆ
ಆಪ್ ಇನ್‍ಸ್ಟಾಲ್ ಮಾಡಿಕೊಂಡ ತಕ್ಷಣ ಇ-ಮೇಲ್ ಅಡ್ರೆಸ್ ಹಾಗೂ ಪಾಸ್‍ವರ್ಡ್‍ಗಳನ್ನು ಕೇಳುತ್ತದೆ. ನೀವು ಲಾಗಿನ್ ಆಗುತ್ತಿದ್ದಂತೆ ನಿಮ್ಮ ಮೊಬೈಲ್‍ಗೆ ಬೇಹುಕಾರಿಕೆ ಅಪ್ಲಿಕೇಶನ್‍ನ್ನು ಕಳುಹಿಸಲಾಗುತ್ತದೆ. ಆದರೆ, ಈ ಅಪ್ಲಿಕೇಷನ್ ಐಕಾನ್ ಇಲ್ಲದಿರುವುದರಿಂದ ನಮಗೆ ಅಪ್ಲಿಕೇಷನ್ ಇನ್ಸ್‍ಟಾಲ್ ಆಗಿರುವ ಕುರಿತು ತಿಳಿಯುವುದಿಲ್ಲ. ಅಂದರೆ, ಇನ್ಸ್‍ಟಾಲ್ ಮಾಡಿದ ನಂತರ ಆ ಸಾಫ್ಟ್‍ವೇರ್ ನಿಮ್ಮ ಮೊಬೈಲ್‍ನಲ್ಲಿ ಇರುವ ಕುರಿತು ತಿಳಿಯುವುದಿಲ್ಲ. ಅದು ನಿಮ್ಮ ಮೊಬೈಲ್ ಹೊಕ್ಕ ನಂತರ ನಿಮ್ಮ ಎಲ್ಲ ಮಾಹಿತಿಯನ್ನು ಬೇರೆಲ್ಲೋ ಕೂತು ಕದಿಯುತ್ತಾರೆ.
ಹೀಗೆ ಪತ್ತೆ ಹಚ್ಚಿ, ಅನ್‍ಇನ್ಸ್ಟಾಲ್ ಮಾಡಿ
ನಿಮ್ಮ ಮೊಬೈಲ್‍ನಲ್ಲಿ ಸೆಟಿಂಗ್‍ನಲ್ಲಿರುವ ಆಪ್ ಸೆಟಿಂಗ್‍ನ್ನು ಕ್ಲಿಕ್ ಮಾಡಿ, ನಂತರ ಆಪ್ಸ್ ಆಂಡ್ ನೋಟಿಫಿಕೇಶನ್ ಕ್ಲಿಕ್ ಮಾಡಿ. ಈ ಸೆಕ್ಷನ್‍ಗೆ ವಿವಿಧ ಮೊಬೈಲ್‍ಗಳಲ್ಲಿ ಬೇರೆ ರೀತಿಯ ಹೆಸರುಗಳಿರುತ್ತವೆ. ಆದರೆ, ಸೆಟಿಂಗ್‍ನಲ್ಲಿ ನಿಮಗೆ ಎಲ್ಲಿ ನೋಟಿಫಿಕೇಷನ್ ಬರುತ್ತವೆಯೋ ಅದನ್ನು ನೀವು ಸಹಜವಾಗಿ ನಿಮ್ಮ ಮೊಬೈಲ್‍ನಲ್ಲಿ ಪತ್ತೆ ಹಚ್ಚಬಹುದು. ನಂತರ ಆ ಆಪ್‍ನ್ನು ನೀವು ಅನ್‍ಇನ್ಸ್ಟಾಲ್ ಮಾಡಬಹುದಾಗಿದೆ.