ನವದೆಹಲಿ: ಕಳೆದ ಒಂದೆರಡು ವರ್ಷದಿಂದ ಯದ್ವಾತದ್ವಾ ಏರಿಕೆ ಕಾಣುತ್ತಿದ್ದ, ಚಿನ್ನ, ಬೆಳ್ಳಿ (Silver) ನಾಗಾಲೋಟಕ್ಕೆ ಬ್ರೇಕ್ ಬೀಳೋ ಸಾಧ್ಯತೆ ಹೆಚ್ಚಾಗಿದೆ. ಮೊನ್ನೆ ಒಂದೇ ದಿನ ಚಿನ್ನ (Gold), ಬೆಳ್ಳಿ ದರದಲ್ಲಿ ಭಾರೀ ಇಳಿಕೆಯಾಗಿದ್ದು (Price Down), ಮದುವೆ ಸೀಸನ್‌ನಲ್ಲಿ ಗುಡ್‌ನ್ಯೂಸ್ ಸಿಕ್ಕಿದೆ.
ದಿನದಿಂದ ದಿನಕ್ಕೆ ಏರುಪೇರಾಗುತ್ತಿರೋ ಚಿನ್ನ, ಬೆಳ್ಳಿ ಬೆಲೆಗಳು, ಬಡ ಹಾಗೂ ಮಧ್ಯಮ ವರ್ಗದವರ ಪಾಲಿನ ಗಗನಕುಸುಮವಾಗಿವೆ. ಈಗಾಗಲೇ 1.5 ಲಕ್ಷ ರೂ. ಗಡಿಯನ್ನು ಬಂಗಾರ ದಾಟಿದ್ರೇ, ಮೂರು ಕಾಲು ಲಕ್ಷದ ಗಡಿಯನ್ನು ಬೆಳ್ಳಿ ದಾಟಿದೆ. ಈ ಹಿನ್ನೆಲೆ ಸಿಕ್ಕಾಪಟ್ಟೆ ಏರುತ್ತಿರುವ ಬೆಳ್ಳಿ, ಬಂಗಾರ ಬೆಲೆ ಮತ್ತೆ ಇಳಿಕೆ ಆಗುತ್ತಾ ಅಂತಾ ಆಭರಣ ಪ್ರಿಯರು ಚಾತಕಪಕ್ಷಿಯಂತೆ ಕಾಯುತ್ತಿದ್ರು. ಈ ಬೆನ್ನಲ್ಲೇ ಮೊನ್ನೆ ಒಂದೇ ದಿನ ಚಿನ್ನದ ಬೆಲೆ ಒಂದು ಗ್ರಾಂಗೆ 200-250 ರೂ. ಇಳಿಕೆಯಾಗಿದೆ. ಹಾಗೆ ಬೆಳ್ಳಿ ಪ್ರತಿ ಕೆ.ಜಿಗೆ 5 ಸಾವಿರ ರೂ. ಇಳಿಕೆಯಾಗಿದೆ. ಇದು ಆಭರಣ ಪ್ರಿಯರಲ್ಲಿ ಹೊಸ ಭರವಸೆ ಹುಟ್ಟಿಸಿದೆ. ಈ ಮೂಲಕ ಚಿನ್ನ ಹಾಗೂ ಬೆಳ್ಳಿ ಇಳಿಕೆಯ ಹಾದಿ ಹಿಡಿಯಬಹುದೆಂದು ತಜ್ಞರು ಅಂದಾಜಿಸಿದ್ದಾರೆ. ಇದನ್ನೂ ಓದಿ: ಜಾರ್ಖಂಡ್‌ನಲ್ಲಿ ತಲೆಗೆ 1 ಕೋಟಿ ಬಹುಮಾನ ಹೊಂದಿದ್ದ ಮಾವೋವಾದಿ ಸೇರಿ 15 ನಕ್ಸಲರ ಹತ್ಯೆ
