ಅಡಿವಿ ಶೇಷ್ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ `ಗೂಢಾಚಾರಿ 2′ ಫಸ್ಟ್ ಲುಕ್ ರಿಲೀಸ್

Public TV
2 Min Read
adivishesh

ಟಾಲಿವುಡ್ (Tollywood) ಹೊಸ ದಾಖಲೆ ಬರೆದ ಸೂಪರ್ ಹಿಟ್ ಸಿನಿಮಾ `ಗೂಢಾಚಾರಿ’. ಅಡಿವಿ ಶೇಷ್ ನಟನೆಯಲ್ಲಿ ಮೂಡಿ ಬಂದ ಆ್ಯಕ್ಷನ್ ಅಂಡ್ ಥ್ರಿಲ್ಲರ್ ಸಬ್ಜೆಕ್ಟ್ ಒಳಗೊಂಡ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಗಳಿಕೆ ಕಂಡಿತ್ತು. ಇದೀಗ ಈ ಸೂಪರ್ ಹಿಟ್ ಸಿನಿಮಾದ ಸೀಕ್ವೆಲ್ ಮತ್ತೊಮ್ಮೆ ತೆರೆ ಮೇಲೆ ಕಮಾಲ್ ಮಾಡೋದು ಕನ್ಫರ್ಮ್ ಆಗಿದೆ. `ಗೂಢಾಚಾರಿ 2′ (Goodchari 2) ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದ್ದು ಜನವರಿ 9ರಂದು ಪ್ರಿ ವಿಷನ್ ವೀಡಿಯೋ ಬಿಡುಗಡೆಯಾಗುತ್ತಿದೆ.

)

View this post on Instagram

 

A post shared by Sesh Adivi (@adivisesh)

ಪ್ರತಿ ಬಾರಿ ವಿಭಿನ್ನ ಸಿನಿಮಾಗಳ ಮೂಲಕ ಪ್ರೇಕ್ಷಕರನ್ನು ಎದುರುಗೊಳ್ಳುವ ಅಡಿವಿ ಶೇಷ್ ತಮ್ಮದೇ ಆದ ಅಭಿಮಾನಿ ಬಳಗ ಹೊಂದಿದ್ದಾರೆ. `ಮೇಜರ್’ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಸೂಪರ್ ಸಕ್ಸಸ್ ಕಂಡಿದ್ದು, ಭಾರತದಾದ್ಯಂತ ಇವರ ಸಿನಿಮಾಗಳಿಗೆ ಅಭಿಮಾನಿಗಳಿದ್ದಾರೆ. ಶಶಿ ಕಿರಣ್ ಟಿಕ್ಕ ನಿರ್ದೇಶನದಲ್ಲಿ ಮೂಡಿ ಬಂದ ‘ಗೂಢಾಚಾರಿ’ ಸಿನಿಮಾ ತೆಲುಗು ಚಿತ್ರರಂಗದಲ್ಲಿ ಹೊಸ ಅಲೆ ಸೃಷ್ಟಿಸಿತ್ತು. ಇವರಿಬ್ಬರ ಕಾಂಬಿನೇಶನ್ ನಲ್ಲಿ ಬಂದ ಪ್ಯಾನ್ ಇಂಡಿಯಾ ಸಿನಿಮಾ ಮೇಜರ್ ಕೂಡ ಸೂಪರ್ ಸಕ್ಸಸ್ ಕಂಡಿದೆ. ಇತ್ತೀಚೆಗೆ ತೆರೆಕಂಡ ‘ಹಿಟ್ 2’ ಕೂಡ ಉತ್ತಮ ರೆಸ್ಪಾನ್ಸ್ ಪಡೆದುಕೊಂಡಿದ್ದು ಇದೀಗ ‘ಗೂಢಾಚಾರಿ’ ಸೀಕ್ವೆಲ್‌ಗೆ ರೆಡಿಯಾಗಿದ್ದಾರೆ ಅಡಿವಿ ಶೇಷ್. ಇದನ್ನೂ ಓದಿ: ನಟಿ ತುನಿಷಾ ಶರ್ಮಾ ಸಾವು ಪ್ರಕರಣ – ಆರೋಪಿ ಶಿಜಾನ್‌ ಖಾನ್‌ ಬೆಂಬಲಕ್ಕೆ ನಿಂತ ಊರ್ಫಿ

