ಗದಗ: ಜಿಲ್ಲೆಯ ಹೊಸೂರ ಭಾಗದ ಕಪ್ಪತ್ತಗುಡ್ಡ ಕಣಿವೆಯಲ್ಲಿ ಅಕ್ರಮವಾಗಿ ಅದಿರು ತೆಗೆಯುವ ಕೆಲಸ ನಡೀತಿದೆ. ಈ ಗುಡ್ಡದಲ್ಲಿ ಚಿನ್ನ ಸಿಗುವ ಹತ್ತಾರು ಗುಹೆಗಳಿದ್ದು, ಜನರು ಜೀವದ ಹಂಗು ತೊರೆದು ಅದಿರು ತಂದು ಚಿನ್ನ ತೆಗೆಯುತ್ತಿದ್ದಾರೆ.
Advertisement
ನೂರಾರು ವರ್ಷಗಳ ಹಿಂದೆ ಬ್ರಿಟಿಷರು ಸಾಂಗ್ಲಿ ಮೈನಿಂಗ್ ಹೆಸರಿನಲ್ಲಿ ಅದಿರು ಮೂಲಕ ಚಿನ್ನ ತೆಗೆಯುತ್ತಿದ್ದರು. ನಂತರದಲ್ಲಿ ಕಾರಣಾಂತರಗಳಿಂದ ಸಾಂಗ್ಲಿ ಮೈನಿಂಗ್ ಸ್ಥಗಿತಗೊಂಡಿತ್ತು. ಬಳಿಕ 1980ರ ದಶಕದಲ್ಲಿ ಭಾರತ್ ಗೋಲ್ಡ್ ಮೈನ್ಸ್ ಲಿಮಿಟೆಡ್ ಎಂಬ ಕಂಪನಿ ಕೇಂದ್ರ ಸರ್ಕಾರದ ಅಧೀನದಲ್ಲಿ ನಿಕ್ಷೇಪಗಳನ್ನ ತೆಗೆಯುತ್ತಿದ್ರು. ಈ ವೇಳೆ ತೋಡಿರುವ ಸುರಂಗ ಗುಹೆಗಳು ಹಾಗೆ ಇವೆ. ಹೀಗಾಗಿ ಈ ಗುಹೆಗಳ ಮೂಲಕ ಈಗಲೂ ಅದಿರು ತರುವ ಜನರು ಇದನ್ನ ಬಂಗಾರದ ಗುಂಡಿ ಅಂತಾನೇ ಕರೆಯುತ್ತಾರೆ.
Advertisement
Advertisement
500 ಮೀಟರ್ ಆಳಕ್ಕೆ ಹೋದಂತೆ ಕಡಿದಾಗೋ ಈ ಗುಹೆ ಕವಲೊಡೆದು ನಾಲ್ಕೈದು ಕಿಲೋಮೀಟರ್‍ವರೆಗೆ ಕ್ರಮಿಸಿದೆ. ಇಲ್ಲಿ ಅನೇಕ ಬಾರಿ ಗುಹೆಗಳು ಕುಸಿದು ಸಾವುನೋವುಗಳು ಸಂಭವಿಸಿದೆ. ಇಲ್ಲಿನ ಒಂದು ಟನ್ ಮಣ್ಣಿನಿಂದ 2 ರಿಂದ 4 ಗ್ರಾಂ ಚಿನ್ನ ತೆಗೆಯಬಹುದಾಗಿದೆ.
Advertisement
ಚಿನ್ನ ಸಂಸ್ಕರಣೆಗೆ ಸೈನೇಡ್ ಬಳಕೆಯಿಂದ ಗ್ರಾಮದ ಜನರಿಗೆ ಅನೇಕ ಪರಿಣಾಮ ಉಂಟಾಗುವ ಸಾಧ್ಯತೆಗಳಿವೆ. ಇಷ್ಟೆಲ್ಲಾ ನಡೆಯುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದಿರೋದು ಅನುಮಾನಕ್ಕೆ ಕಾರಣವಾಗಿದೆ.