CrimeDistrictsKarnatakaLatestMain PostShivamoggaSports

ಜ್ವರದಿಂದ ಬಳಲುತ್ತಿದ್ದ ರಾಷ್ಟ್ರಮಟ್ಟದ ಕ್ರೀಡಾಪಟು ಸಾವು

ಶಿವಮೊಗ್ಗ: ಜ್ವರದಿಂದ ಬಳಲುತ್ತಿದ್ದ ರಾಷ್ಟ್ರ ಮಟ್ಟದ ಕ್ರೀಡಾಪಟುವೊಬ್ಬರು ಮೃತಪಟ್ಟಿದ್ದಾರೆ.

ವಿನಯ್ ಸಾವನ್ನಪ್ಪಿದ ದುರ್ದೈವಿ. ಇವರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಸೀಬಿಕೆರೆ ನಿವಾಸಿ. ವಿನಯ್ ಸೀಬಿಕೆರೆ ಅವರು ಕೆಲ ದಿನಗಳಿಂದ ಅಧಿಕ ಜ್ವರದಿಂದ ಬಳಲುತ್ತಿದ್ದರು. ಇದನ್ನೂ ಓದಿ: ಫ್ಲೈಟ್ ಲ್ಯಾಂಡ್ ಮಾಡಬೇಡ್ರಿ ಬಾಂಬ್ ಇದೆ – ಟಾಯ್ಲೆಟ್ ಟಿಶ್ಯೂ ಮೇಲೆ ಗೀಚಿದ ಅನಾಮಧೇಯ

ಜ್ವರದಿಂದ ಬಳಲುತ್ತಿದ್ದರಿಂದ ಮೊದಲು ಅವರು ತೀರ್ಥಹಳ್ಳಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ್ ಆಸ್ಪತ್ರೆಗೆ ರವಾನಿಸಲಾಗಿತ್ತು. ಇದೀಗ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ಖೋ ಖೋ ಕ್ರೀಡೆಯಲ್ಲಿ ರಾಜ್ಯವನ್ನು ಪ್ರತಿನಿಧಿಸಿ ಹಲವು ಪ್ರಶಸ್ತಿಗಳಿಗೆ ವಿನಯ್ ಭಾಜನರಾಗಿದ್ದರು. ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿ ವಿಜೇತರಾಗಿದ್ದ ಇವರು ಇತ್ತೀಚೆಗೆ ಉತ್ತರಪ್ರದೇಶದಲ್ಲಿ ನಡೆದ ಖೋ ಖೋ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದಿದ್ದರು. ಇದನ್ನೂ ಓದಿ: ನೀರಿನ ರಭಸಕ್ಕೆ ಕೊಚ್ಚಿ ಹೋದ ಬಾಲಕಿ – ಅಗ್ನಿಶಾಮಕ, ಸ್ಥಳೀಯರಿಂದ ಹುಡುಕಾಟ

Live Tv

Leave a Reply

Your email address will not be published.

Back to top button