ಇನ್ನೂ ಈ ಬೆಲೆ ಇಳಿಕೆಗೆ ಪ್ರಮುಖ ಕಾರಣವೆಂದ್ರೆ ಮುಖ್ಯವಾಗಿ ವರ್ಲ್ಡ್ ಎಕನಾಮಿಕ್ ಫೋರಂನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೊಟ್ಟ ಮಾತುಗಳು ಇವತ್ತಿನ ಚಿನ್ನ, ಬೆಳ್ಳಿಯ ಕೊಂಚ ಇಳಿಕೆಗೆ ಕಾರಣವಾಗಿವೆ. ಡೊನಾಲ್ಡ್ ಟ್ರಂಪ್ ಗ್ರೀನ್‌ಲ್ಯಾಂಡ್ ಮೇಲೆ ಯಾವುದೇ ರೀತಿಯ ಮಿಲಿಟರಿ ಫೋರ್ಸ್ ಉಪಯೋಗಿಸಲ್ಲ. ಈ ಮೂಲಕ ಯುದ್ಧದ ಭೀತಿ ಆತಂಕ ಜಗತ್ತಿನಾದ್ಯಂತ ನಿವಾರಣೆಯಾಯ್ತು. ಹೀಗಾಗಿ ಚಿನ್ನ ಹಾಗೂ ಬೆಳ್ಳಿಯ ದಿಢೀರ್ ಕುಸಿತವಾಗಿದೆ ಎನ್ನಲಾಗಿದೆ. ಬೆಳ್ಳಿ ಮಾರ್ಕೆಟ್‌ನಲ್ಲೂ 8-10% ಇಳಿಕೆಯಾಗಿದೆ. ಜೊತೆಗೆ ಫೆಬ್ರವರಿ 1 ರಿಂದ ಯೂರೋಪಿಯನ್ ರಾಷ್ಟ್ರಗಳ ಮೇಲೆ ಹಾಕಿರೋ 10% ಟಾರಿಫ್ ಸಹ ಅಮೆರಿಕಾ ವಾಪಾಸ್ ಪಡೆಯಲಿದ್ದು, ಮತ್ತಷ್ಟು ಬೆಲೆ ಇಳಿಕೆಯಾಗಲಿದೆ ಅಂತಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಬೆಳ್ಳಿ ಬೆಲೆ 2.50 ಲಕ್ಷ ರೂ.ಯಿಂದ 2.75 ಲಕ್ಷ ರೂ.ವರೆಗೆ ತಾತ್ಕಾಲಿಕವಾಗಿ ಇಳಿಯಬಹುದು. ಚಿನ್ನ 1,25,000 ರೂ.ವರೆಗೆ ಇಳಿಕೆಯಾಗಬಹುದು. ಒಂದು ಲಕ್ಷ ಸಹ ಆಗೋ ಸಾಧ್ಯತೆ ಸಹ ಅಲ್ಲಗಳೆಯುವಂತಿಲ್ಲ. ಬೆಳ್ಳಿಯಲ್ಲಿ 10-20% ಕುಸಿತ ಕಾಣಬಹುದು ಅಂತಾ ಅಂದಾಜಿಸಲಾಗಿದೆ. ಹೀಗಾಗಿ ಹೂಡಿಕೆ ದೃಷ್ಟಿಯಿಂದ ಚಿನ್ನ ಹಾಗೂ ಬೆಳ್ಳಿಯಲ್ಲಿ ಹೂಡಿಕೆ ಸರಿಯಲ್ಲ. ಬಳಕೆ ದೃಷ್ಟಿಯಿಂದ ಮದುವೆ, ಗೃಹಪ್ರವೇಶ ಮೊದಲಾದ ಸಮಾರಂಭಗಳಿಗೆ ಮಾತ್ರ ಚಿನ್ನ, ಬೆಳ್ಳಿ ಖರೀದಿಸಿ ಎಂದು ತಜ್ಞರು ಸಲಹೆ ನೀಡಿದ್ದಾರೆ.ಇದನ್ನೂ ಓದಿ: ಮದುವೆ ಆಗಿ 3 ವರ್ಷಗಳಾದ್ರೂ ಮಕ್ಕಳಾಗಿಲ್ಲವೆಂದು ಹೆಂಡ್ತಿ ಕಾಟ – ಕಿರಿಕಿರಿಗೆ ಬೇಸತ್ತು ಉಸಿರುಗಟ್ಟಿಸಿ ಹತ್ಯೆಗೈದ ಪಾಪಿ ಪತಿ

