ತಿರುವನಂತಪುರಂ: ಚಿನ್ನದ ವ್ಯಾಪಾರಿಯೊಬ್ಬರು (Gold Merchant) ಪ್ರಸಿದ್ಧ ಗುರುವಾಯೂರು (Guruvayur Temple) ದೇಗುಲಕ್ಕೆ ಚಿನ್ನದ ಕಿರೀಟವನ್ನು ನೀಡುತ್ತಿರುವ ಮೂಲಕ ಇದೀಗ ಎಲ್ಲರ ಗಮನಸೆಳೆದಿದ್ದಾರೆ.
ಕೊಯಮತ್ತೂರಿನಲ್ಲಿ ಚಿನ್ನದ ಉದ್ಯಮ ನಡೆಸುತ್ತಿರುವ ತ್ರಿಶೂರ್ ಮೂಲದ ಕೆ.ವಿ ರಾಜೇಶ್ ಆಚಾರ್ಯ ತನ್ನ ಹುಟ್ಟುಹಬ್ಬದ ದಿನದಂದು ಈ ಉಡುಗೊರೆಯನ್ನು ನೀಡಲಿದ್ದಾರೆ.
Advertisement
Advertisement
ಸೆಪ್ಟೆಂಬರ್ 6ರ ಬುಧವಾರದಂದು ಶ್ರೀ ಕೃಷ್ಣ ಜನ್ಮಾಷ್ಟಮಿ ಇದೆ. ಅದೇ ದಿನ ದೇವರಿಗೆ 38 ಪವನ್ ನ ಈ ಚಿನ್ನದ ಕಿರೀಟವನ್ನು (Golden Crown) ಧರಿಸಲಾಗುತ್ತದೆ. ಜನ್ಮಾಷ್ಟಮಿ ದಿನ ಕಾಣಿಕೆಯಾಗಿ ಸ್ವೀಕರಿಸಿದ ವಸ್ತುಗಳನ್ನು ವಿಗ್ರಹದ ಮೇಲೆ ಧರಿಸಲಾಗುತ್ತದೆ. ನಂತರ ದೇವಸ್ವಂನ ರಿಜಿಸ್ಟರ್ ನಲ್ಲಿ ದಾಖಲಿಸಲಾಗುತ್ತದೆ ಮತ್ತು ಸುರಕ್ಷಿತ ಲಾಕರ್ ಗೆ ವರ್ಗಾಯಿಸಲಾಗುತ್ತದೆ. ಇದನ್ನೂ ಓದಿ: ಗಂಡಸರೆ ನನ್ನ ಮುಟ್ಟಬೇಡಿ, ನಾನು ಪವಿತ್ರಳು : ರಾಖಿ ಸಾವಂತ್ ಮನವಿ
Advertisement
Advertisement
ಕಳೆದ ತಿಂಗಳು ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅವರ ಪತ್ನಿ ದುರ್ಗಾ ಅವರು ಗುರುವಾಯೂರಪ್ಪನವರಿಗೆ 14 ಲಕ್ಷ ಮೌಲ್ಯದ ಚಿನ್ನದ ಕಿರೀಟವನ್ನು ಅರ್ಪಿಸಿದ್ದರು. ಜೊತೆಗೆ ಶ್ರೀಗಂಧವನ್ನು ಅರೆಯುವ ಅಂದಾಜು 2 ಲಕ್ಷ ಮೌಲ್ಯದ ಯಂತ್ರವನ್ನೂ ದೇಗುಲಕ್ಕೆ ದಾನ ಮಾಡಿದ್ದರು. ಇನ್ನು ಉದ್ಯಮಿ ಡಾ. ರವಿ ಪಿಳ್ಳೈ ಅವರು 2021ರ ಸೆಪ್ಟೆಂಬರ್ನಲ್ಲಿ 725 ಗ್ರಾಂ. ಚಿನ್ನದ ಕಿರೀಟವನ್ನು ಉಡುಗೊರೆಯಾಗಿ ನೀಡಿದ್ದರು.
Web Stories