ಕಲಬುರಗಿ: ಜಿಲ್ಲೆಯಲ್ಲಿ ಮತ್ತೊಂದು ಪರೀಕ್ಷೆಯಲ್ಲಿ ಗೋಲ್ಮಾಲ್ ಆರೋಪ ಕೇಳಿ ಬಂದಿದೆ. 2 ದಿನದ ಹಿಂದೆ ನಡೆದ ಕೆಪಿಟಿಸಿಎಲ್ ಪರೀಕ್ಷೆಯಲ್ಲೂ ಅಕ್ರಮ ನಡೆದಿದ್ದು, ಬ್ಲೂಟೂತ್ ಮೂಲಕ ಅಭ್ಯರ್ಥಿಗಳಿಗೆ ಉತ್ತರ ರವಾನೆ ಮಾಡಲಾಗಿದೆ ಎನ್ನಲಾಗುತ್ತಿದೆ.
ಕೆಪಿಟಿಸಿಎಲ್ ಪರೀಕ್ಷೆಯಲ್ಲಿ ನಡೆದ ಅಕ್ರಮವನ್ನು ಬೆಳಗಾವಿಯ ಗೋಕಾಕ್‍ನ ಕಿಂಗ್ ಪಿನ್‍ಗಳೇ ಮಾಡಿರುವುದು ಗೊತ್ತಾಗಿದೆ. ಅತ್ತ ಕಲಬುರಗಿ ಪಿಎಸ್‍ಐ ಕಿಂಗ್‍ಪಿನ್‍ಗಳು ಅರೆಸ್ಟ್ ಆಗುತ್ತಿದ್ದಂತೆ, ಇತ್ತ ಗೋಕಾಕ್ ಕಿಂಗ್‍ಪಿನ್‍ಗಳು ಆಕ್ಟೀವ್ ಆಗಿ ಕಲಬುರಗಿಗೆ ಆಗಮಿಸಿ ಕೆಪಿಟಿಸಿಎಲ್ ಎಕ್ಸಾಂನಲ್ಲಿ ಗೋಲ್ಮಾಲ್ ಮಾಡಿದೆ.
Advertisement
Advertisement
ಘಟನೆ ಸಂಬಂಧಿಸಿ ಎಚ್ಚೆತ್ತ ಜಿಲ್ಲಾಡಳಿತ ಚಿಂಚೋಳಿ ಪರೀಕ್ಷಾ ಕೇಂದ್ರದ ಮೆಟಲ್ ಡಿಟೆಕ್ಟರ್, ಪೊಲೀಸರು, ಪರೀಕ್ಷಾ ಮೇಲ್ವಿಚಾರಕರನ್ನು ಅಕ್ರಮ ಪತ್ತೆ ಹಚ್ಚಲು ಮುಂದಾಗಿದೆ. ಜೊತೆಗೆ ಪರೀಕ್ಷಾ ಕೇಂದ್ರದಲ್ಲಿ ಬಿಗಿ ಭದ್ರತೆಯನ್ನು ಮಾಡಿದ್ದಾರೆ. ಇದನ್ನೂ ಓದಿ: ಜ್ವರದಿಂದ ಬಳಲುತ್ತಿದ್ದ ರಾಷ್ಟ್ರಮಟ್ಟದ ಕ್ರೀಡಾಪಟು ಸಾವು
Advertisement
Advertisement
ಇತ್ತ ಪೊಲೀಸ್ ಇಲಾಖೆ ಹೈ ಅಲರ್ಟ್ ಆಗುತ್ತಿದ್ದಂತೆ ಕಿಂಗ್ ಪಿನ್‍ಗಳು ಮೊಬೈಲ್‍ನ್ನು ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಅಕ್ರಮ ನಡೆಸಲು ಬೆಳಗಾವಿಯಿಂದ ಕಲಬುರಗಿಗೆ ಆಗಮಿಸಿದ ಕಿಂಗ್ ಪಿನ್‍ಗಳು, ಕಲಬುರಗಿಯ ಜೇವರ್ಗಿ ತಾಲೂಕು ಬಳಿ ಬಂದ ನಂತರ ಮೊಬೈಲ್ ಸ್ವೀಚ್‍ಆಫ್ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಕಲಬುರಗಿ ಪೊಲೀಸರು ಹಾಗು ಸಿಐಡಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಫ್ಲೈಟ್ ಲ್ಯಾಂಡ್ ಮಾಡಬೇಡ್ರಿ ಬಾಂಬ್ ಇದೆ – ಟಾಯ್ಲೆಟ್ ಟಿಶ್ಯೂ ಮೇಲೆ ಗೀಚಿದ ಅನಾಮಧೇಯ