ವಿಜಯಪುರ/ಹುಬ್ಬಳ್ಳಿ: ಸಿನಿಮೀಯ ರೀತಿಯಲ್ಲಿ ಬ್ಯಾಂಕ್ ದರೋಡೆ ಮಾಡಿ, 10.5 ಕೋಟಿ ರೂ. ಮೌಲ್ಯದ ಚಿನ್ನವನ್ನು ಕಳ್ಳತನ ಮಾಡಿದ್ದ ಕೇಸ್‌ಗೆ ಸಂಬಂಧಿಸಿದಂತೆ ರೋಚಕ ಸಂಗತಿಯೊಂದು ಬಯಲಾಗಿದ್ದು, ಹುಬ್ಬಳ್ಳಿ ಜಿಲ್ಲೆಗೆ ಲಿಂಕ್ ಇಲ್ಲದೇ ಇರೋದು ಗೊತ್ತಾಗಿದೆ.
ಮೇ 25 ರಂದು ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಣಣದ ಕೆನರಾ ಬ್ಯಾಂಕ್‌ನಲ್ಲಿ 58 ಕೆ.ಜಿ 975.94 ಗ್ರಾಂ ಚಿನ್ನಾಭರಣ ಹಾಗೂ 5.20 ಲಕ್ಷ ರೂ. ದರೋಡೆ ನಡೆದಿತ್ತು. ತನಿಖೆ ವೇಳೆ ಈ ಕೇಸ್‌ಗೆ ಹುಬ್ಬಳ್ಳಿ ಜಿಲ್ಲೆಗೆ ಲಿಂಕ್ ಇರುವುದು ಗೊತ್ತಾಗಿದ್ದು, ಶಾಲೆಯ ಚೇರಮನ್ ಆಗಿರುವ ಆರೋಪಿ ಶೇಖರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಜೊತೆಗೆ ಕೇಶ್ವಾಪುರದಲ್ಲಿರುವ ಮನೆ ಹಾಗೂ ಗದಗ ರಸ್ತೆಯಲ್ಲಿನ ತನ್ನ ಶಾಲೆಯೊಂದರಲ್ಲಿ ಚಿನ್ನ ಕರಗಿಸಿರುವುದು ತಿಳಿದುಬಂದಿದೆ.ಇದನ್ನೂ ಓದಿ: ಹುಲಿಗಳ ಹತ್ಯೆ ಬಳಿಕ ಗಸ್ತು ತೀವ್ರಗೊಳಿಸಲು ಕ್ರಮ – ಕಾಡಿನಲ್ಲಿ ಜಾನುವಾರು ಮೇಯಿಸುವುದಕ್ಕೆ ಕಡಿವಾಣ
ಸದ್ಯ ಪೊಲೀಸರು ಶಾಲೆ ಸೇರಿದಂತೆ ಕೆಲವು ಸ್ಥಳಗಳಲ್ಲಿ ಮಹಜರು ಮಾಡಿದ್ದು, ಚಿನ್ನ ಕರಗಿಸಲು ಬಳಸಿದ ಕೆಲವು ವಸ್ತುಗಳನ್ನ ವಶಕ್ಕೆ ಪಡೆದಿದ್ದಾರೆ.
ಘಟನೆ ಏನು?
ಆರೋಪಿ ವಿಜಯಕುಮಾರ ಹುಬ್ಬಳ್ಳಿಯ ಕೋಠಾರಿ ನಗರದ ಕೆನರಾ ಬ್ಯಾಂಕ್‌ನಲ್ಲಿ ಸೀನಿಯರ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದ. ಇನ್ನೋರ್ವ ಆರೋಪಿ ಚಂದ್ರಶೇಖರ ಹುಬ್ಬಳ್ಳಿಯಲ್ಲಿ ಖಾಸಗಿ ಉದ್ಯೋಗಿಯಾಗಿದ್ದ. ಮೂರನೇ ಆರೋಪಿ ಸುನೀಲ್ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಮೇ 25ರಂದು ಬ್ಯಾಂಕ್‌ನ ಕಿಟಕಿಯ ಸರಳುಗಳನ್ನು ಕಟ್ ಮಾಡಿ, ಒಳನುಗ್ಗಿ, ಧಾರಾಕಾರ ಮಳೆಯಲ್ಲೇ ಸಿನಿಮೀಯ ಶೈಲಿಯಲ್ಲಿ ಬಂದು 58 ಕೆ.ಜಿ 975.94 ಗ್ರಾಂ ಚಿನ್ನಾಭರಣ ಹಾಗೂ 5.20 ಲಕ್ಷ ರೂ. ನಗದು ಕದ್ದು ಪರಾರಿಯಾಗಿದ್ದರು. ಜೊತೆಗೆ ಪೊಲೀಸರ ದಿಕ್ಕು ತಪ್ಪಿಸಲು ಗೊಂಬೆ ಇಟ್ಟು ವಾಮಾಚಾರ ಮಾಡಿದ್ದರು. ಪರಾರಿಯಾಗಿದ್ದ ಮೂವರನ್ನು ಬಂಧಿಸಿದ್ದರು.ಇದನ್ನೂ ಓದಿ: ರವಿಕುಮಾರ್ ಸದನದಲ್ಲಿ ಅಲ್ಲ, ನಿಮ್ಮಾನ್ಸ್‌ನಲ್ಲಿ ಇರಬೇಕು: ಪ್ರಿಯಾಂಕ್ ಖರ್ಗೆ ಲೇವಡಿ