ಬೆಂಗಳೂರು: ಗೋಲ್ಡ್ ಸ್ಮಗ್ಲಿಂಗ್ ಕೇಸಲ್ಲಿ ಬಂಧನಕ್ಕೆ ಒಳಗಾಗಿರುವ ನಟಿ ರನ್ಯಾ ರಾವ್ ವಿಚಾರಣೆಯನ್ನ ಡಿಆರ್‌ಐ ಅಧಿಕಾರಿಗಳು ಆರಂಭಿಸಿದ್ದಾರೆ.
ನಿನ್ನೆ ಬಾಡಿ ವಾರೆಂಟ್ ಮೇಲೆ ಕಸ್ಟಡಿಗೆ ಪಡೆದಿರುವ ಅಧಿಕಾರಿಗಳು 14.2 ಕೆಜಿ ಚಿನ್ನದ ಮೂಲ ಯಾವುದು? ಹಣ ಇನ್ವೆಸ್ಟ್‌ಮೆಂಟ್ ಹೇಗೆ ಅಂತಾ ನಟಿಯನ್ನ ವಿಚಾರಣೆ ಮಾಡುತ್ತಿದ್ದಾರೆ.
ನಟಿಗೆ 14.2 ಕೆಜಿ ಗೋಲ್ಡ್ ದುಬೈನಲ್ಲಿ ಸಿಕ್ಕಿದ್ದು ಹೇಗೆ?
ನಟಿಯೇ ಕೋಟಿ ಕೋಟಿ ಇನ್ವೆಸ್ಟ್ ಮಾಡಿ ಗೋಲ್ಡ್ ಖರೀದಿಸಿ ಅಕ್ರಮವಾಗಿ ತಂದಳಾ? 14.2 ಕೆಜಿ ಚಿನ್ನ ಖರೀದಿಗೆ 10 ರಿಂದ 12 ಕೋಟಿ ಹಣ ಬೇಕು. ಆ ಹಣ ಎಲ್ಲಿಂದ ಬಂತು ಎಂದು ಅಧಿಕಾರಿಗಳು ಪ್ರಶ್ನೆಗಳನ್ನು ಎತ್ತಿದ್ದಾರೆ.
ದುಬೈನಿಂದ ಚಿನ್ನದ ಕಳ್ಳ ಮಾಲನ್ನು ಸೇಫಾಗಿ ತರುವ ಕೆಲಸ ಮಾಡುತ್ತಿದ್ದಾಳಾ ಅಥವಾ ಮದ್ಯವರ್ತಿಯಾಗಿ ಏರ್ಪೋರ್ಟ್‌ನಿಂದ ಸುರಕ್ಷಿತವಾಗಿ ಚಿನ್ನ ಸಾಗಿಸ್ತಿದ್ದಳಾ ಎಂಬ ಗುಮಾನಿಯೂ ಮೂಡಿದೆ.
ಕಸ್ಟಮ್ಸ್ ತೊಂದರೆಯಾಗದಂತೆ ಏರ್ಪೋರ್ಟ್ ದಾಟಿಸಿ ಕಮಿಷನ್ ಪಡೆಯುತ್ತಿದ್ದಳಾ? ಚಿನ್ನದ ಸ್ಮಗ್ಲಿಂಗ್ ಹಿಂದೆ ಬೇರೆ ಯಾರ ಕೈವಾಡವಿದೆ? ದುಬೈನಲ್ಲಿ ನಟಿಯ ಕೈಗೆ ಚಿನ್ನ ಸಿಕ್ಕಿದ್ದಾದರೂ ಹೇಗೆ? ಅಕ್ರಮ ಚಿನ್ನ ಸಾಗಾಟದ ಹಿಂದೆ ಯಾರಿದ್ದಾರೆ.. ಹೀಗೆ ಹಲವು ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ.