ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ (Bengaluru) ಜನರಿಗೆ ಬಿಬಿಎಂಪಿಯ (BBMP) ಕಂದಾಯ ಸೇವೆಗಳು ದೊಡ್ಡ ತಲೆನೋವಾಗಿವೆ. ಖಾತೆ ಬದಲಾವಣೆ, ಆಸ್ತಿ ತೆರಿಗೆ ಪಾವತಿ, ಪಹಣಿ ಇವೆಲ್ಲ ಮಾಡಿಸೋದು ಕಷ್ಟಕರವಾಗಿದೆ. ಇದೀಗ ಬಿಬಿಎಂಪಿ ಇದನ್ನು ಸರಳೀಕರಣ ಮಾಡಲು ಮುಂದಾಗಿದೆ. ಈ ಬಾರಿಯ ಬಿಬಿಎಂಪಿ ಬಜೆಟ್‌ನಲ್ಲಿ ಕಂದಾಯ ಸೇವೆಗಳ (Revenue Service) ಸರಳೀಕರಣ ಘೋಷಣೆ ಆಗಲಿದೆ.
ಆಸ್ತಿ ತೆರಿಗೆ ಪಾವತಿಯನ್ನು (Property Tax Payment) ಆನ್‌ಲೈನ್‌ನಲ್ಲಿ ಮಾಡುವಂತೆ ಬಿಬಿಎಂಪಿ ಅವಕಾಶ ಮಾಡಿಕೊಟ್ಟಿದೆ. ಆನ್‌ಲೈನ್‌ನಲ್ಲಿ ಸಾರ್ವಜನಿಕರು ತಾಂತ್ರಿಕ ಸಮಸ್ಯೆಯನ್ನು ಕೂಡ ಎದುರಿಸುತ್ತಿದ್ದಾರೆ. ಹೀಗಾಗಿ ಬಿಬಿಎಂಪಿ ಇದೇ ಮೊದಲ ಬಾರಿಗೆ ಬೆಂಗಳೂರು ಒನ್‌ಗಳಲ್ಲಿ (Bengaluru One) ಆಸ್ತಿ ತೆರಿಗೆ ಪಾವತಿ ಮಾಡೋದಕ್ಕೆ ಅವಕಾಶ ಮಾಡಿಕೊಡುವ ಬಗ್ಗೆ ಚಿಂತನೆ ಮಾಡಿದ್ದು, ಬಜೆಟ್‌ನಲ್ಲಿ ಘೋಷಣೆ ಮಾಡಲು ಮುಂದಾಗಿದೆ. ಇದನ್ನೂ ಓದಿ: ರಾತ್ರೋರಾತ್ರಿ ಹನುಮ ಧ್ವಜ ತೆರವಿಗೆ ಅಧಿಕಾರಿಗಳ ಎಂಟ್ರಿ – ರೊಚ್ಚಿಗೆದ್ದ ಗ್ರಾಮಸ್ಥರು
Advertisement
Advertisement
ಬಿಬಿಎಂಪಿ ಬಜೆಟ್‌ಗೆ ಸಾರ್ವಜನಿಕರಿಂದ ಸಾಲು ಸಾಲು ಸಲಹೆಗಳು ಬರುತ್ತಿವೆ. ಅದರಲ್ಲೂ ಕಂದಾಯ ವಿಭಾಗಕ್ಕೆ ಹಲವು ಸಲಹೆಗಳು ಬಂದಿವೆ. ಖಾತೆ ಬದಲಾವಣೆ, ಹೊಸ ಖಾತೆ ಮಾಡಿಸಲು ಅರ್ಜಿ ಸಲ್ಲಿಕೆ, ಹೀಗೆ ಹಲವು ಕಂದಾಯ ಸೇವೆಗಳನ್ನು ಸರಳೀಕರಣ ಮಾಡಲು ಸಲಹೆ ಬಂದಿದೆ. ಹೀಗಾಗಿ ಈ ಬಾರಿ ಬಜೆಟ್‌ನಲ್ಲಿ ಹಲವಾರು ಕಂದಾಯ ಸೇವೆಗಳನ್ನು ಸರಳೀಕರಣ ಮಾಡಲಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: 6,000 ಕ್ವಿಂಟಾಲ್ ಪಡಿತರ ಅಕ್ಕಿ ಕಳ್ಳತನ ಕೇಸ್ – ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಸಹೋದರ ಅರೆಸ್ಟ್
Advertisement
ಯಾವೆಲ್ಲಾ ಕಂದಾಯ ಸೇವೆ ಸರಳೀಕರಣ ಆಗಲಿವೆ?
1. ಬೆಂಗಳೂರು ಒನ್‌ಗಳಲ್ಲಿ ಆಸ್ತಿ ತೆರಿಗೆ ಪಾವತಿ ಬಗ್ಗೆ ಬಜೆಟ್‌ನಲ್ಲಿ ಘೋಷಣೆ
2. ಆನ್‌ಲೈನ್‌ನಲ್ಲಿ ಖಾತೆ ಬದಲಾವಣೆ ಸೇವೆ
3. ಹೊಸ ಖಾತೆ ಮಾಡಿಸಲು ಅರ್ಜಿ ಸಲ್ಲಿಕೆ, ಖಾತೆ ಮಾಡಿಸಲು ಆನ್‌ಲೈನ್ ಸೇವೆ
4. ಡಿಜಿಟಲ್‌ನಲ್ಲಿ ಆಸ್ತಿ ಮ್ಯಾಪ್ ರೆಕಾರ್ಡಿಂಗ್ ಸೇವೆ
5. ಕಂದಾಯ ಸೇವೆಯನ್ನು ಡಿಜಿಟಲೀಕರಣ ಆಗಿ ಮಾರ್ಪಾಡು ಮಾಡುವುದು
Advertisement
ಒಟ್ಟಾರೆ ಕಂದಾಯ ಸೇವೆಗಳನ್ನು ಡಿಜಿಟಲೀಕರಣ ಮಾಡಿ ಜನರು ಕಚೇರಿಯಿಂದ ಕಚೇರಿಗೆ ಅಲೆಯೋದನ್ನು ತಪ್ಪಿಸಲು ಈ ಬಾರಿಯ ಬಿಬಿಎಂಪಿ ಬಜೆಟ್‌ನಲ್ಲಿ ಘೋಷಣೆ ಮಾಡಲು ಮುಂದಾಗಿದ್ದು, ಕಂದಾಯ ಸೇವೆಗಳಲ್ಲಿ ಏನೆಲ್ಲಾ ಬದಲಾವಣೆ ಆಗಲಿವೆ ಎಂದು ಕಾದು ನೋಡಬೇಕಿದೆ. ಇದನ್ನೂ ಓದಿ: ಚಿತ್ರದುರ್ಗದಲ್ಲಿಂದು ಶೋಷಿತ ಸಮುದಾಯಗಳ ಬೃಹತ್ ಸಮಾವೇಶ – 2 ಲಕ್ಷಕ್ಕೂ ಅಧಿಕ ಜನ ಭಾಗಿ ನಿರೀಕ್ಷೆ