ನವದೆಹಲಿ: ಸ್ವಾತಂತ್ರ್ಯದ ನಂತರ 75 ವರ್ಷಗಳ ಪಯಣದಲ್ಲಿ ಭಾರತ ಸಾಧಿಸಿದ ಮೈಲಿಗಲ್ಲುಗಳನ್ನು ಸೆರೆಹಿಡಿಯುವ ಸಾಫ್ಟ್‌ವೇರ್ ಅನ್ನು ಗೂಗಲ್ ಅನಾವರಣಗೊಳಿಸಿದೆ.
ಈ ದೈತ್ಯ ಯೋಜನೆಗೆ ‘ಇಂಡಿಯಾ ಕಿ ಉಡಾನ್‘ ಎಂದು ಹೆಸರಿಸಲಾದ. ದೇಶದ ಕಥೆಯನ್ನು ಹೇಳಲು ಕಲಾತ್ಮಕ ಚಿತ್ರಣಗಳನ್ನು ಒಳಗೊಂಡಿದೆ. ಗೂಗಲ್ ಆರ್ಟ್ಸ್ ಮತ್ತು ಕಲ್ಚರ್ ಮೂಲಕ ಕಾರ್ಯಗತಗೊಳಿಸಿದ ಯೋಜನೆಯು ದೇಶದ ಸಾಧನೆಗಳನ್ನು ಆಚರಿಸುತ್ತದೆ. ಕಳೆದ 75 ವರ್ಷಗಳಲ್ಲಿ ಭಾರತ ಸಾಧಿಸಿದ ಮೈಲಿಗಲ್ಲುಗಳನ್ನು ಈ ಸಾಫ್ಟ್‌ವೇರ್ ಆಧರಿಸಿದೆ. ಇದನ್ನೂ ಓದಿ: ಪೈಪ್‍ಲೈನ್ ಅಡುಗೆ ಅನಿಲದ ಬೆಲೆ ಪ್ರತಿ ಯೂನಿಟ್‍ಗೆ 2.63 ರೂ. ಏರಿಕೆ
ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಜಿ.ಕಿಶನ್ ರೆಡ್ಡಿ, ಸಂಸ್ಕೃತಿ ಸಚಿವಾಲಯ ಮತ್ತು ಗೂಗಲ್‍ನ ಹಿರಿಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ಈ ಯೋಜನೆಯನ್ನು ಅಧಿಕೃತವಾಗಿ ಪ್ರಾರಂಭಿಸಲಾಯಿತು. ರಾಷ್ಟ್ರವ್ಯಾಪಿ ಆಚರಣೆಗಳ ಭಾಗವಾಗಿ ಗೂಗಲ್, ಸಂಸ್ಕೃತಿ ಸಚಿವಾಲಯದೊಂದಿಗಿನ ತನ್ನ ಸಹಯೋಗವನ್ನು ಘೋಷಿಸಿತು. ಭಾರತೀಯರ ಕೊಡುಗೆಗಳನ್ನು ಮತ್ತು 1947 ರಿಂದ ಭಾರತದ ವಿಕಾಸವನ್ನು ಪ್ರದರ್ಶಿಸುವ ಮಾಹಿತಿಯುಕ್ತ ವಿಷಯವನ್ನು ಆನ್‍ಲೈನ್ ಮೂಲಕ ತಲುಪಲು ಕೇಂದ್ರೀಕರಿಸಿದೆ.
2022ರ ಜನಪ್ರಿಯ Doodle4Google ಸ್ಪರ್ಧೆಯು ‘ಮುಂದಿನ 25 ವರ್ಷಗಳಲ್ಲಿ, ನನ್ನ ಭಾರತ’ ಎಂಬ ವಿಷಯದ ಕುರಿತು, 1-10 ತರಗತಿಗಳ ವಿದ್ಯಾರ್ಥಿಗಳಿಗೆ ಎಂಟ್ರೇಸ್ ವಿಷಯವಾಗಿ ನೀಡಲಾಗಿದೆ ಎಂದು ಘೋಷಿಸಿತು. ಇದನ್ನೂ ಓದಿ: ನನ್ನ ಪತ್ನಿ ಜೊತೆ ಮಾತನಾಡಬೇಡ ಅಂದಿದ್ದಕ್ಕೆ ಕ್ರಿಕೆಟ್ ಬ್ಯಾಟ್, ವಿಕೇಟ್‍ನಿಂದ ಹೊಡೆದು ಕೊಲೆಗೈದ್ರು
ಈ ವರ್ಷದ Doodle4Google ವಿಜೇತರು ನವೆಂಬರ್ 14 ರಂದು ಭಾರತದಲ್ಲಿನ Google ಮುಖಪುಟದಲ್ಲಿ ತಮ್ಮ ಕಲಾಕೃತಿಯನ್ನು ಪ್ರದರ್ಶನ ಮಾಡಲಾಗುವುದು. 5,00,000 ರೂ. ಕಾಲೇಜು ವಿದ್ಯಾರ್ಥಿವೇತನ, 2,00,000 ರೂ. ತಂತ್ರಜ್ಞಾನ ಪ್ಯಾಕೇಜ್ ಅನ್ನು ತಮ್ಮ ಶಾಲೆ/ಲಾಭರಹಿತ ಸಂಸ್ಥೆಗೆ, ಸಾಧನೆಯ ಗುರುತಿಸುವಿಕೆ, ಗೂಗಲ್ ಹಾರ್ಡ್‍ವೇರ್ ಮತ್ತು ಗೂಗಲ್ ಸಂಗ್ರಹಣೆಗಳನ್ನು ನೀಡಲಾಗುವುದು. ನಾಲ್ಕು ವಿಜೇತರು ಮತ್ತು 15 ಫೈನಲಿಸ್ಟ್‍ಗಳು ಅತ್ಯಾಕರ್ಷಕ ಬಹುಮಾನಗಳನ್ನು ಗೆಲ್ಲುತ್ತಾರೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.