ಚಿಕ್ಕಬಳ್ಳಾಪುರ: ಜಿಲ್ಲೆಯ ಚಿನ್ನದಂಗಡಿ ಮಾಲೀಕ 71 ವರ್ಷದ ವ್ಯಕ್ತಿಗೆ ಕೊರೊನಾ ಸೋಂಕು ದೃಢವಾದ ಹಿನ್ನೆಲೆಯಲ್ಲಿ ಚಿಂತಾಮಣಿ ನಗರದಲ್ಲಿ ಹೈ ಅಲರ್ಟ್ ಆಗಿದೆ. ಇಂದಿನಿಂದ ಚಿಂತಾಮಣಿ ನಗರದಲ್ಲಿ ಚಿನ್ನದಂಗಡಿ, ಚಪ್ಪಲಿ, ಬಟ್ಟೆ, ಫ್ಯಾನ್ಸಿ ಸ್ಟೋರ್ ಸೇರಿ ಬಹುತೇಕ ಅಂಗಡಿಗಳನ್ನ ಬಂದ್ ಮಾಡಲಾಗಿದೆ.
Advertisement
ಕೊರೊನಾ ಸೋಂಕಿತ ವ್ಯಕ್ತಿ ಚಿನ್ನದಂಗಡಿ ಮಾಲೀಕನಾಗಿರುವ ಸಮುದಾಯದ ಸಂಪರ್ಕದಲ್ಲಿದ್ರು ಅಂತ ಎಲ್ಲಾ ಚಿನ್ನದಂಗಡಿಗಳನ್ನ ಬಂದ್ ಮಾಡಲಾಗಿದೆ. ಚಿಂತಾಮಣಿ ನಗರ ವಾಣಿಜ್ಯ ನಗರಿಯಾಗಿದ್ದು ವ್ಯಾಪಾರ ವಹಿವಾಟಿಗೆ ಸಾಕಷ್ಟು ಪ್ರಖ್ಯಾತಿ ಪಡೆದಿದೆ. ಸೋಂಕಿತ ಚಿನ್ನದಂಗಡಿ ಮಾಲೀಕನ ಸಮುದಾಯದವರು ಹಲವು ವ್ಯಾಪಾರ ವಹಿವಾಟುಗಳನ್ನು ನಡೆಸುತ್ತಿದ್ದಾರೆ.
Advertisement
Advertisement
ಸೋಂಕಿತನ ಪತ್ನಿ ಮೇ 4ರಂದು ಹೃದಯಾಘಾತದಿಂದ ಮೃತಪಟ್ಟಿದ್ರು ಅಂತ ಅಂತ್ಯಕ್ರಿಯೆ ಮಾಡಲಾಗಿತ್ತು. ಈ ಅಂತ್ಯಕ್ರಿಯೆಯಲ್ಲಿ ಇವರ ಸಮುದಾಯದ ನೂರಾರು ಮಂದಿ ಭಾಗಿಯಾಗಿದ್ರು. ಹೀಗಾಗಿ ಆ ಸಮುದಾಯದವರು ವ್ಯಾಪಾರ ವಹಿವಾಟು ಮಾಡುವ ಎಲ್ಲಾ ಅಂಗಡಿಗಳನ್ನ ಬಂದ್ ಮಾಡಿಸಲಾಗಿದೆ. ಕೇವಲ ಅಗತ್ಯ ವಸ್ತುಗಳಾದ ದಿನಸಿ, ಹಾಲು, ತರಕಾರಿ ಹಾಗೂ ಕೃಷಿ ಪರಿಕರಗಳು ಕೆಲ ಅಂಗಡಿಗಳು ತೆರೆಯಲಷ್ಟೇ ಅನುಮತಿ ನೀಡಲಾಗಿದೆ.
Advertisement
ಲಾಕ್ ಡೌನ್ 3.0 ಸಡಿಲಿಕೆಗಳ ನಂತರ ಜಿಲ್ಲೆಯ ನಗರ ಪ್ರದೇಶಗಳಲ್ಲಿ ಮಧ್ಯಾಹ್ನ 2 ಗಂಟೆಯವರೆಗೂ ಎಲ್ಲಾ ರೀತಿಯ ಅಂಗಡಿ ಮುಂಗಟ್ಟುಗಳು ತೆರೆಯಲು ಡಿ ಸಿ ಅನುಮತಿ ನೀಡಿದ್ದರು. ಆದ್ರೆ ಈಗ ಚಿಂತಾಮಣಿ ನಗರದಲ್ಲಿ ಮೊದಲ ಕೋವಿಡ್ 19 ಪ್ರಕರಣ ಪತ್ತೆಯಾದ ಹಿನ್ನೆಲೆಯಲ್ಲಿ ಬೆಳಗ್ಗೆ 11 ಗಂಟೆಯವರೆಗೆ ಮಾತ್ರ ಅಂಗಡಿಗಳನ್ನ ತೆರೆಯಲು ಅವಕಾಶವಿದೆ. ಸದ್ಯಕ್ಕೆ ಸೋಂಕಿತನ ನಿವಾಸದ 200 ಮೀಟರ್ ಸುತ್ತಳತೆಯಲ್ಲಿ ಸಂಪೂರ್ಣ ಸೀಲ್ ಡೌನ್ ಮಾಡಲಾಗಿದೆ.
ನಗರ ಹೊರವಲಯದ ಬಿಸಿಎಂ ವಸತಿ ನಿಲಯದಲ್ಲಿ ಸೋಂಕಿತನ ಪ್ರಥಮ ಸಂಪರ್ಕಿತ 42 ಮಂದಿ ಕುಟುಂಬ ಸದಸ್ಯರನ್ನ ಕ್ವಾರಂಟೈನ್ ಗೆ ಒಳಪಡಿಸಲಾಗಿದೆ. ಇನ್ನಷ್ಟು ಮಂದಿ ಕ್ವಾರಂಟೈನ್ ಗೆ ಒಳಪಡಿಸುವ ಸಾಧ್ಯತೆಯಿದೆ. ಇದಲ್ಲದೆ ಸೋಂಕಿತನ 22 ವರ್ಷದ ಮೊಮ್ಮಗನನ್ನ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಐಸೋಲೇಷನ್ ಮಾಡಲಾಗಿದ್ದು, ವೃದ್ದನ ಮೊಮ್ಮಗನಿಗೂ ಕೊರೊನಾ ಸೋಂಕು ಧೃಢವಾಗುವ ಸಾಧ್ಯತೆಯಿದೆ. ಸ್ಥಳೀಯ ಅಧಿಕಾರಿಗಳು ಈ ಬಗ್ಗೆ ಸ್ಪಷ್ಟಪಡಿಸಿದ್ದು, ಅಧಿಕೃತವಾಗಿ ರಾಜ್ಯ ಸರ್ಕಾರದಿಂದ ಹೊರಬೀಳಬೇಕಿದೆ.