ಬೆಂಗಳೂರು: ಚಿನ್ನದ (Gold Price) ಬೆಲೆ ಗಗನಕ್ಕೆ ಏರುತ್ತಲೇ ಇದೆ. ಮುಂಬೈನ ಜವೇರಿ ಬಜಾರ್‌ನಲ್ಲಿ ಚಿನ್ನದ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದೆ. 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 1 ಲಕ್ಷ ಸಮೀಪಕ್ಕೆ ಹೋಗಿದೆ. ಆ ಮೂಲಕ ಹೊಸ ದಾಖಲೆ ಬರೆದಿದೆ.
24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ಈಗ 98,350 ರೂ.ಗೆ ತಲುಪಿದೆ. 1 ಲಕ್ಷ ರೂ. ಮಾರ್ಕ್ ತಲುಪಲು ಕೇವಲ 1,650 ರೂ. ದೂರದಲ್ಲಿದೆ. 22 ಕ್ಯಾರೆಟ್ ಚಿನ್ನದ ಬೆಲೆ 90,150 ರೂ. ಆಗಿದೆ. ಇದನ್ನೂ ಓದಿ: ಚಿನ್ನದ ಬೆಲೆ ಗಗನಕ್ಕೆ – ಮಾರುಕಟ್ಟೆ ಏರಿಳಿತದ ನಡುವೆಯೂ ನೆಚ್ಚಿನ ಹೂಡಿಕೆಯಾಗಲು ಕಾರಣವೇನು?
ಇತರೆ ದೇಶಗಳ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಸುಂಕ ವಿಧಿಸಿದ್ದೇ ಚಿನ್ನದ ಬೆಲೆ ದಾಖಲೆಯ ಏರಿಕೆಗೆ ಕಾರಣ ಎನ್ನಲಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಬೆಲೆ ಏರಿಕೆ ಕಂಡಿದೆ. ಹೀಗಾಗಿ, ಸುರಕ್ಷಿತ ಹೂಡಿಕೆಗಾಗಿ ಹೂಡಿಕೆದಾರರು ಚಿನ್ನದತ್ತ ಆಕರ್ಷಿತರಾಗಿದ್ದಾರೆ.
ಅಕ್ಷಯ ತೃತೀಯಕ್ಕೆ ಕೆಲವೇ ದಿನಗಳು ಬಾಕಿ ಇರುವ ಹೊತ್ತಲ್ಲೇ ಚಿನ್ನದ ಬೆಲೆ ಒಂದು ಲಕ್ಷ ಸನಿಹಕ್ಕೆ ತಲುಪಿರುವುದು ಆಭರಣ ಪ್ರಿಯರು ಬೆಚ್ಚಿಬೀಳುವಂತೆ ಮಾಡಿದೆ. ಇದನ್ನೂ ಓದಿ: 500 ರೂ. ಮುಖಬೆಲೆಯ ನಕಲಿ ನೋಟುಗಳ ಬಗ್ಗೆ ಹೈ ಅಲರ್ಟ್ – ಫೇಕ್ ನೋಟ್ ಗುರುತಿಸೋದು ಹೇಗೆ?
ಬೆಂಗಳೂರಲ್ಲಿ ಚಿನ್ನದ ದರ ಎಷ್ಟಿದೆ?
ಬೆಂಗಳೂರಿನಲ್ಲಿ 24 ಕ್ಯಾರೆಟ್‌ನ 10 ಗ್ರಾಂಗೆ 98,350 ರೂ. ಇದೆ. 22 ಕ್ಯಾರೆಟ್‌ನ ಚಿನ್ನದ ಬೆಲೆ 90,150 ರೂ.ಗೆ ಏರಿಕೆಯಾಗಿದೆ.