Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಗಂಡನನ್ನು ಹೊಡೆದು ಕೊಲ್ಲುವಾಗ ಎದುರಲ್ಲೇ ಇದ್ದ ಸೋನಮ್ – ಹನಿಮೂನ್‌ ಕೊಲೆ ಕೇಸ್‌ ಚಾರ್ಜ್‌ಶೀಟ್‌ನಲ್ಲೇನಿದೆ?
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Crime | ಗಂಡನನ್ನು ಹೊಡೆದು ಕೊಲ್ಲುವಾಗ ಎದುರಲ್ಲೇ ಇದ್ದ ಸೋನಮ್ – ಹನಿಮೂನ್‌ ಕೊಲೆ ಕೇಸ್‌ ಚಾರ್ಜ್‌ಶೀಟ್‌ನಲ್ಲೇನಿದೆ?

Crime

ಗಂಡನನ್ನು ಹೊಡೆದು ಕೊಲ್ಲುವಾಗ ಎದುರಲ್ಲೇ ಇದ್ದ ಸೋನಮ್ – ಹನಿಮೂನ್‌ ಕೊಲೆ ಕೇಸ್‌ ಚಾರ್ಜ್‌ಶೀಟ್‌ನಲ್ಲೇನಿದೆ?

Public TV
Last updated: September 6, 2025 5:36 pm
Public TV
Share
2 Min Read
Sonam Raghuvanshi honeymoon murder
SHARE

– ಪತಿ ಹತ್ಯೆ ಬಳಿಕ ತಾಳಿ, ಕಾಲುಂಗುರ ತೆಗೆದು ಹೋಟೆಲ್‌ನಲ್ಲೇ ಬಿಟ್ಟು ಹೋಗಿದ್ದ ಸೋನಲ್‌ 

ಶಿಲ್ಲಾಂಗ್: ಹನಿಮೂನ್‌ ಕೊಲೆ ಪ್ರಕರಣ ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ 790 ಪುಟಗಳ ಚಾರ್ಜ್‌ಶೀಟನ್ನು ಪೊಲೀಸರು ಸಲ್ಲಿಸಿದ್ದಾರೆ. ಇದರಲ್ಲಿ ಬೆಚ್ಚಿಬೀಳಿಸುವಂತಹ ಹಲವಾರು ಅಂಶಗಳಿವೆ. ಹತ್ಯೆ ಆರೋಪಿ ಮಹಿಳೆ ಸೋನಮ್‌ ಎದುರಲ್ಲೇ ಆಕೆಯ ಗಂಡನ ಕೊಲೆ ನಡೆದಿದೆ ಎಂಬುದನ್ನು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.

ಉದ್ಯಮಿ ರಾಜಾ ರಘುವಂಶಿ (29) ಹತ್ಯೆ ಹಿಂದಿನ ಪಿತೂರಿ ಹೇಗಿತ್ತು? ಕೊಲೆ ಹೇಗೆ ಮಾಡಲಾಯ್ತು ಎಂಬುದನ್ನು ಚಾರ್ಜ್‌ಶೀಟ್‌ನಲ್ಲಿ ವಿವರವಾಗಿ ಉಲ್ಲೇಖಿಸಲಾಗಿದೆ. ಸೋನಮ್ ಮತ್ತು ರಾಜ್ ಸೇರಿದಂತೆ ಈ ಪ್ರಕರಣದಲ್ಲಿ ಐವರು ಆರೋಪಿಗಳನ್ನು ಜೂ.8 ಮತ್ತು 9 ರಂದು ಮೇಘಾಲಯ ಪೊಲೀಸರು ಬಂಧಿಸಿದ್ದಾರೆ.

Sonam Raghuvanshi 1

ರಾಜಾ ರಘುವಂಶಿ ಜೊತೆ ಸೋನಮ್‌ಗೆ ವಿವಾಹವಾಗಿತ್ತು. ದಂಪತಿ ಹನಿಮೂನ್‌ಗೆ ತೆರಳಿದ್ದರು. ಆದರೆ, ಸೋನಮ್‌ಗೆ ರಾಜ್‌ ಎಂಬಾತನ ಜೊತೆ ಅಕ್ರಮ ಸಂಬಂಧ ಇತ್ತು. ಲವ್ವರ್‌ ಜೊತೆ ಸೇರಿಕೊಂಡು ಪತಿಯನ್ನು ಮುಗಿಸಲು ಸೋನಮ್‌ ಸಂಚು ರೂಪಿಸಿದ್ದಳು. ಕೊಲೆಗಾಗಿ ಲವ್ವರ್‌ ಜೊತೆ ಇನ್ನೂ ಮೂವರ ಸಹಾಯವನ್ನು ಪಡೆದಿದ್ದಳು. ಈಕೆಯ ಎದುರೇ ಆಕಾಶ್ ಸಿಂಗ್ ರಜಪೂತ್, ವಿಶಾಲ್ ಸಿಂಗ್ ಚೌಹಾನ್ ಮತ್ತು ಆನಂದ್ ಕುರ್ಮಿ ಆರೋಪಿಗಳು ರಾಜಾ ರಘುವಂಶಿಯನ್ನು ಹತ್ಯೆ ಮಾಡಿದ್ದಾರೆಂಬುದು ತನಿಖೆಯಿಂದ ಗೊತ್ತಾಗಿದೆ.

