ಸ್ಯಾಂಡಲ್‌ವುಡ್ ನಟ ಗಣೇಶ್ ಇಂದು (ಜು.2) ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಇದೇ ಖುಷಿಯಲ್ಲಿ ಹೊಸ ಸಿನಿಮಾ ಘೋಷಿಸಿದ್ದಾರೆ. ಈ ಮೂಲಕ ಗೋಲ್ಡನ್ ಸ್ಟಾರ್ ಗಣೇಶ್ (Golden Star Ganesh) ಅಭಿಮಾನಿಗಳಿಗೆ ಸಿಹಿಸುದ್ದಿ ಕೊಟ್ಟಿದ್ದಾರೆ. ಇದನ್ನೂ ಓದಿ:ಸಿಹಿಸುದ್ದಿ ಕೊಟ್ಟ ನಟಿ- ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿ ಹರ್ಷಿಕಾ ದಂಪತಿ
ಯಂಗ್ ಎನರ್ಜಿಟಿಕ್ ನಟ ಕಮ್ ನಿರ್ಮಾಪಕ ರಮೇಶ್ ಅರವಿಂದ್ (Ramesh Aravind) ಜೊತೆ ಹೊಸ ಚಿತ್ರಕ್ಕಾಗಿ ಗಣೇಶ್ ಕೈಜೋಡಿಸಿದ್ದಾರೆ. ಇದೀಗ ನಟ ರಮೇಶ್ ಮತ್ತು ಗಣೇಶ್ ಅವರ ಟಿನೇಜ್ ದಿನಗಳ ಫೋಟೋ ಪೋಸ್ಟರ್‌ನಲ್ಲಿದ್ದು, ರೆಟ್ರೋ ಲುಕ್‌ನಲ್ಲಿ ತೋರಿಸಲಾಗಿದೆ. ಸಿನಿಮಾದ ಮೊದಲ ಲುಕ್ ಆ.16ರಂದು ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.
ಅಂದಹಾಗೆ, ಇದೇ ಮೊದಲ ಬಾರಿಗೆ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ರಮೇಶ್ ಅರವಿಂದ್ ಒಂದೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇವರಿಗೆ ವಿಖ್ಯಾತ್ ಎ.ಆರ್ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ಚಿತ್ರವನ್ನು ಸತ್ಯ ಎಂಬುವವರು ನಿರ್ಮಾಣ ಮಾಡಿದ್ದಾರೆ.
ಗಣೇಶ್ ಜೊತೆ ಈ ವರ್ಷ ಬರ್ತ್‌ಡೇ ಆಚರಿಸುವ ಭಾಗ್ಯ ಇಲ್ಲ ಎಂದು ಬೇಸರದಲ್ಲಿದ್ದ ಫ್ಯಾನ್ಸ್‌ಗೆ ಈ ಸಿನಿಮಾದ ಅಪ್‌ಡೇಟ್ ಮೂಲಕ ಗುಡ್ ನ್ಯೂಸ್ ಕೊಟ್ಟಿದ್ದಾರೆ.