– ಐಪಿಎಸ್ ಅಧಿಕಾರಿ ತಂದೆಗೂ ಢವಢವ!
ಬೆಂಗಳೂರು: ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ (Gold Smuggling) ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರನ್ಯಾ ರಾವ್ (Ranya Rao) ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ (Judicial Custody) ಒಪ್ಪಿಸಿ ವಿಶೇಷ ಆರ್ಥಿಕ ಅಪರಾಧಗಳ ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ.
ಗೋಲ್ಡ್ ಸ್ಮಗ್ಲಿಂಗ್ ಆರೋಪದ ಮೇಲೆ ನಟಿ ರನ್ಯಾ ರಾವ್ ಅವರನ್ನು ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಬಂಧಿಸಲಾಗಿದೆ. ಸೋಮವಾರ ರಾತ್ರಿ ದೆಹಲಿಯಿಂದ ಬಂದಿಳಿದ ನಟಿ ರನ್ಯಾ ರಾವ್ ಬಳಿ 12 ಕೋಟಿ ಮೌಲ್ಯದ 14.8 ಕೆಜಿ ಚಿನ್ನ ಪತ್ತೆಯಾಗಿದೆ. ಆಗಾಗ ಬ್ಯುಸಿನೆಸ್ ಟ್ರಿಪ್ ಮೇಲೆ ದುಬೈ ಹೋಗಿ ಬರ್ತಿದ್ದ ನಟಿ ರನ್ಯಾರಾವ್ ಮೇಲೆ ಡಿಆರ್‌ಐ ಅಧಿಕಾರಿಗಳು ನಿಗಾ ಇಟ್ಟಿದ್ದರು. ವಿದೇಶದಿಂದ ಕಳ್ಳಸಾಗಣೆಯಾದ ಚಿನ್ನವನ್ನು ನಟಿ ರನ್ಯಾರಾವ್ ದೆಹಲಿಯಿಂದ ಬೆಂಗಳೂರಿಗೆ ತರುತ್ತಿರುವ ಬಗ್ಗೆ ಡಿಆರ್‌ಐ ಅಧಿಕಾರಿಗಳಿಗೆ ಖಚಿತ ಮಾಹಿತಿ ಸಿಕ್ಕಿತ್ತು. ಹೀಗಾಗಿ ಕಾರ್ಯಚರಣೆ ನಡೆಸಿದ ಡಿಆರ್‌ಐ ಅಧಿಕಾರಿಗಳು ನಟಿ ರನ್ಯಾರಾವ್‌ರನ್ನು ರೆಡ್ ಹ್ಯಾಂಡ್ ಆಗಿ ಲಾಕ್ ಮಾಡಿದ್ದರು. ಇದನ್ನೂ ಓದಿ: ಬಲಿಷ್ಠ ಆಸ್ಟ್ರೇಲಿಯಾ ಬಗ್ಗು ಬಡಿದು ಫೈನಲ್ ಪ್ರವೇಶಿಸಿದ ಭಾರತ
ನಟಿ ರನ್ಯಾರಾವ್ ಹಿರಿಯ ಐಪಿಎಸ್ ಅಧಿಕಾರಿಯೊಬ್ಬರ ಮಲಮಗಳು. ಹೀಗಾಗಿ ಆಕೆಗೆ ಎಸ್ಕಾರ್ಟ್ ಕೊಡಲು ಬಂದಿದ್ದ ಪೊಲೀಸರನ್ನು ಮತ್ತು ರನ್ಯಾರಾವ್ ಪತಿಯನ್ನು ಸ್ಮಗ್ಲಿಂಗ್‌ಗೆ ನೆರವು ನೀಡುತ್ತಿದ್ದ ಆರೋಪದ ಮೇರೆಗೆ ಡಿಆರ್‌ಐ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಮಾಹಿತಿ ಪ್ರಕಾರ ರನ್ಯಾರಾವ್ ಮಲತಂದೆಯನ್ನು ಡಿಆರ್‌ಐ ಅಧಿಕಾರಿಗಳು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ. ಮನಿ ಲಾಂಡ್ರಿಂಗ್ ಆಯಾಮದಲ್ಲಿಯೂ ನಟಿ ರನ್ಯಾರಾವ್‌ರನ್ನು ಪ್ರಶ್ನಿಸುವ ಸಂಭವ ಇದೆ. ಇದನ್ನೂ ಓದಿ: 2 ವರ್ಷದ ಡೇಟಿಂಗ್ ಬಳಿಕ ತಮನ್ನಾ, ವಿಜಯ್ ವರ್ಮಾ ಬ್ರೇಕಪ್!
ಇನ್ನು ಲ್ಯಾವೆಲ್ಲಿ ರಸ್ತೆಯಲ್ಲಿರುವ ರನ್ಯಾ ರಾವ್ ಅಪಾರ್ಟ್ಮೆಂಟ್ ಮೇಲೆ ಡಿಆರ್‌ಐ ಅಧಿಕಾರಿಗಳು ದಾಳಿ ನಡೆಸಿದ್ದು, 2.5 ಕೋಟಿ ನಗದು ಹಣವನ್ನು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: KPSC Scam| ಪೂರ್ವಭಾವಿ ಪರೀಕ್ಷೆಗೆ 60 ಲಕ್ಷ, ಮುಖ್ಯ ಪರೀಕ್ಷೆಗೆ 1 ಕೋಟಿ: ಅಶೋಕ್