ಸಾಕ್ಷ್ಯ ನಾಶಪಡಿಸಲು ಯತ್ನಿಸಿದ್ದ ಆರೋಪಿಗಳೂ ಅಂದರ್‌
ಸಾಕ್ಷ್ಯಗಳನ್ನು ನಾಶಪಡಿಸಿದ್ದ ಆರೋಪದ ಮೇಲೆ ಪೊಲೀಸರು ಇನ್ನೂ ಮೂವರು ಆರೋಪಿಗಳಾದ ಲೋಕೇಂದ್ರ ತೋಮರ್, ಬಲ್ಲಾ ಅಹಿರ್ವರ್ ಮತ್ತು ಶಿಲೋಮ್ ಜೇಮ್ಸ್ ಅವರನ್ನು ಬಂಧಿಸಿದ್ದಾರೆ. ಹೆಚ್ಚುವರಿ ವಿಧಿವಿಜ್ಞಾನದ ವರದಿಗಳನ್ನು ಸ್ವೀಕರಿಸಿದ ನಂತರ ಪೂರಕ ಚಾರ್ಜ್‌ಶೀಟ್ ಸಲ್ಲಿಸಲಾಗುವುದು.

ಬಂಧಿತ ಆರೋಪಿಗಳ ವಿರುದ್ಧ 790 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ. ಆರೋಪಿಗಳಿಂದ ವಶಪಡಿಸಿಕೊಳ್ಳಲಾದ ಗಣನೀಯ ಪ್ರಮಾಣದ ವಸ್ತು ಸಾಕ್ಷ್ಯಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ ಎಂದು ಪೂರ್ವ ಖಾಸಿ ಹಿಲ್ಸ್ ಪೊಲೀಸ್ ವರಿಷ್ಠಾಧಿಕಾರಿ ವಿವೇಕ್ ಸೈಯೆಮ್ ತಿಳಿಸಿದ್ದಾರೆ.

ಕೊಲೆ ಹೇಗಾಯ್ತು?
ಹಂತಕರಲ್ಲಿ ಒಬ್ಬನಾದ ವಿಶಾಲ್‌ ಸಿಂಗ್‌ ಚೌಹಾಣ್‌ ಮಾರಕಾಸ್ತ್ರದಿಂದ ರಾಜಾ ಮೇಲೆ ಹಲ್ಲೆ ನಡೆಸುತ್ತಾನೆ. ಈ ವೇಳೆ ಸೋನಮ್‌ ಸ್ಥಳದಲ್ಲೇ ಇರುತ್ತಾಳೆ. ಪತಿ ರಕ್ತಸ್ರಾವದಿಂದ ಕಿರುಚಾಡಿದಾಗ ಸ್ಥಳದಿಂದ ಓಡಿ ಹೋಗುತ್ತಾಳೆ. ನಂತರ ತನ್ನ ಪತಿ ಸತ್ತಾಗಲೇ ಆಕೆ ವಾಪಸ್‌ ಬರುತ್ತಾಳೆ. ನಂತರ ಆತನ ಮೃತದೇಹವನ್ನು ಕಮರಿಗೆ ಬಿಸಾಡುತ್ತಾರೆ. ಕೊಲೆಗೆ ಬಳಸಿದ ಮಾರಕಾಸ್ತ್ರ, ರಕ್ತಸಿಕ್ತ ಬಟ್ಟೆ, ದಂಪತಿ ಸಿಸಿಟಿವಿ ತುಣುಕು ಮತ್ತು ಅನೇಕ ಜನರ ಸಾಕ್ಷ್ಯಗಳ ರೂಪದಲ್ಲಿ ಅವರಿಗೆ ಪುರಾವೆಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಳಿ, ಕಾಲುಂಗುರ ತೆಗೆದು ಹೋಟೆಲ್‌ನಲ್ಲೇ ಬಿಟ್ಟು ಹೋಗಿದ್ಲು!
ಪತಿ ಹತ್ಯೆ ಬಳಿಕ ಸೋನಮ್‌ ತನ್ನ ತಾಳಿ ಮತ್ತು ಕಾಲುಂಗುರವನ್ನು ಬ್ಯಾಗ್‌ವೊಂದರಲ್ಲಿಟ್ಟು ಹೋಟೆಲ್‌ನಲ್ಲೇ ಬಿಟ್ಟು ಹೋಗಿದ್ದಳು. ಪರಿಶೀಲನೆ ವೇಳೆ ಪೊಲೀಸರು ಬ್ಯಾಗ್‌ ಸಿಕ್ಕಿತ್ತು. ಇದು ಪೊಲೀಸರಲ್ಲಿ ಸಾಕಷ್ಟು ಅನುಮಾನ ಹುಟ್ಟಿಸಿತು.

