ಗುವಾಹಟಿ: ಅರುಣಾಚಲ ಪ್ರದೇಶ ರಾಜ್ಯದ ರಾಜಧಾನಿಯಲ್ಲಿ ವಿಶೇಷ ಚಹಾ ಪುಡಿಯೊಂದು ಪ್ರತಿ ಕೆಜಿಗೆ ಬರೋಬ್ಬರಿ 40 ಸಾವಿರಕ್ಕೆ ಮಾರಾಟವಾಗುವ ಮೂಲಕ ವಿಶ್ವದಾಖಲೆಯನ್ನು ನಿರ್ಮಾಣ ಮಾಡಿದೆ.
ಕಳೆದ ಗುರುವಾರ ಗುವಾಹಟಿಯ ಚಹಾ ಪುಡಿ ಹರಾಜು ಪ್ರಕ್ರಿಯೆಯಲ್ಲಿ ಗೋಲ್ಡನ್ ನೀಡಲ್ಸ್ ಟೀ ತಳಿಯ ಚಹಾ ಎಲೆಯ ಪುಡಿಯು ಪ್ರತಿ ಕೆಜಿಗೆ 40,000 ರೂ.ಗೆ ಮಾರಾಟವಾಗುವ ಮೂಲಕ ವಿಶ್ವದಲ್ಲೇ ಅತೀ ಹೆಚ್ಚಿನ ಬೆಲೆಗೆ ಮಾರಾಟವಾದ ಚಹಾ ತಳಿಯಾಗಿ ಹೆಸರು ಪಡೆದುಕೊಂಡಿದೆ.
Advertisement
Advertisement
ದೋನಿ ಪೋಲೊ ಎಂಬ ಎಸ್ಟೇಟ್‍ನಲ್ಲಿ ಅಭಿವೃದ್ಧಿ ಪಡಿಸಿ ಬೆಳೆದ ಗೋಲ್ಡನ್ ನೀಡಲ್ಸ್ ಟೀ ತಳಿಯು ಅತ್ಯಂತ ಉತ್ಕೃಷ್ಟ ಮಟ್ಟದ ಚಹಾ ಪುಡಿ ಎಂದು ಖ್ಯಾತಿ ಪಡೆದುಕೊಂಡಿದೆ. ಈ ಎಸ್ಟೇಟ್ ಕಳೆದ 1987 ರಿಂದಲೂ ಸಾಂಪ್ರದಾಯಿಕ ಶೈಲಿಯ ಚಹಾ ಬೆಳೆಗೆ ಹೆಸರುವಾಸಿಯಾಗಿದ್ದು, ಇಲ್ಲಿನ ಚಹಾ ಪುಡಿಗಳು ವಿಶ್ವದಲ್ಲಿಯೇ ಉನ್ನತ ದರ್ಜೆಯನ್ನು ಪಡೆದುಕೊಂಡಿವೆ. ಇದನ್ನೂ ಓದಿ:ವಿಶ್ವದಾಖಲೆ ಬರೆದ ಅಸ್ಸಾಂ ಚಹಾ: 1 ಕೆಜಿ ಎಲೆಗಳಿಗೆ 39 ಸಾವಿರ!
Advertisement
ಈ ಕುರಿತು ಪ್ರತಿಕ್ರಿಯಿಸಿದ ಗುವಾಹಟಿ ಚಹಾ ಹರಾಜು ಖರೀದಿದಾರ ಸಂಘದ ಕಾರ್ಯದರ್ಶಿ ದಿನೇಶ್ ಬಿಹಾನಿರವರು, ಗೋಲ್ಡನ್ ನೀಡಲ್ಸ್ ಚಹಾ ತಳಿಯು ಪ್ರತಿ ಕೆಜಿಗೆ 40 ಸಾವಿರಕ್ಕೆ ಮಾರಾಟವಾಗುವ ಮೂಲಕ ವಿಶ್ವದಲ್ಲಿಯೇ ಅತಿಹೆಚ್ಚು ಮೊತ್ತ ಪಡೆದ ಚಹಾಪುಡಿ ಎಂದೆನಿಸಿಕೊಂಡಿದೆ. ಅಲ್ಲದೇ ಈ ಮೊದಲು ಜುಲೈ 24ರಂದು ಅಸ್ಸಾಂನ ಚಹಾ ಎಲೆಯು 39 ಸಾವಿರಗಳಿಸುವ ಮೂಲಕ ದಾಖಲೆ ನಿರ್ಮಿಸಿತ್ತು ಎಂದು ತಿಳಿಸಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv