ಬೆಂಗಳೂರು: ನಗರದಲ್ಲಿ ಪ್ರಯಾಣಿಸಲು ಮೆಟ್ರೋ ಸೇವೆಯನ್ನೇ ನೆಚ್ಚಿಕೊಂಡಿರುವ ಮಂದಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಇದುವರೆಗೂ 3 ನಿಮಿಷಕ್ಕೊಂದರಂತೆ ಓಡಾಟ ನಡೆಸುತ್ತಿದ್ದ ಟ್ರೈನ್ ಅವಧಿಯನ್ನು ಬದಲಾಯಿಸಿ ಮೆಟ್ರೋ 2 ನಿಮಿಷಕ್ಕೆ ಇಳಿಕೆ ಮಾಡಲಾಗಿದೆ.
ಇಂದು ನಡೆದ ಮೆಟ್ರೊ ಅಧಿಕಾರಿಗಳ ಸಭೆಯಲ್ಲಿ ಈ ನಿರ್ಣಯವನ್ನು ಕೈಗೊಳ್ಳಲಾಗಿದ್ದು, ಉಪ ಮುಖ್ಯಮಂತ್ರಿ ಪರಮೇಶ್ವರ್ ಅವರು ಮೆಟ್ರೋ ಸಂಚಾರ ನಡುವಿನ ಈಗಿನ ಅವಧಿಯನ್ನು 2 ನಿಮಿಷಕ್ಕೆ ಇಳಿಕೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
Advertisement
Advertisement
ಬಿಎಂಆರ್ ಸಿಎಲ್ ಎಂಡಿ ಅಜಯ್ ಸೇಠ್ ನಮ್ಮ ಮೆಟ್ರೋ ಉಸ್ತುವಾರಿ ತೆಗೆದುಕೊಂಡ ಬಳಿಕ ಮೊದಲ ಸಭೆ ನಡೆಸಲಾಗಿದ್ದು, ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು. ಡಿಸಿಎಂ ಪರಮೇಶ್ವರ್ ಅವರಿಗೆ ಮೆಟ್ರೋದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ ಅಧಿಕಾರಿಗಳು, ಮೆಟ್ರೋದ ಪ್ರಗತಿಯಲ್ಲಿರುವ ಕಾಮಗಾರಿ, ಆದಾಯ, ಹೊಸ ಮಾರ್ಗಗಳು ಸೇರಿದಂತೆ ಪ್ರಗತಿ ಕಾರ್ಯಗಳ ಕುರಿತು ಮಾಹಿತಿ ನೀಡಿದ್ದಾರೆ.
Advertisement
ನಿತ್ಯದ ಟ್ರಾಫಿಕ್ ನಿಯಂತ್ರಣಕ್ಕೆ ಮೆಟ್ರೋ ರೈಲು ಅವಲಂಬನೆ ಅತ್ಯಂತ ಅವಶ್ಯಕ. ನಿತ್ಯ 5 ಲಕ್ಷ ಪ್ರಯಾಣಿಕರು ಮೆಟ್ರೋ ಬಳಕೆ ಮಾಡುತ್ತಿದ್ದಾರೆ. ಎರಡನೇ ಹಂತದ ಮೆಟ್ರೋ ಕಾಮಗಾರಿ 2020 ರ ಅವಧಿಗೆ ಪೂರ್ಣಗೊಂಡು ಇನ್ನಷ್ಟು ಜನಸೇವೆಗೆ ತೆರೆದುಕೊಳ್ಳಲಿದೆ. ಇಂದು ಬಿಎಂಆರ್‌ಸಿಎಲ್ ಹಿರಿಯ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದೆ pic.twitter.com/jHD94EpLwe
— Dr. G Parameshwara (@DrParameshwara) October 26, 2018
Advertisement
ಸಭೆಯಲ್ಲಿ ಮೆಟ್ರೋ ವೆಚ್ಚಕ್ಕೆ ಕಡಿವಾಣ ಹಾಕುವ ಕುರಿತು ಕೂಡ ಚರ್ಚೆ ನಡೆಸಲಾಗಿದ್ದು, ಆದಾಯಕ್ಕಿಂತ ಖರ್ಚು ಹೆಚ್ಚಾಗುತ್ತಿರುವ ಹಿನ್ನಲೆ ಖರ್ಚು ಕಡಿಮೆ ಮಾಡುವಂತೆ ಅಧಿಕಾರಿಗಳಿಗೆ ಸುಚನೆ ನೀಡಿದ್ದಾರೆ. ಸದ್ಯ ನಮ್ಮ ಮೆಟ್ರೋ ಆದಾಯ ಪ್ರತಿ ತಿಂಗಳು ಸರಾಸರಿ 30 ಕೋಟಿ ಬರುತ್ತಿದ್ದು, ಖರ್ಚು 35 ಕೋಟಿ ರೂ. ಆಗುತ್ತಿದೆ ಎಂಬ ಮಾಹಿತಿ ಲಭಿಸಿದೆ. ಅಲ್ಲದೇ ಪ್ರತಿ ತಿಂಗಳು 10 ಕೋಟಿ ಉಳಿತಾಯ ಮಾಡುವತ್ತ ಹೆಚ್ಚಿನ ಒತ್ತು ನೀಡಲು ಸಭೆಯಲ್ಲಿ ಸೂಚನೆ ನೀಡಲಾಗಿದೆ.
ಪ್ರಸ್ತುತ ಬೆಳಗ್ಗೆ 8 ರಿಂದ 11 ಗಂಟೆಯವರೆಗೆ ಸಂಜೆ 5 ರಿಂದ ರಾತ್ರಿ 8 ಗಂಟೆಯವರೆಗೆ ಪ್ರತಿ ಮೂರು ನಿಮಿಷಕ್ಕೆ ಒಂದರಂತೆ ರೈಲು ಸಂಚರಿಸುತ್ತದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv