– ಕೆಲವೆಡೆ ಮಳೆಯ ಅವಾಂತರ
ಕೋಲಾರ: ಕೋಲಾರ (Kolar) ಜಿಲ್ಲೆಯಲ್ಲಿಂದು ಹಲವೆಡೆ ಉತ್ತಮ ಮಳೆಯಾಗಿದ್ದು, ಮಳೆಯಿಂದ (Rain) ಕೆಲವು ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗಿ, ಮತ್ತೆ ಕೆಲವೆಡೆ ಅವಾಂತರ ಸೃಷ್ಠಿಯಾಗಿದೆ.
ಹೌದು, ಕೋಲಾರ ಜಿಲ್ಲೆಯಾದ್ಯಂತ ಮಧ್ಯಾಹ್ನದ ನಂತರ ಉತ್ತಮ ಮಳೆಯಾಗಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಕಳೆದ 2 ತಿಂಗಳಿನಿಂದ ಉತ್ತಮ ಮಳೆಯಿಲ್ಲದೆ ರೈತರು (Farmers) ಕಂಗಾಲಾಗಿದ್ದು, ಮಳೆಯಿಲ್ಲದೆ ಕೃಷಿ ಚಟುವಟಿಕೆಗಳು ಕುಂಠಿತವಾಗಿತ್ತು. ಸದ್ಯ ಕೋಲಾರ ಜಿಲ್ಲೆಯ ಹಲವೆಡೆ ಉತ್ತಮ ಮಳೆಯಾಗುವ ಮೂಲಕ ಜಿಲ್ಲೆಯಲ್ಲಿ ಭಿತ್ತನೆ ಕಾರ್ಯ ಹೆಚ್ಚಾಗುವ ನಿರೀಕ್ಷೆ ಹೆಚ್ಚಾಗಿದೆ. ಅಲ್ಲದೇ ಮುಂಗಾರು ಹಂಗಾಮಿನಲ್ಲಿ ಮಳೆ ಕೈಕೊಟ್ಟಿದ್ದು, ಹಲವು ದಿನಗಳಿಂದ ಬಿಸಿಲಿನ ತಾಪಕ್ಕೆ ಜನರು ಬಳಲಿ ಬೆಂಡಾಗಿದ್ದರು. ಇದನ್ನೂ ಓದಿ: ವಿಶ್ವವಿಖ್ಯಾತ ಮೈಸೂರು ದಸರಾಗೆ ಮೊದಲ ಹಂತದ ಗಜಪಯಣಕ್ಕೆ ಚಾಲನೆ
ಹಲವು ದಿನಗಳಿಂದ ಮಳೆಯಿಲ್ಲದೆ ಸೊರಗಿದ್ದ ರೈತರಿಗೆ ಸದ್ಯ ಮಳೆಯಿಂದ ರಾಗಿ ಮತ್ತು ದ್ವಿದಳ ಧ್ಯಾನಗಳ ಬಿತ್ತನೆಗೆ ಅನುಕೂಲವಾಗಿದೆ. ಇನ್ನೂ ಹಲವೆಡೆ ಮಳೆ ನೀರು ನುಗ್ಗಿದ ಪರಿಣಾಮ ತಗ್ಗು ಪ್ರದೇಶಗಳು ಜಲಾವೃತಗೊಂಡಿದೆ. ಅಲ್ಲದೇ ಬೃಹತ್ ಮರ ಬಿದ್ದು ಮೂರು ಬೈಕ್‌ಗಳು ಜಖಂ ಆದ ಘಟನೆ ಕೂಡ ನಡೆದಿದೆ. ಕೋಲಾರದ ಎಸ್‌ಎನ್‌ಆರ್ ಆಸ್ಪತ್ರೆಯ ಆವರಣದಲ್ಲಿ ಮಳೆ ಮತ್ತು ಜೋರಾಗಿ ಗಾಳಿ ಬೀಸಿದ ಪರಿಣಾಮ ಬೃಹತ್ ಮರ ಉರುಳಿ ಬಿದ್ದಿದೆ. ಇದನ್ನೂ ಓದಿ: ತುಮಕೂರಲ್ಲಿ 19 ನವಿಲುಗಳ ಸಾವು – ತನಿಖೆಗೆ ಈಶ್ವರ್ ಖಂಡ್ರೆ ಆದೇಶ
ಅದೃಷ್ಟವಶಾತ್ ಯಾವುದೇ ಪ್ರಾಣಪಯ ಸಂಭವಿಸಿಲ್ಲವಾದರೂ ಮರ ಬಿದ್ದ ಪರಿಣಾಮ ಮೂರು ಬೈಕ್‌ಗಳು ಸಂಪೂರ್ಣ ಜಖಂ ಆಗಿದೆ. ಕೋಲಾರ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಹಲವೆಡೆ ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಯಾದ್ರೆ, ರಸ್ತೆಗಳೆಲ್ಲಾ ಜಲಾವೃತಗೊಂಡಿದೆ. ಇದನ್ನೂ ಓದಿ: ನೇಹಾ ಹತ್ಯೆ ಕೇಸ್ – ಆರೋಪಿ ಫಯಾಜ್ ಜಾಮೀನು ಅರ್ಜಿ ವಜಾ
ಇನ್ನೂ ಗಡಿ ಜಿಲ್ಲೆ ಬೀದರ್‌ನಲ್ಲಿ ಗುಡುಗು, ಸಿಡಿಲು ಸಹಿತ ಧಾರಾಕಾರ ಮಳೆಯಾಗುತ್ತಿದೆ. ಸತತ ಒಂದು ಗಂಟೆಯಿಂದ ಬೀದರ್, ಕಮಲಾನಗರ, ಹುಮ್ನಾಬಾದ್, ಬಸವಕಲ್ಯಾಣ ಸೇರಿದಂತೆ ಜಿಲ್ಲೆಯಾದ್ಯಂತ ವರುಣ ಅಬ್ಬರಿಸುತ್ತಿದ್ದಾನೆ. ಭಾರೀ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.