ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಿರ್ಮಿಸಿರುವ 1 ಬಿಹೆಚ್‌ಕೆ, 2 ಬಿಹೆಚ್‌ಕೆ, 3 ಬಿ.ಹೆಚ್.ಕೆ. ಫ್ಲಾಟ್ ಮತ್ತು ವಿಲ್ಲಾ ಕ್ರಯಪತ್ರದ ಮೇಳವನ್ನು 2025 ಅಕ್ಟೋಬರ್ 03 ರಿಂದ 16ರವರೆಗೆ ಆಯೋಜಿಸಲಾಗಿದೆ.
ಫ್ಲಾಟ್ / ವಿಲ್ಲಾಗಳಿಗೆ ಸಂಬಂಧಿಸಿದಂತೆ ಸುಮಾರು 400 ಫ್ಲಾಟ್ ಗಳಿಗೆ ಕ್ರಯಪತ್ರ ನೋಂದಾಯಿಸಲು ಬಾಕಿ ಇರುತ್ತದೆ. ಪ್ರಾಧಿಕಾರವು ಆಯೋಜಿಸಿದ್ದ ಮೇಳ, ಆನ್ ಲೈನ್ ಮತ್ತು ಆಫ್ ಲೈನ್ ಮೂಲಕ ಫ್ಲಾಟ್ ಗಳನ್ನು ಖರೀದಿಸಿ, ಹಂಚಿಕೆ ಪತ್ರವನ್ನು ಪಡೆದಿರುವ ಎಲ್ಲಾ ಫ್ಲಾಟ್ / ವಿಲ್ಲಾ ಖರೀದಿದಾರರು ಸೆ.30 ರ ಒಳಗಡೆ ಒಳಗಾಗಿ ತಮ್ಮ ತಮ್ಮ ಫ್ಲಾಟ್/ ವಿಲ್ಲಾಗಳಿಗೆ ಸಂಬಂಧಿಸಿದಂತೆ ಆಧಾರ್ ಕಾರ್ಡ್, ಪಾನ್ ಕಾರ್ಡ್, ಸ್ವಯಂ ದೃಢೀಕರಣ, ಬ್ಯಾಂಕ್ ಎನ್‌ಒಸಿ, ಫೋಟೋ, ಫೋಟೋಗಳೊಂದಿಗೆ ಫ್ಲಾಟ್ / ವಿಲ್ಲಾದ ಪೂರ್ತಿ ಹಣ ಪಾವತಿಸಿ, ಎಲ್ಲಾ ದಾಖಲೆಗಳನ್ನು ಪ್ರಾಧಿಕಾರಕ್ಕೆ ಸಲ್ಲಿಸಿದ್ದಲ್ಲಿ, ಪೂರ್ಣ ದಾಖಲೆ ಮತ್ತು ಹಣ ಪಾವತಿಸಿದವರಿಗೆ “ಮೊದಲು ಬಂದವರಿಗೆ ಪ್ರಥಮ ಆದ್ಯತೆ”ಯ (“First Come First Service) ಆಧಾರದ ಮೇಲೆ ಅ.3 ರಿಂದ ಅ.16 ರ ಅವಧಿಯಲ್ಲಿ ಕ್ರಯ ಪತ್ರ ನೋಂದಣಿ” ಮೇಳವನ್ನು ಪ್ರಾಧಿಕಾರದ ಕೇಂದ್ರ ಕಛೇರಿ, ಟಿ. ಚೌಡಯ್ಯ ರಸ್ತೆ, ಕುಮಾರ ಪಾರ್ಕ್ ಪಶ್ಚಿಮ, ಬೆಂಗಳೂರು-20 ರಲ್ಲಿ ನಡೆಸಿ ಕ್ರಯಪತ್ರ ನೋಂದಾಯಿಸಿ ಕೊಡಲಾಗುವುದು. . ಇದನ್ನೂ ಓದಿ: ಲೈಬ್ರರಿಯ ಕ್ಲರ್ಕ್ ಆದ ಪ್ರಜ್ವಲ್ ರೇವಣ್ಣ – ದಿನಕ್ಕೆ 522 ರೂ. ಸಂಬಳ
ಸಾರ್ವಜನಿಕರಿಗೆ ಯಾವುದೇ ರೀತಿಯು ತೊಂದರೆ, ಕಿರುಕುಳವಾಗದಂತೆ ಕ್ರಮವಹಿಸಿ, ಕ್ರಯಪತ್ರ ನೋಂದಾಯಿಸಲು ಪ್ರಾಧಿಕಾರವು ಎಲ್ಲಾ ಕ್ರಮಗಳನ್ನು ವಹಿಸುತ್ತಿರುವುದರಿಂದ ಇದರ ಸದುಪಯೋಗವನ್ನು ಪಡೆಯುವಂತೆ ಬಿಡಿಎ ಕೇಳಿಕೊಂಡಿದೆ. ಇದನ್ನೂ ಓದಿ: ಗಂಡನನ್ನು ಹೊಡೆದು ಕೊಲ್ಲುವಾಗ ಎದುರಲ್ಲೇ ಇದ್ದ ಸೋನಮ್ – ಹನಿಮೂನ್ ಕೊಲೆ ಕೇಸ್ ಚಾರ್ಜ್‌ಶೀಟ್‌ನಲ್ಲೇನಿದೆ?