ಚಿಕ್ಕಬಳ್ಳಾಪುರ: ಚಿನ್ನ ಅಂದ್ರೆ ಯಾರಿಗೆ ಇಷ್ಟ ಇರಲ್ಲ ಹೇಳಿ.. ಅದರಲ್ಲೂ ಹುಡುಗಿಯರು ಚಿನ್ನ ಅಂದ್ರೆ ಪ್ರಾಣನೇ ಬಿಡ್ತಾರೆ. ಇಷ್ಟು ದಿನ ಬರೀ ಚಿನ್ನದ ಒಡವೆಗಳಿಗಷ್ಟೇ ಆಸೆ ಪಡ್ತಿದ್ದ ಹೆಣ್ಮಕ್ಕಳು ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಚಿನ್ನದ ಬ್ಲೌಸ್ ಮೇಲೂ ಕಣ್ಣು ಹಾಕಿದ್ದಾರೆ.
ಹೌದು. ಚಿಕ್ಕಬಳ್ಳಾಪುರ ನಗರದ ಲೇಡಿಸ್ ಟೈಲರ್ ಟೆಂಕರ್ಸ್ ಶಾಪ್‍ನ ಮಾಲೀಕ ಮುರಳಿ ಮಹಿಳೆಯರಿಗಾಗಿಯೇ ವಜ್ರ, ಚಿನ್ನ, ಬೆಳ್ಳಿ ಆಭರಣಗಳನ್ನ ಬಳಸಿ ಚೆಂದದ ರವಿಕೆಗಳನ್ನ ಸಿದ್ಧಪಡಿಸಿದ್ದಾರೆ.
ಒಟ್ಟು 42.7 ಸೆಂಟ್ಸ್ ವಜ್ರ, 42 ಗ್ರಾಂ ಚಿನ್ನಾಭರಣ, 200 ಗ್ರಾಂ ಬೆಳ್ಳಿ ಬಳಸಿ ಎರಡೂವರೆ ಲಕ್ಷ ರೂಪಾಯಿ ವೆಚ್ಚದಲ್ಲಿ ಮೊದಲ ರವಿಕೆ ಸಿದ್ದಪಡಿಸಿದ್ದಾರೆ. ಇನ್ನೂ ಅಂಗಡಿಗೆ ಬರುವ ಮಹಿಳೆಯರನ್ನ ಆಕರ್ಷಿಸಲೆಂದೇ ಒಂದು ಪ್ರತ್ಯೇಕ ಬ್ಲೌಸ್ ರೆಡಿಮಾಡಿದ್ದಾರೆ.