ಕೊಳಚೆ ಪ್ರದೇಶದಲ್ಲಿ ಮುಕ್ಕಾಲು ಕೆಜಿ ಚಿನ್ನ ಬಚ್ಚಿಟ್ಟಿದ್ದ ಖದೀಮ – 18 ಅರೆಸ್ಟ್ ವಾರೆಂಟ್ ಇದ್ದ ಸೆಲೆಬ್ರಿಟಿ ಮನೆಗಳ್ಳನ ಬಂಧನ

Public TV
2 Min Read
Bengaluru Escape Karthik

– ಗರ್ಲ್‌ಫ್ರೆಂಡ್ ಜೊತೆ ಕ್ಯಸಿನೋದಲ್ಲಿ ಹೆಡೆಮುರಿಕಟ್ಟಿದ ಪೊಲೀಸರು

ಬೆಂಗಳೂರು: ದೊಡ್ಡ ದೊಡ್ಡ ಬಂಗಲೆಗಳನ್ನೇ ಟಾರ್ಗೆಟ್ ಮಾಡಿ ಕೆಜಿ ಕೆಜಿ ಚಿನ್ನ (Gold) ದೋಚುತ್ತಿದ್ದ (Theft) ಖತರ್ನಾಕ್ ಕಳ್ಳನನ್ನು ಗೋವಿಂದರಾಜನಗರ ಪೊಲೀಸರು ಹೆಡೆಮುರಿಕಟ್ಟಿದ್ದಾರೆ.

ಬೆಂಗಳೂರಿನ (Bengaluru) ಸೆಲೆಬ್ರಿಟಿ ಮನೆಗಳ್ಳ ಕಾರ್ತಿಕ್ ಅಲಿಯಾಸ್ ಎಸ್ಕೇಪ್ ಕಾರ್ತಿಕ್ (Escape Karthik) ಅರೆಸ್ಟ್ ಆಗಿದ್ದಾನೆ. ಆರೋಪಿ ಬಳಿಯಿಂದ ಬರೋಬ್ಬರಿ 1 ಕೆಜಿ 200 ಗ್ರಾಂ ಕದ್ದ ಚಿನ್ನವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈತನ ವಿರುದ್ಧ ಬೆಂಗಳೂರಿನಲ್ಲಿ 83 ಕ್ಕೂ ಹೆಚ್ಚು ಮನೆಗಳ್ಳತನ ಕೇಸ್‌ಗಳಿವೆ. ನಗರ ಮಾತ್ರವಲ್ಲದೆ ಕರ್ನಾಟಕದ ಬೇರೆ ಭಾಗಗಳಲ್ಲಿಯೂ ಕಳ್ಳತನದ ಆರೋಪವಿದೆ.

Escape Karthik

ಕೊಳಚೆ ಪ್ರದೇಶದಲ್ಲಿ ಬಚ್ಚಿಟ್ಟಿದ್ದ ಚಿನ್ನ:
ಎಸ್ಕೇಪ್ ಕಾರ್ತಿಕ್ ಮನೆಯೊಂದರಲ್ಲಿ ಮುಕ್ಕಾಲು ಕೆಜಿ ಚಿನ್ನವನ್ನು ಕದ್ದು ತನ್ನ ಗರ್ಲ್‌ಫ್ರೆಂಡ್ ಜೊತೆ ಗೋವಾದ ಕ್ಯಸಿನೋಗೆ ಹೊರಟಿದ್ದ. ಆದರೆ ರೈಲು ತಡವಾಗಿದ್ದರಿಂದ ಕದ್ದಿದ್ದ ಚಿನ್ನವನ್ನು ಅಡವಿಡಲಾಗದೇ ಖತರ್ನಾಕ್ ಪ್ಲ್ಯಾನ್ ಮಾಡಿ ಕೊಳಚೆ ಪ್ರದೇಶದಲ್ಲಿ ಹೂತಿಟ್ಟು ಎಸ್ಕೇಪ್ ಆಗಿದ್ದ.

ಓಕಳಿಪುರಂನಲ್ಲಿ ರೈಲ್ವೆ ಕಾಲೋನಿಯಲ್ಲಿ ಮೂತ್ರ ವಿಸರ್ಜನೆಗೆಂದು ಹೋಗಿದ್ದ ಕಾರ್ತಿಕ್ ಯಾರೂ ಓಡಾಡದ ಕೊಳಚೆ ಜಾಗದಲ್ಲಿ 2 ಅಡಿ ಗುಂಡಿ ತೆಗೆದು ಕದ್ದ ಚಿನ್ನವನ್ನು ಹೂತಿಟ್ಟಿದ್ದ. ಗುಂಡಿ ತೆಗೆದ ಜಾಗದಲ್ಲಿ ಗುರುತಿಗೆ ಮೇಲೆ ಕಲ್ಲೊಂದನ್ನು ಇಟ್ಟಿದ್ದ. ಬಳಿಕ ಗರ್ಲ್‌ಫ್ರೆಂಡ್ ಜೊತೆ ಗೋವಾಕ್ಕೆ ಹೋಗಿದ್ದ.

