ಮಂಡ್ಯ: ಭೂಮಿ ಅಗೆಯುವ ವೇಳೆ ಐದು ಅಡಿ ಎತ್ತರದ ಗೊಮ್ಮಟೇಶ್ವರ ವಿಗ್ರಹ ಪತ್ತೆಯಾಗಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.
ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಬಸ್ತಿ ಹೊಸಕೋಟೆ ಗ್ರಾಮದ ಗುಡ್ಡದ ಮೇಲೆ 18 ಅಡಿ ಎತ್ತರದ ಗೊಮ್ಮಟೇಶ್ವರ ವಿಗ್ರಹವಿದೆ. ಹೀಗಾಗಿ ಗುಡ್ಡದ ಸುತ್ತಲೂ ಕಾಂಪೌಂಡ್ ನಿರ್ಮಿಸಲು ಗುಂಡಿ ತೋಡುತ್ತಿದ್ದಾಗ 5 ಅಡಿ ಎತ್ತರದ ಗೊಮ್ಮಟನ ಶಿಲಾ ವಿಗ್ರಹ ಪತ್ತೆಯಾಗಿದೆ.
Advertisement
Advertisement
ವಿಗ್ರಹ ನೋಡಿ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ. ಜೊತೆಗೆ ಜೈನ ಕ್ಷೇತ್ರವಾದ ಬಸ್ತಿ ಹೊಸಕೋಟೆ ಗ್ರಾಮವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಬೇಕು. ಹಾಳು ಹಂಪೆಯಂತಿರುವ ಗೊಮ್ಮಟ ಕ್ಷೇತ್ರವನ್ನು ಉತ್ಖನನ ಮಾಡಿ ಭೂಮಿಯೊಳಗಿನ ಆಳದಲ್ಲಿ ಹುದುಗಿರುವ ನಿಗೂಢ ವಸ್ತುಗಳು ಮತ್ತು ಇತಿಹಾಸವನ್ನು ಪತ್ತೆ ಮಾಡಬೇಕು ಎಂದು ಬಸ್ತಿ ಹೊಸಕೋಟೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.