TAGGED:honeymoon murder caseMeghalaya Honeymoon CaseRaja RaghuvanshiSonamಮೇಘಾಲಯರಾಜಾ ರಘುವಂಶಿಸೋನಮ್‌ಹನಿಮೂನ್‌ ಕೊಲೆ ಪ್ರಕರಣ
Share This Article
Facebook Whatsapp Whatsapp Telegram

Cinema news

Duniya Vijay 1
ಝಾಂಬಿ ಡ್ರಗ್ಸ್ ಕೇಸಲ್ಲಿ ನಟ ದುನಿಯಾ ವಿಜಯ್‌ಗೆ ಸಂಕಷ್ಟ – ಡಿಲೀಟ್ ವಿಡಿಯೋ ರಿಟ್ರೀವ್‌ಗಾಗಿ ಇನ್‌ಸ್ಟಾಗೆ ಪೊಲೀಸರ ಪತ್ರ
Bengaluru City Cinema Districts Karnataka Latest Sandalwood Top Stories
TVK Vijay
ಅಫಿಡವಿಟ್‌ನಲ್ಲಿ 105 ಕೋಟಿ ವ್ಯತ್ಯಾಸ – ನಾಮಪತ್ರ ತಿರಸ್ಕಾರ ಆತಂಕದಲ್ಲಿ ವಿಜಯ್‌
Cinema Court Latest Main Post National
Maharashtra Man Arrest
ಮಹಾರಾಷ್ಟ್ರ ‘ಲವ್ ಟ್ರ್ಯಾಪ್’ ಸಂತ್ರಸ್ತೆ ಆತ್ಮಹತ್ಯೆಗೆ ಯತ್ನ – ಮತ್ತೋರ್ವ ಆರೋಪಿ ಅಂದರ್
Cinema Latest National Top Stories
Atlee
ಹೆಣ್ಣು ಮಗು ಜನಿಸಿದ ಸಂಭ್ರಮದಲ್ಲಿ ನಿರ್ದೇಶಕ ಅಟ್ಲೀ ದಂಪತಿ
Cinema Latest Top Stories

You Might Also Like

Pakistan PM Shehbaz Sharif gets trolled over post on US Iran ceasefire Donald Trump
Latest

Ceasefire | ಪಾಕ್‌ ಮನವಿ ಮೇರೆಗೆ ಅಮೆರಿಕ -‌ ಇರಾನ್ ಕದನ ವಿರಾಮ ವಿಸ್ತರಣೆ: ಟ್ರಂಪ್‌

Public TV
By Public TV
11 minutes ago
Modi 2
Latest

One Year Of Pahalgam Attack | ಭಯೋತ್ಪಾದನೆಗೆ ಭಾರತ ಎಂದಿಗೂ ತಲೆಬಾಗುವುದಿಲ್ಲ: ಪ್ರಧಾನಿ ಮೋದಿ

Public TV
By Public TV
39 minutes ago
Bharath Bhushan Pahalagam Attack
Bengaluru City

ಪಹಲ್ಗಾಮ್ ದಾಳಿಗೆ ಒಂದು ವರ್ಷ – ಭರತ್ ಭೂಷಣ್ ನೆನೆದು ಪತ್ನಿ, ಪೋಷಕರು ಕಣ್ಣೀರು

Public TV
By Public TV
47 minutes ago
Baisaran Valley 2
Latest

ಪಹಲ್ಗಾಮ್‌ ನರಮೇಧ ನಡೆದ ಬೈಸರನ್‌ ಕಣಿವೆಯನ್ನ ʻಮಿನಿ ಸ್ವಿಟ್ಜರ್ಲೆಂಡ್ʼ ಅನ್ನೋದೇಕೆ? ಹಿಂದೂಗಳಿಗೆ ಏಕೆ ವಿಶೇಷ?

Public TV
By Public TV
58 minutes ago
pahalgam Terror 4
Latest

20 ನಿಮಿಷಗಳಲ್ಲೇ ನರಮೇಧ ನಡೆದಿದ್ದು ಹೇಗೆ? – ಈಗಲೂ ಕಣ್ಣಿಗೆ ಕಟ್ಟಿದಂತಿದೆ ಬೀಭತ್ಸ ದೃಶ್ಯ!

Public TV
By Public TV
1 hour ago
Nelamangala Lorry Accident
Bengaluru City

ಪಂಚರ್ ಆಗಿ ನಿಂತಿದ್ದ ಲಾರಿಗೆ ಮತ್ತೊಂದು ಲಾರಿ ಡಿಕ್ಕಿ – ಚಾಲಕನ ಎರಡೂ ಕಾಲುಗಳು ಕಟ್

Public TV
By Public TV
1 hour ago

Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?