ಬೆಂಗಳೂರು: ಪೊಲೀಸ್ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್. ಆಕಾಂಕ್ಷಿಗಳ ಮನವಿಗೆ ಸ್ಪಂದಿಸಿರುವ ರಾಜ್ಯ ಸರ್ಕಾರ, ಪೊಲೀಸ್ ಪೇದೆಗಳ(Police Constable) ನೇಮಕಾತಿಯಲ್ಲಿ ಎರಡು ವರ್ಷ ವಯೋಮಿತಿ ಸಡಿಲಿಸಿ(Age Limit Relaxed) ಆದೇಶ ಹೊರಡಿಸಿದೆ.
ಮುಂಚೆ ಎಸ್‍ಸಿ, ಎಸ್‍ಟಿ 27 ವರ್ಷ ವಯೋಮಿತಿ ಇತ್ತು. ಇವಾಗ 29 ವರ್ಷಕ್ಕೆ ಏರಿಕೆ ಮಾಡಲಾಗಿದೆ. ಸಾಮಾನ್ಯ ವರ್ಗದವರಿಗೆ ವಯೋಮಿತಿಯನ್ನು 25 ರಿಂದ 27 ವರ್ಷಕ್ಕೆ ಹೆಚ್ಚಿಸಲಾಗಿದೆ. ಬುಡಕಟ್ಟು ಜನಾಂಗದವರ ವಯೋಮಿತಿಯನ್ನು 32 ವರ್ಷಕ್ಕೆ ಹೆಚ್ಚಿಸಲಾಗಿದೆ. ಇದನ್ನೂ ಓದಿ: ಶವ ಅಂತ ಹೇಳ್ಬೇಡಿ ಚಂದ್ರು ಅಂತ ಕರೆಯಿರಿ- ಗೋಳಾಡಿದ ರೇಣುಕಾಚಾರ್ಯ
Advertisement
Advertisement
ಅರ್ಜಿ ಸಲ್ಲಿಸಲು ಕೊನೆಯ ದಿನವನ್ನು ನವೆಂಬರ್ 30ರವರೆಗೆ ಸರ್ಕಾರ ವಿಸ್ತರಿಸಿದೆ. ಈ ವರ್ಷ ರಾಜ್ಯ ಸರ್ಕಾರ, 5 ಸಾವಿರ ಪೋಲಿಸ್ ಕಾನ್‌ಸ್ಟೇಬಲ್ ನೇಮಕಾತಿಗೆ ಮುಂದಾಗಿದೆ.
Advertisement
ಕನ್ನಡರಾಜ್ಯೋತ್ಸವದ ದಿನ ತುಮಕೂರಿನಲ್ಲಿ ಪೊಲೀಸ್ ಆಕಾಂಕ್ಷಿಗಳು ಗೃಹ ಸಚಿವ ಆರಗ ಜ್ಞಾನೇಂದ್ರ ಕಾಲಿಗೆ ಬಿದ್ದು, ವಿಯೋಮಿತಿ ಸಡಿಲಿಸುವಂತೆ ಕಣ್ಣೀರು ಇಟ್ಟಿದ್ದರು.