– ಎಸ್ಕಾರ್ಟ್‌ಗೆ ಬಂದಿದ್ದ ಪೊಲೀಸರೂ ಡಿಆರ್‌ಐ ವಶ
ಬೆಂಗಳೂರು: ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ (Gold Smuggling Case) ಐಪಿಎಸ್ ಅಧಿಕಾರಿ ಸಂಬಂಧಿಯನ್ನು ಬೆಂಗಳೂರು ಏರ್‌ಪೋರ್ಟ್‌ನಲ್ಲಿ (Bengaluru AirPort) ಡಿಆರ್‌ಐ ಅಧಿಕಾರಿಗಳು ವಶಕ್ಕೆ ಪಡೆದಿರುವ ಘಟನೆ ನಡೆದಿದೆ.
ತಡರಾತ್ರಿ 11 ಗಂಟೆ ಸುಮಾರಿಗೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಬೇರೆ ದೇಶದಿಂದ ದೆಹಲಿ (Delhi) ಮೂಲಕ ಚಿನ್ನ ಸಾಗಾಣಿಕೆ ಮಾಡುತ್ತಿದ್ದರು ಎಂಬ ಆರೋಪದ ಮೇಲೆ ಐಪಿಎಸ್ ಅಧಿಕಾರಿಯ (IPS Officer) ಹತ್ತಿರದ ಸಂಬಂಧಿಯನ್ನ ವಶಕ್ಕೆ ಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಅಂತರರಾಜ್ಯಗಳಿಗೆ ಸಂಚರಿಸೋ ಯೆಲ್ಲೋ ಬೋರ್ಡ್ ವಾಹನ ಮಾಲೀಕರಿಗೆ ಆರ್‌ಟಿಓ ಗುಡ್‌ನ್ಯೂಸ್
Advertisement
Advertisement
ಎಸ್ಕಾರ್ಟ್‌ಗೆ ಬಂದಿದ್ದ ಪೊಲೀಸರೂ ವಶಕ್ಕೆ:
ಇನ್ನೂ ಆ ಐಪಿಎಸ್ ಅಧಿಕಾರಿ ಸಂಬಂಧಿಯ ಎಸ್ಕಾರ್ಟ್‌ಗೆ ಬಂದಿದ್ದ ಪೊಲೀಸರನ್ನೂ ಡಿಆರ್‌ಐ (DRI) ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ನೀವು ನೀವು ಸ್ಮಗ್ಲಿಂಗ್‌ಗೆ ಸಹಾಯ ಮಾಡುತ್ತಿದ್ದೀರಿ ಅಂತ ಹೇಳಿ ವಶಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ. ಈ ಸಂಬಂಧ ತನಿಖೆ ನಡೆಯುತ್ತಿದೆ. ಇದನ್ನೂ ಓದಿ: ಬೆಂಗಳೂರು | ಸರಣಿ ಕಳ್ಳತನ ಮಾಡಿ ಮಹಾ ಕುಂಭಮೇಳಕ್ಕೆ ಹೋಗಿದ್ದ ಇಬ್ಬರು ಅರೆಸ್ಟ್