ಹೈದರಾಬಾದ್: ಫೇಸ್ ಕ್ರೀಮ್ನಲ್ಲಿ ಚಿನ್ನದ ಪೇಸ್ಟ್ ಇಟ್ಟು ಸಾಗಾಟ ಮಾಡುತ್ತಿದ್ದ ವ್ಯಕ್ತಿ ಹೈದರಾಬಾದ್ನ( hyderabad) ಆರ್ಜಿಐ ವಿಮಾನ ನಿಲ್ದಾಣದಲ್ಲಿ ಪೊಲೀಸರ ಬಲೆಗೆ ಬಿದ್ದಿರುವ ಘಟನೆ ನಡೆದಿದೆ.
ಫೇಸ್ ಕ್ರೀಮ್ ಬಾಕ್ಸ್ಗಳ ಒಳಗೆ ಚಿನ್ನ ಮತ್ತು ಬೆಳ್ಳಿಯನ್ನು ಪೇಸ್ಟ್ ಮಾಡಿ ಸಾಗಿಸಲಾಗುತ್ತಿತ್ತು. 525.50 ಗ್ರಾಂ ಚಿನ್ನ( 525.50 grams gold) ಮತ್ತು 28 ಗ್ರಾಂ ಬೆಳ್ಳಿಯನ್ನು(silver) ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಒಟ್ಟು 58.16 ಲಕ್ಷ ಬೆಲೆ ಬಾಳುವ ಚಿನ್ನ,ಬೆಳ್ಳಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಅಮೆಜಾನ್ ಕಾಡಿನಲ್ಲಿ ಬೊಲಿವಿಯಾ ವಾಯುಪಡೆ ವಿಮಾನ ಪತನ – 6 ಮಂದಿ ಸಾವು
ಆರೋಪಿ ದೋಹಾದಿಂದ ಭಾರತಕ್ಕೆ ಬಂದಿಳಿದಿದ್ದ. ಖಚಿತ ಮಾಹಿತಿ ಆಧಾರದ ಮೇಲೆ ಕಸ್ಟಮ್ಸ್ ಅಧಿಕಾರಿಗಳು ಆರೋಪಿ ಚಲನವಲನ ಮೇಲೆ ನಿಗಾ ಇಟ್ಟಿದ್ದರು, ಸಿಬ್ಬಂದಿ ಈತನನ್ನು ತಪಾಸಣೆ ಮಾಡಿದ್ದಾರೆ. ಫೇಸ್ ಕ್ರೀಮ್ ಬಾಕ್ಸ್ನಲ್ಲಿ 24 ಲಕ್ಷ ರೂಪಾಯಿ ಬೆಲೆ ಬಾಳುವ ಚಿನ್ನ ಇರುವುದು ಪತ್ತೆಯಾಗಿದೆ. ಈಗ ಈತನನ್ನು ಪೊಲೀಸರು ಬಂಧಿಸಿದ್ದಾರೆ. ಓದಿ: ದಕ್ಷಿಣ ಕನ್ನಡದಲ್ಲಿ ನಿಲ್ಲದ ಪುಂಡರ ಕುಚೇಷ್ಟೆ – ಕಾರಿನಲ್ಲಿ ಹೋಗ್ತಿದ್ದ ದಂಪತಿಗೆ ಅಡ್ಡಗಟ್ಟಿ ಧಮ್ಕಿ