ಬೆಂಗಳೂರು: ಸತತ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದ ಬಂಗಾರ ಪ್ರಿಯರಿಗೆ (Gold Lover) ಗುಡ್ ನ್ಯೂಸ್ ಸಿಕ್ಕಿದೆ. ಇರಾನ್ – ಇಸ್ರೇಲ್ ಯುದ್ಧ ಕಾರ್ಮೋಡ ಸರಿದ ಬಳಿಕ ಚಿನ್ನ-ಬೆಳ್ಳಿ (Gold Silver) ದರ ಇಳಿಕೆಯತ್ತ ಮುಖ ಮಾಡಿದೆ.
ಇರಾನ್ – ಇಸ್ರೇಲ್ (Iran Israel) ಸಂಘರ್ಷದ ಕಾರ್ಮೋಡ ಸರಿದ ಬೆನ್ನಲ್ಲೇ, ದೇಶದಲ್ಲಿ ಚಿನ್ನ ಬೆಳ್ಳಿ ದರ ಭಾರೀ ಇಳಿಕೆ ಕಂಡಿದೆ. ಕಳೆದ ಒಂದು ವಾರದಲ್ಲಿ ಚಿನ್ನ 10 ಗ್ರಾಂ ಗೆ 5 ಸಾವಿರ ರೂ. ನಷ್ಟು ಇಳಿಕೆಯಾಗಿದೆ. 24 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ ಇಂದು 14,030 ರೂ. ಇದೆ. ಇನ್ನೂ 22 ಕ್ಯಾರೆಟ್ ಬೆಲೆ ಗ್ರಾಂ ಗೆ ಇಂದು 12,845 ರೂ. ಇದೆ.

ಎಷ್ಟಿದೆ ಬಂಗಾರದ ಬೆಲೆ…?
24 ಕ್ಯಾರಟ್ ಚಿನ್ನದ ಬೆಲೆ 10 ಗ್ರಾಂ ಗೆ
ನಿನ್ನೆ – 1,42, 910 ರೂ.
ಇಂದು – 1,40,130 ರೂ.
ವ್ಯತ್ಯಸ – 2,780 ರೂ.
22 ಕ್ಯಾರಟ್ ಚಿನ್ನ ಬೆಲೆ 10 ಗ್ರಾಂ ಗೆ
ನಿನ್ನೆ – 1,31,000 ರೂ.
ಇಂದು – 1,28,450 ರೂ.
ವ್ಯತ್ಯಾಸ – 2,550 ರೂ.

ಕಳೆದ ಒಂದು ವಾರದಲ್ಲಿ ಚಿನ್ನದ ಬೆಲೆ ಇಳಿಕೆ ಎಷ್ಟಾಗಿದೆ?
ದಿನಾಂಕ – 24 ಕ್ಯಾರೆಟ್ – 22 ಕ್ಯಾರೆಟ್.
– ಜೂನ್ 20 : 14,608 ರೂ. – 13,390 ರೂ.
– ಜೂನ್ 21 : 14,608 ರೂ. – 13,390 ರೂ.
– ಜೂನ್ 22: 14,798 ರೂ. – 13,565 ರೂ.
– ಜೂನ್ 23: 14,460 ರೂ. – 13,255 ರೂ.
– ಜೂನ್ 24 : 14,291 ರೂ. – 13,100 ರೂ.
– ಜೂನ್ 25 : 14,013 ರೂ. – 12,846 ರೂ.
ಇನ್ನೂ ಬೆಳ್ಳಿ ದರದಲ್ಲೂ ಇಳಿಕೆಯ ನಾಗಲೋಟ ಮುಂದುವರಿದಿದೆ. ಕಳೆದೊಂದು ವಾರದಲ್ಲಿ ಕೆಜಿ ಬೆಳ್ಳಿಗೆ 15 ಸಾವಿರ ರೂ.ಗಳಷ್ಟು ಇಳಿಕೆಯಾಗಿದೆ. ಕೆಜಿ ಬೆಳ್ಳಿಗೆ 2 ಲಕ್ಷದ 35 ಸಾವಿರ ಇದ್ದು, ಇಂದು ಒಂದೇ ದಿನ 10 ಸಾವಿರ ಇಳಿಕೆಯಾಗಿದೆ.
ಕಳೆದು ಒಂದು ವಾರದ ಬೆಳ್ಳಿ ದರದ ಅಂಕಿ ಅಂಶ.
ದಿನಾಂಕ – ದರ ಪ್ರತಿ ಕೆಜಿಗೆ.
– ಜೂನ್ 21 – 2,50,000 ರೂ.
– ಜೂನ್ 22 – 2,50,000 ರೂ.
– ಜೂನ್ 23- 2,45,000 ರೂ.
– ಜೂನ್ 24 – 2,45,000 ರೂ.
– ಜೂನ್ 25 – 2,35,000 ರೂ.
