ನವದೆಹಲಿ: ಜಿಂಕೆಯೊಂದು ಅತಿ ಎತ್ತರವಾಗಿ ಜಿಗಿದಿದ್ದು, ಅದನ್ನು ನೋಡಲು ಆಕಾಶದಲ್ಲಿ ಹಾರಾಡಿದ ರೀತಿಯಾಗಿಯೇ ಕಾಣುತ್ತಿದ್ದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಾಮಾನ್ಯವಾಗಿ ಕಾಡು ಪ್ರಾಣಿಗಳನ್ನು ನೋಡಿದ್ದರೆ ಒಂದಲ್ಲ ಒಂದು ರೀತಿಯಲ್ಲಿ ವಿಭಿನ್ನತೆ ಕಾಣುತ್ತದೆ. ಆದರೆ ಇಲ್ಲೊಂದು ಜಿಂಕೆಯೂ ಅಂದಾಜು 7 ಅಡಿ ಜಿಗಿದ ದೃಶ್ಯವೂ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಆ ವೀಡಿಯೋವನ್ನು ನೋಡಿದವರಿಗೆ ಜಿಂಕೆಯು ಆಕಾಶದಲ್ಲಿ ಹಾರಾಡುವ ರೀತಿ ಕಾಣುತ್ತಿದ್ದು, ವೀಡಿಯೋಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.
Advertisement
Advertisement
ಈ ವೀಡಿಯೋವನ್ನು ವೈಲ್ಡ್‍ಲೆನ್ಸ್ ಇಕೋ ಫೌಂಡೇಶನ್ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಭಾರೀ ಪ್ರಶಂಸೆಗೆ ಕಾರಣವಾಗಿದೆ. ಇದುವರೆಗೆ ವೀಡಿಯೋವನ್ನು 79 ಸಾವಿರಕ್ಕೂ ಅಧಿಕ ಜನರು ನೋಡಿದ್ದು, 5,000ಕ್ಕೂ ಅಧಿಕ ಲೈಕ್ ಹಾಗೂ 745 ಮಂದಿ ರೀಟ್ವೀಟ್ ಆಗಿದೆ. ಇದನ್ನೂ ಓದಿ: ಕೋವಿಡ್-19 ಪ್ರಕರಣ ಏರಿಕೆ – ಮದುವೆ ನೋಂದಣಿ ಸೇವೆ ಸ್ಥಗಿತ!
Advertisement
ವೀಡಿಯೋದಲ್ಲಿ ಏನಿದೆ?: ಜಿಂಕೆಯೊಂದು ಕೆರೆ ಇರುವ ಪ್ರದೇಶದಿಂದ ರಸ್ತೆಯನ್ನು ದಾಟಲು ಬಂದಿದೆ. ಉತ್ಸಾಹದಿಂದ ಹಾಗೂ ಸ್ವತಂತ್ರವಾಗಿ ಜಿಂಕೆಯೂ ಜಿಗಿದಿದೆ. ಇದು ಸಾಮಾನ್ಯ ಮನುಷ್ಯ ಇರುವ ಎತ್ತರದಷ್ಟು ಹಾಗೂ ಉದ್ದವಾಗಿ ಜಿಗಿದಿದೆ. ಉತ್ಸಾಹದಿಂದ ಜಿಗಿದ ಜಿಂಕೆಯು ನೋಡುಗರಿಗೆ ಇದು ಆಕಾಶದಲ್ಲಿ ಹಾರುಡುತ್ತಿದೆ ಎನ್ನುವಂತೆ ತೋರುತ್ತಿದೆ. ಇದನ್ನೂ ಓದಿ: ಮಾನ್ಯ ಡಿಕೆಶಿ ಅವರೇ, ನಿಮ್ಮ ಆರೋಗ್ಯ ಹೇಗಿದೆ?: ಬಿಜೆಪಿ
Advertisement
And the gold medal for long & high jump goes to…….@ParveenKaswan
Forwarded as received pic.twitter.com/iY8u37KUxB
— WildLense® Eco Foundation ???????? (@WildLense_India) January 15, 2022
ಈ ವೀಡಿಯೋವನ್ನು ನೋಡಿದ ನೆಟ್ಟಿಗರು ದಂಗಾಗಿದ್ದಾರೆ. ಎತ್ತರ ಜಿಗಿತ ಹಾಗೂ ಉದ್ದ ಜಿಗಿತದಲ್ಲಿ ಜಿಂಕೆಗೆ ಚಿನ್ನದ ಪದಕವನ್ನು ನೀಡಬಹುದು ಎಂದು ಒಬ್ಬರೂ ತಿಳಿಸಿದರೇ ಮತ್ತೊಬ್ಬರು ವಾವ್, ನಾನು ಎಂದಿಗೂ ಇಷ್ಟು ಎತ್ತರವಾಗಿ ಜಿಗಿದಿದ್ದನ್ನು ನೋಡಿರಲಿಲ್ಲ. ಇದು ಹಾರುತ್ತಿರುವಂತೆ ಕಾಣುತ್ತಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಇದು ನೋಡಲು ಯಾವುದೋ ಆಕ್ಷನ್ ಸಿನಿಮಾ ಎಂಬಂತೆ ಭಾಸವಾಗುತ್ತಿದೆ ಎಂದು ಇನ್ನೊಬ್ಬರು ಹೇಳಿದ್ದಾರೆ.