adivisesh

`ಗೂಢಾಚಾರಿ 2′ ಪ್ಯಾನ್ ಇಂಡಿಯಾ ಸಿನಿಮಾವಾಗಿ ಬಿಗ್ ಬಜೆಟ್ ನಲ್ಲಿ ನಿರ್ಮಾಣವಾಗುತ್ತಿದೆ. ವಿನಯ್ ಕುಮಾರ್ ಸಿರಿಗಿನೀದಿ ನಿರ್ದೇಶನ ಮಾಡಲಿದ್ದಾರೆ. ಚಿತ್ರಕ್ಕೆ ಅಡಿವಿ ಶೇಷ್ ಕಥೆ ಬರೆದಿದ್ದು, ಕಾರ್ತೀಕೇಯ 2, ಮೇಜರ್ ಹಾಗೂ ಕಾಶ್ಮೀರಿ ಫೈಲ್ಸ್ ನಂತ ಸೂಪರ್ ಹಿಟ್ ಸಿನಿಮಾ ನಿರ್ಮಾಣ ಮಾಡಿರೋ ದೊಡ್ಡ ನಿರ್ಮಾಣ ಸಂಸ್ಥೆಗಳು `ಗೂಢಾಚಾರಿ 2’ಗೆ ಬಂಡವಾಳ ಹೂಡುತ್ತಿವೆ. ಪೀಪಲ್ ಮೀಡಿಯಾ ಫ್ಯಾಕ್ಟರಿ, ಅಭಿಷೇಕ್ ಅಗರ್ವಾಲ್ ಆರ್ಟ್ಸ್ ಮತ್ತು ಎಕೆ ಎಂಟಟೈನ್ಮೆಂಟ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ಬ್ಯಾನರ್ ನಡಿ ಟಿಜಿ. ವಿಶ್ವಪ್ರಸಾದ್ ಮತ್ತು ಅಭಿಷೇಕ್ ಅಗರ್‌ವಾಲ್‌ ಜಂಟಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

adivisesh

ಫಸ್ಟ್ ಲುಕ್ ಬಿಡುಗಡೆ ಮಾಡಿರುವ ಚಿತ್ರತಂಡ ಜನವರಿ 9ರಂದು ಡೆಲ್ಲಿ ಹಾಗೂ ಮುಂಬೈನಲ್ಲಿ ಚಿತ್ರದ ಪ್ರಿ ವಿಷನ್ ವೀಡಿಯೋ ಬಿಡುಗಡೆ ಮಾಡಲು ತಯಾರಿ ಮಾಡಿಕೊಂಡಿದೆ. ಮೊದಲ ಸೀಕ್ವೆಲ್ ನಲ್ಲಿದ್ದ ಕಲಾವಿದರ ಜೊತೆಗೆ ಒಂದಿಷ್ಟು ಹೊಸ ಪಾತ್ರವರ್ಗ ಚಿತ್ರತಂಡವನ್ನು ಸೇರಿಕೊಳ್ಳಲಿದ್ದು, ಕಥೆಗೆ ತಕ್ಕಂತೆ ಸಿನಿಮಾ ಮೇಕಿಂಗ್, ತಾಂತ್ರಿಕ ವರ್ಗ, ಆ್ಯಕ್ಷನ್ ಸೀನ್‌ಗಳು ದೊಡ್ಡ ಮಟ್ಟದಲ್ಲಿ ಮೂಡಿ ಬರಲಿದೆ ಎಂದು ಚಿತ್ರತಂಡ ತಿಳಿಸಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *