ಲಕ್ನೋ: ಸಾಮೂಹಿಕ ವಿವಾಹ (Mass Marriage) ಕಾರ್ಯಕ್ರಮದ ಹೆಸರಿನಲ್ಲಿ ಸ್ಥಳೀಯ ನಿವಾಸಿಗಳಿಗೆ ಹಣ ನೀಡಿ ದಂಪತಿಗಳಾಗಿ ನಟಿಸಲು ಸೂಚಿಸಿದ ಇಬ್ಬರು ಅಧಿಕಾರಿ ಸೇರಿ 15 ಮಂದಿಯನ್ನು ಉತ್ತರ ಪ್ರದೇಶದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಉತ್ತರ ಪ್ರದೇಶದ (Uttar Pradesh) ಉತ್‌ನ ಬಾಲಿಯಾ ಜಿಲ್ಲೆಯಲ್ಲಿ ಜನವರಿ 25 ರಂದು ಸಮೂಹಿಕ ವಿವಾಹವನ್ನು ಆಯೋಜಿಸಲಾಗಿತ್ತು. 568 ಜೋಡಿಗಳ ಮದುವೆ ಸಮಾರಂಭಕ್ಕೆ ಬಿಜೆಪಿ (BJP) ಶಾಸಕ ಕೇತ್ಕಿ ಸಿಂಗ್ ಮುಖ್ಯ ಅತಿಥಿಯಾಗಿದ್ದರು. ಇದನ್ನೂ ಓದಿ: ಮಲೆ ಮಹದೇಶ್ವರನಿಗೆ ಹಣದ ಮಳೆ – 1 ತಿಂಗಳಲ್ಲಿ ಕೋಟಿ ಕೋಟಿ ಆದಾಯ, ವಿದೇಶಿ ಕರೆನ್ಸಿಗಳು ಪತ್ತೆ
Advertisement
ಈ ವಿವಾಹ ಕಾರ್ಯಕ್ರಮದಲ್ಲಿ ವಧುಗಳು ತಮಗೆ ತಾವೇ ಹಾರ ಹಾಕಿಕೊಂಡಿದ್ದರು. ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಎಚ್ಚೆತ್ತ ಸರ್ಕಾರ ತನಿಖೆ ನಡೆಸಿ 15 ಮಂದಿಯನ್ನು ಬಂಧಿಸಿದೆ. ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ಪೊಲೀಸರ ಮೇಲೆ ಹಲ್ಲೆ – ಕಾಂಗ್ರೆಸ್ ಮಾಜಿ ಶಾಸಕನ ಪುತ್ರ ಅರೆಸ್ಟ್
Advertisement
Advertisement
ಕೆಲವು ಪುರುಷರು ಅವರ ಮುಖಗಳನ್ನು ಮರೆಮಾಚಿ ವರರಂತೆ ಉಡುಪುಗಳನ್ನು ಧರಿಸಿ ನಟಿಸಿದ್ದರು. ಸ್ಥಳೀಯ ನಿವಾಸಿಗಳಿಗೆ ವಧು-ವರರಂತೆ ನಟಿಸಲು 500 ರಿಂದ 2,000 ರೂ. ಹಣವನ್ನು ನೀಡಲಾಗಿತ್ತು. ಇದನ್ನೂ ಓದಿ: ಪಂಜಾಬ್ ರಾಜ್ಯಪಾಲ ಸ್ಥಾನಕ್ಕೆ ಬನ್ವಾರಿಲಾಲ್ ಪುರೋಹಿತ್ ರಾಜೀನಾಮೆ
Advertisement
ಸರ್ಕಾರವು ಸಾಮೂಹಿಕ ವಿವಾಹ ಯೋಜನೆಯಡಿ 51,000 ಸಾವಿರ ರೂಪಾಯಿ ನೀಡುತ್ತದೆ. ಅದರಲ್ಲಿ 35,000 ರೂ. ವಧುವಿಗಾಗಿ ಮತ್ತು 10,000 ರೂ. ಮದುವೆ ಸಾಮಗ್ರಿಗಳನ್ನು ಖರೀದಿಸಲು ಹಾಗೂ 6,000 ಕಾರ್ಯಕ್ರಮಕ್ಕೆಂದು ನೀಡಲಾಗುತ್ತದೆ. ಇದನ್ನೂ ಓದಿ: ಯಾದಗಿರಿಯಲ್ಲಿ ಪಡಿತರ ಅಕ್ಕಿಗೆ ಕನ್ನ – 69,000 ರೂ. ಮೌಲ್ಯದ ಅಕ್ಕಿ ವಶ
ಘಟನೆಯಲ್ಲಿ ಆರೋಪಿಗಳಿಗೆ ಹಣ ವರ್ಗಾವಣೆಯಾಗುವ ಮೊದಲೇ ಈ ಹಗರಣ ಬಯಲಾಗಿದೆ. ಈ ವಿಷಯದ ಬಗ್ಗೆ ತನಿಖೆ ನಡೆಸಲು ಮತ್ತು ಎಲ್ಲಾ ಫಲಾನುಭವಿಗಳನ್ನು ಪರಿಶೀಲಿಸಲು ತಕ್ಷಣ ತ್ರಿಸದಸ್ಯ ಸಮಿತಿಯನ್ನು ರಚಿಸಲಾಗಿದೆ. ಸಂಪೂರ್ಣ ತನಿಖೆ ಆಗುವರೆಗೂ ಯಾವುದೇ ಪ್ರಯೋಜನಗಳನ್ನು ಫಲಾನುಭವಿಗಳಿಗೆ ವರ್ಗಾಯಿಸಲಾಗುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಕಟ್ಟಡಗಳ ತೆರಿಗೆ ಭಾರೀ ಏರಿಕೆ – ಜಯಪುರದಲ್ಲಿ ವರ್ತಕರಿಂದ ಅಂಗಡಿ ಬಂದ್, ಸರ್ಕಾರದ ವಿರುದ್ಧ ಆಕ್ರೋಶ