ತಿರುವನಂತಪುರಂ: ಹೊಟ್ಟೆಯಲ್ಲಿ (Stomach) 1.063 ಕೆ.ಜಿ ಚಿನ್ನವನ್ನು(Gold) ಇಟ್ಟುಕೊಂಡು ಸ್ಮಗ್ಲಿಂಗ್ ಮಾಡುತ್ತಿದ್ದ ದುಬೈನಿಂದ ಬಂದಿದ್ದ ಪ್ರಯಾಣಿಕನೊಬ್ಬನನ್ನು ಕೇರಳದ (Kerala) ಕರಿಪುರ ವಿಮಾನ ನಿಲ್ದಾಣದಲ್ಲಿ (Airport) ಪೊಲೀಸರು ಬಂಧಿಸಿದ್ದಾರೆ.(Arrest)
ಕೇರಳದ ಮಲಪ್ಪುರಂ ಜಿಲ್ಲೆಯ ವರಿಯಂಕೋಡ್ ಮೂಲದ ನೌಫಲ್ (36) ಬಂಧಿತ ಆರೋಪಿ. ಈತ ತನ್ನ ಹೊಟ್ಟೆಯಲ್ಲಿ 4 ಚಿನ್ನದ ಕ್ಯಾಪ್ಸುಲ್‍ಗಳನ್ನು ಸಾಗಿಸುತ್ತಿದ್ದನು. ಈ ಹಿನ್ನೆಲೆಯಲ್ಲಿ ನೌಫಲ್ ದುಬೈನಿಂದ (Dubai) ಕರಿಪುರ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ. ಚಿನ್ನ ಸ್ಮಗ್ಲಿಂಗ್ ಮಾಡುತ್ತಿದ್ದ ವಿಚಾರವನ್ನು ಅರಿತ ಪೊಲೀಸರು ಆತನನ್ನು ತಪಾಸಣೆ ನಡೆಸಿದೆ. ಆ ಸಂದರ್ಭದಲ್ಲಿ ಪೊಲೀಸರಿಗೆ ಯಾವುದೇ ಚಿನ್ನ ಪತ್ತೆ ಆಗಿರಲಿಲ್ಲ. ಇದನ್ನೂ ಓದಿ: ಶಾಲೆ ಟಾರ್ಗೆಟ್ ಮಾಡಿ ಸೇನೆಯಿಂದ ಗುಂಡಿನ ದಾಳಿ – 7 ಮಕ್ಕಳು ಸೇರಿ 13 ಮಂದಿ ಸಾವು
Advertisement
Advertisement
ಬಳಿಕ ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ತಪಾಸಣೆ ನಡೆಸಿದ್ದಾರೆ. ಅಲ್ಲಿ ಎಕ್ಸ್ ರೇಯನ್ನು ಮಾಡಿದಾಗ ಹೊಟ್ಟೆಯಲ್ಲಿ 4 ಕ್ಯಾಪ್ಸುಲ್ ಚಿನ್ನ ಇರುವುದು ಪತ್ತೆ ಆಗಿದೆ. ಈ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ ನೌಫಲ್ 4 ಚಿನ್ನದ ಕ್ಯಾಪ್ಸುಲ್‍ಗಳನ್ನು ಗುದನಾಳದಲ್ಲಿ ಬಚ್ಚಿಟ್ಟುಕೊಂಡು ದುಬೈನಿಂದ ಬಂದಿರುವುದು ತಿಳಿದುಬಂದಿದೆ. ಕಳೆದ ಕೆಲವು ತಿಂಗಳ ಅವಧಿಯಲ್ಲಿ ಕರಿಪುರ ವಿಮಾನ ನಿಲ್ದಾಣದಲ್ಲಿ ವರದಿಯಾಗುತ್ತಿರುವ 59ನೇ ಚಿನ್ನದ ಕಳ್ಳಸಾಗಣೆ ಪ್ರಕರಣ ಇದಾಗಿದೆ. ಇದನ್ನೂ ಓದಿ: ಮನೆ ಕಾಯಲೆಂದು ಎರಡು ನಾಯಿ ಸಾಕಿದ್ರೂ ಹಾಡಹಗಲೇ ಕಳ್ಳತನ