ಬೆಂಗಳೂರು: ಗೃಹಲಕ್ಷ್ಮಿಯರಿಗೆ ರಾಜ್ಯ ಸರ್ಕಾರ ಗುಡ್‌ನ್ಯೂಸ್ ಕೊಟ್ಟಿದೆ. ಇನ್ಮುಂದೆ ಮಹಿಳೆಯರು 30,000ದಿಂದ 3 ಲಕ್ಷದವರೆಗೆ ವೈಯಕ್ತಿಕ ಲೋನ್ (Personal Loan) ಪಡೆಯಬಹುದು ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ತಿಳಿಸಿದ್ದಾರೆ.
ಇದನ್ನು ಆರು ಲಕ್ಷಕ್ಕೆ ಹೆಚ್ಚಿಸಲು ಲಕ್ಷ್ಮಿ ಹೆಬ್ಬಾಳ್ಕರ್ ಬ್ಯಾಂಕ್‌ಗಳಿಗೆ ಮನವಿ ಮಾಡಿದ್ದಾರೆ. ಮೊದಲು ರಿಜಿಸ್ಟ್ರೇಷನ್ ಮಾಡಿಕೊಂಡವರಿಗೆ ಲೋನ್ ಭಾಗ್ಯ ಸಿಗಲಿದೆ. ರಾಷ್ಟ್ರೀಕೃತ ಬ್ಯಾಂಕುಗಳ ಬಡ್ಡಿ ದರದ ಅನ್ವಯ ಕಡಿಮೆ ದಾಖಲೆಯಲ್ಲಿ ಲೋನ್ ಸಿಗಲಿದೆ. ಇದನ್ನೂ ಓದಿ: ಭಾರತಕ್ಕಿಂದು ಪುಟಿನ್ ಭೇಟಿ – ಸುಖೋಯ್ Su-57, S-400, S-500 ಖರೀದಿಗೆ ಬಿಗ್ ಡೀಲ್ ಸಾಧ್ಯತೆ
ಕೇವಲ ಆರು ತಿಂಗಳಲ್ಲಿ ವೈಯಕ್ತಿಕ ಲೋನ್ ಸಿಗಲಿದೆ. ತಿಂಗಳಿಗೆ 200 ರೂ.ನಂತೆ ಆರು ತಿಂಗಳು ದುಡ್ಡು ಕಟ್ಟಿದರೆ ಸದಸ್ಯತ್ವ ಸಿಗಲಿದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ. ಇದನ್ನೂ ಓದಿ: ಮುದ್ದಾದ ಮಕ್ಕಳೇ ಇವಳ ಟಾರ್ಗೆಟ್; 2 ವರ್ಷದಲ್ಲಿ ನಾಲ್ಕು ಮಕ್ಕಳ ಕೊಲೆ – ‘ಬ್ಯೂಟಿ ಮರ್ಡರ್’ ಮಿಸ್ಟ್ರಿ ಏನು?

