ಬೆಂಗಳೂರು: ದುಬಾರಿಯಾಗಿ ಬಲು ಭಾರವಾಗಿದ್ದ ಚಿನ್ನದ ದರ ಈಗ ಕೊಂಚ ಇಳಿಕೆಯಾಗಿ ರಿಲೀಫ್ ಮೂಡಿಸಿದೆ. ಕಳೆದ ಮೂರು ದಿನದಲ್ಲಿ ಬರೋಬ್ಬರಿ 2,000 ರೂ. ಏರಿಕೆಯಾಗಿದ್ದ ಚಿನ್ನ ಇಂದು ಏಕಾಏಕಿ ಹತ್ತು ಗ್ರಾಂಗೆ 1200 ರೂ ಕುಸಿತ ಕಂಡಿದೆ.
Advertisement
24 ಕ್ಯಾರೆಟ್ ಚಿನ್ನದ ಹಿಂದಿನ ದರ 31,900 ರೂ. ಆಗಿತ್ತು. ಆದರೆ ಇಂದು 1,270 ರೂ. ಕಡಿಮೆಯಾಗಿ 30,630 ರೂ. ಆಗಿದೆ. 22 ಕ್ಯಾರೆಟ್ ಚಿನ್ನದ ಹಿಂದಿನ ದರ 28,750 ರೂ. ಆಗಿತ್ತು. ಆದರೆ ಈಗ 300 ರೂ. ಕಡಿಮೆಯಾಗಿದ್ದು 28,450 ರೂ. ಆಗಿದೆ.
Advertisement
Advertisement
ಸಪ್ಟೆಂಬರ್ 8 ರಂದು ಒಂದೇ ದಿನ 990 ರೂ. ಏರಿಕೆಯಾಗಿತ್ತು. ಇದರಿಂದಾಗಿ 10 ಗ್ರಾಂ ಚಿನ್ನದ ಬೆಲೆ 31,350 ರೂ.ಗಳಿಗೆ ನೆಗೆದಿತ್ತು. ಈ ಬೆಲೆ ಕಳೆದ ಒಂದು ವರ್ಷಕ್ಕೂ ಮೀರಿದ ಅವಧಿಯಲ್ಲಿ ಚಿನ್ನ ಕಂಡಿರುವ ಗರಿಷ್ಠ ಏರಿಕೆ ಎಂದು ಮಾಧ್ಯಮಗಳು ವರದಿ ಮಾಡಿತ್ತು.
Advertisement
ಇದನ್ನೂ ಓದಿ: 2.5 ಲಕ್ಷದ ಚಿನ್ನದ ಸರ ಕದ್ದು ಮತ್ತೊಂದು ಅಂಗಡಿಯಲ್ಲಿ ಬಟ್ಟೆ ಎಗರಿಸಿದ್ರು: ಕಾರ್ಕಳ ಕಳ್ಳಿಯರ ಕೈ ಚಳಕ ವಿಡಿಯೋ ನೋಡಿ
ಉತ್ತರ ಕೊರಿಯ ತನ್ನ ಪರಮಾಣು ಶಕ್ತಿಯ ದುಸ್ಸಾಹಸದ ಪ್ರದರ್ಶನಕ್ಕೆ ಇಳಿದಿದ್ದು ಮತ್ತು ಅಮೆರಿಕದಲ್ಲಿ ಉದ್ಯೋಗ ಅಂಕಿ ಅಂಶಗಳು ನಿರೀಕ್ಷೆಗಿಂತ ದುರ್ಬಲವಾಗಿ ದಾಖಲಾಗಿದ್ದ ಹಿನ್ನೆಲೆಯಲ್ಲಿ ಚಿನ್ನದ ದರ ಭಾರೀ ಏರಿಕೆಯಾಗಿತ್ತು.
ಇದನ್ನೂ ಓದಿ: ಗಂಡನ ಬಳಿಯೇ 1 ಕೆಜಿ ಚಿನ್ನಾಭರಣ ಕದ್ದ ಖತರ್ನಾಕ್ ಹೆಂಡತಿ ಅರೆಸ್ಟ್