ವಾಷಿಂಗ್ಟನ್: ಕಳೆದ ವರ್ಷ ಅಕ್ಟೋಬರ್ 7 ರ ದಾಳಿಯ ಹಿಂದಿನ ಮಾಸ್ಟರ್ ಮೈಂಡ್ ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್ ಹತ್ಯೆಗೆ ಅಮೆರಿಕ ಸಂತಸ ವ್ಯಕ್ತಪಡಿಸಿದೆ. ‘ಇದು ಇಸ್ರೇಲ್ ಮತ್ತು ಜಗತ್ತಿಗೆ ಒಳ್ಳೆಯ ದಿನ’ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್ (Joe Biden) ಪ್ರತಿಕ್ರಿಯಿಸಿದ್ದಾರೆ.
ಹಮಾಸ್ ನಾಯಕರನ್ನು ಬೆನ್ನಟ್ಟಲು ಅಮೆರಿಕದ ಗುಪ್ತಚರವು ಇಸ್ರೇಲ್ ರಕ್ಷಣಾ ಪಡೆಗಳಿಗೆ ಸಹಾಯ ಮಾಡಿದೆ ಎಂದು ಅಧ್ಯಕ್ಷ ಬೈಡೆನ್ ಉಲ್ಲೇಖಿಸಿದ್ದಾರೆ. ಭಯೋತ್ಪಾದಕರನ್ನು ನಿರ್ಮೂಲನೆ ಮಾಡಲು ಇಸ್ರೇಲ್‌ಗೆ ಎಲ್ಲ ಹಕ್ಕು ಇದೆ ಎಂದು ಅವರು ಪುನರುಚ್ಚರಿಸಿದ್ದಾರೆ. ಇದನ್ನೂ ಓದಿ: ಹಮಾಸ್ ಮುಖ್ಯಸ್ಥ ಹತ್ಯೆ – ನಮ್ಮ ಮಿಲಿಟರಿಗೆ ಸಿಕ್ಕಿದ ಜಯ ಎಂದ ಇಸ್ರೇಲ್
ಕಳೆದ ವರ್ಷ ಅಕ್ಟೋಬರ್ 7 ರಂದು ಇಸ್ರೇಲ್ ಮೇಲಿನ ಹಮಾಸ್ ದಾಳಿಯ ಮಾಸ್ಟರ್‌ಮೈಂಡ್‌ನ ಹತ್ಯೆಯು, ಜಗತ್ತಿನಲ್ಲಿ ಎಲ್ಲಿಯೂ ಯಾವುದೇ ಭಯೋತ್ಪಾದಕರು ಎಷ್ಟು ಸಮಯ ತೆಗೆದುಕೊಂಡರೂ ನ್ಯಾಯದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಮತ್ತೊಮ್ಮೆ ಸಾಬೀತುಪಡಿಸಿದೆ ಎಂದು ಯುಎಸ್ ಅಧ್ಯಕ್ಷ ತಿಳಿಸಿದ್ದಾರೆ.
ನನ್ನ ಇಸ್ರೇಲಿ ಸ್ನೇಹಿತರಿಗೆ, ಇದು ನಿಸ್ಸಂದೇಹವಾಗಿ ಪರಿಹಾರ ಮತ್ತು ನೆನಪಿನ ದಿನವಾಗಿದೆ. 2011 ರಲ್ಲಿ ಒಸಾಮಾ ಬಿನ್ ಲಾಡೆನ್ ಅನ್ನು ಕೊಲ್ಲಲು ಅಧ್ಯಕ್ಷ ಒಬಾಮಾ ಅವರು ದಾಳಿಗೆ ಆದೇಶಿಸಿದ ನಂತರ ಯುನೈಟೆಡ್ ಸ್ಟೇಟ್ಸ್‌ನಾದ್ಯಂತ ಸಾಕ್ಷಿಯಾದ ದೃಶ್ಯಗಳಂತೆಯೇ ಇದೆ ಎಂದು ಬಣ್ಣಿಸಿದ್ದಾರೆ. ಇದನ್ನೂ ಓದಿ: ಭಾರತದಲ್ಲಿರುವ ಶೇಖ್ ಹಸೀನಾ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿ
ಕಳೆದ ವರ್ಷ ಅಕ್ಟೋಬರ್ 7 ರಂದು ಇಸ್ರೇಲ್ (Isreal) ಮೇಲೆ ನಡೆಸಿದ ದಾಳಿಯ ಮಾಸ್ಟರ್ ಮೈಂಡ್ ಹಮಾಸ್ ಉಗ್ರ ಸಂಘಟನೆಯ ನಾಯಕ (Hamas Leader) ಯಾಹ್ಯಾ ಸಿನ್ವಾರ್ (Yahya Sinwar) ಇಸ್ರೇಲ್ ನಡೆಸಿದ ದಾಳಿಗೆ ಬಲಿಯಾಗಿದ್ದಾನೆ.