ಕೆಲ ದಿನಗಳ ಹಿಂದೆ ಗೋವಾದ ಕ್ಯಸಿನೋದಲ್ಲಿ ಗೆಳತಿಯ ಜೊತೆ ಸಿಕ್ಕಿಬಿದ್ದಿದ್ದ ಆರೋಪಿ ಕದ್ದ ಚಿನ್ನ ಎಲ್ಲಿಟ್ಟಿದ್ದ ಎಂಬುದನ್ನು ಪೊಲೀಸರ ಮುಂದೆ ಬಾಯಿಬಿಟ್ಟಿದ್ದಾನೆ. ಚಿನ್ನವನ್ನು ಹೂತಿಟ್ಟಿದ್ದ ಜಾಗ ಕಂಡು ಪೊಲೀಸರೇ ದಂಗಾಗಿದ್ದಾರೆ. ಮುಕ್ಕಾಲು ಕೆಜಿ ಚಿನ್ನವನ್ನು ಮಣ್ಣಿನಿಂದ ಕಾರ್ತಿಕ್ ಹೊರಗೆ ತೆಗೆದು ಗೋವಿಂದರಾಜನಗರ ಪೊಲೀಸರ ಕೈಗೆ ಕೊಟ್ಟಿದ್ದಾನೆ. ಇದನ್ನೂ ಓದಿ: ಸೌದಿಯಲ್ಲಿ 11 ತಿಂಗಳ ಜೈಲುವಾಸದ ಬಳಿಕ ಯುವಕ ತಾಯ್ನಾಡಿಗೆ ವಾಪಸ್

ಚನ್ನೈ, ತಿರುಪತಿ ಸೇರಿದಂತೆ ಬೇರೆ ಬೇರೆ ರಾಜ್ಯದಲ್ಲಿಯೂ ಕಳ್ಳತನ ಮಾಡುತ್ತಿದ್ದ ಕಾರ್ತಿಕ್ ವಿರುದ್ಧ ನ್ಯಾಯಾಲಯದಿಂದ 18 ಅರೆಸ್ಟ್ ವಾರೆಂಟ್ ಬಾಕಿ ಇತ್ತು. ಆರೋಪಿ ಕಾರ್ತಿಕ್ ಒಂಟಿ ಮನೆಗಳನ್ನು ಮತ್ತು ಬೀಗ ಹಾಕಿದ್ದ ಮನೆಗಳನ್ನು ಟಾರ್ಗೆಟ್ ಮಾಡುತ್ತಿದ್ದ. ಯಾವಾಗಲೂ ಒಂಟಿಯಾಗಿ ಕಳ್ಳತನ ಮಾಡುತ್ತಿದ್ದ ಕಾರ್ತಿಕ್ ಈ ಬಾರಿ ಇಬ್ಬರು ಸಹಚಚರ ಜೊತೆಗೆ ಕಳ್ಳತನ ಮಾಡಿದ್ದಾನೆ.

ಈ ಹಿಂದೆ ಕೊಲೆ ಕೇಸ್‌ಗಳಲ್ಲಿ ಭಾಗಿಯಾಗಿದ್ದ ಇಬ್ಬರನ್ನು ಜೊತೆಗೆ ಸೇರಿಸಿಕೊಂಡು ಕಾರ್ತಿಕ್ ಕಳ್ಳತನ ಮಾಡುತ್ತಿದ್ದ. ಕದ್ದ ಚಿನ್ನವನ್ನು ಒಂದೇ ಕಡೆ ಅಡವಿಡುತ್ತಿದ್ದ. ನಂತರ ಗರ್ಲ್‌ಫ್ರೆಂಡ್ ಜೊತೆ ಗೋವಾದ ಕ್ಯಸಿನೋಗೆ ಹೋಗಿ ಆ ಹಣ ಖರ್ಚು ಮಾಡುತ್ತಿದ್ದ. ಸದ್ಯ ಆರೋಪಿ ಬಳಿಯಿಂದ 70 ಲಕ್ಷ ರೂ. ಮೌಲ್ಯದ ಚಿನ್ನವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಇದನ್ನೂ ಓದಿ: ಸಾಮಾಜಿಕ ಜಾಲತಾಣದಲ್ಲಿ ಶಿವಾಜಿಗೆ ಅಪಮಾನ – ಧಾರವಾಡದ ಇಬ್ಬರು ಅರೆಸ್ಟ್‌

Share This Article