ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿನ ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿ. ಬೈಯಪ್ಪನಹಳ್ಳಿ ಮತ್ತು ಮೈಸೂರು ರಸ್ತೆ ನಡುವೆ 6 ಬೋಗಿಗಳ ಹೊಸ ರೈಲು ಇಂದಿನಿಂದ ಸಂಚಾರ ಆರಂಭಿಸಲಿದೆ.
ನೇರಳೆ ಮಾರ್ಗದಲ್ಲಿ ಓಡಾಡೋ ಮೂರು ಬೋಗಿಗಳ ರೈಲಿಗೆ ಹೊಸದಾಗಿ ಖರೀದಿಸಿರೋ ಮೂರು ಬೋಗಿಗಳನ್ನು ಜೋಡಿಸಲಾಗಿದೆ. ಇಂದು ಸಂಜೆ 5.30ಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ಚಾಲನೆ ಕೊಡ್ತಾರೆ.
ಉದ್ಘಾಟನೆ ಹಿನ್ನೆಲೆಯಲ್ಲಿ ಈ ರೈಲು ಮೆಜೆಸ್ಟಿಕ್‍ವರೆಗೆ ಪ್ರಯಾಣ ಬೆಳೆಸಲಿದ್ದು, ಅದರಲ್ಲೇ ಕುಮಾರಸ್ವಾಮಿ ವಿಧಾನಸೌಧದವರೆಗೂ ಹೋಗ್ತಾರೆ. ರೈಲಿನ ಮೊದಲ ಬೋಗಿಯನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ.
ಸಾರಿಗೆ ಸಾಮರ್ಥ್ಯ ಹೆಚ್ಚಳ ಹಿನ್ನೆಲೆ, ಮೆಟ್ರೋ ರೈಲಿಗೆ ಹೆಚ್ಚುವರಿ 6 ಬೋಗಿ ಅಳವಡಿಕೆ ಮಾಡಲಾಗಿದೆ.