ಹಾಸನ: ಮನೆಯ ಬಾಗಿಲು ಮುರಿದು ಚಿನ್ನ, ಬೆಳ್ಳಿ, ನಗದನ್ನು ದೋಚಿ ಮನೆಯ ಮಾಲೀಕನ ಕಾರಿನಲ್ಲೇ ತುಂಬಿಕೊಂಡು ಕಳ್ಳರು ಪರಾರಿಯಾದ ಘಟನೆ ಹಾಸನದ (Hassan) ವಿದ್ಯಾನಗರದಲ್ಲಿ ನಡೆದಿದೆ.
ನಗರದ ವನಜಾಕ್ಷಿ ಎಂಬುವವರು ಕಳೆದ ಹತ್ತು ದಿನಗಳ ಹಿಂದೆ ಮನೆ, ಗೇಟ್‍ಗಳಿಗೆ ಬೀಗ ಹಾಕಿಕೊಂಡು ಬೆಂಗಳೂರಿನಲ್ಲಿರುವ (Bengaluru) ಮಗನ ಮನೆ ತೆರಳಿದ್ದರು. ಮನೆಯಲ್ಲಿ ಯಾರು ಇಲ್ಲದ್ದನ್ನು ಗಮನಿಸಿರುವ ಕಳ್ಳರು ಗೇಟ್ ಬೀಗ ಒಡೆದು, ಮನೆಯ ಬಾಗಿಲಿನ ಲಾಕ್ ಮುರಿದು ಒಳಗೆ ನುಗ್ಗಿದ್ದಾರೆ. ಇದನ್ನೂ ಓದಿ: ಇಂಗ್ಲಿಷ್ ಪರೀಕ್ಷೆಗೆ ಹೆದರಿ ಮನೆ ಬಿಟ್ಟ ಮಕ್ಕಳು – ಸಕಲೇಶಪುರದಲ್ಲಿ ನಾಪತ್ತೆಯಾದವರು ಬೆಂಗಳೂರಲ್ಲಿ ಪತ್ತೆ
Advertisement
ಮನೆಯ ರೂಂನಲ್ಲಿದ್ದ ಬೀರುವಿನ ಲಾಕ್ ಒಡೆದು ಅದರಲ್ಲಿಟ್ಟಿದ್ದ ಚಿನ್ನ, ಬೆಳ್ಳಿ, ನಗದನ್ನು ಕದ್ದಿದ್ದಾರೆ. ಬಳಿಕ ಮನೆಯಲ್ಲಿದ್ದ ಕಾರಿನ ಕೀ ತೆಗೆದುಕೊಂಡು ಇನ್ನೊಂದು ಗೇಟ್‍ನ ಬೀಗ ಒಡೆದು ಕಾರನ್ನು ಕದ್ದೊಯ್ದಿದ್ದಾರೆ.
Advertisement
Advertisement
ಸಂಬಂಧಿಕರು ಮನೆಯ ಬಳಿ ಬಂದಾಗ ಕಳ್ಳತನ ನಡೆದಿರುವುದು ತಿಳಿದಿದೆ. ಕೂಡಲೇ ಪೊಲೀಸರಿಗೆ ವಿಷಯ ತಿಳಿಸಿದ್ದು, ಸ್ಥಳಕ್ಕೆ ಪೊಲೀಸರು, ಶ್ವಾನದಳ, ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
Advertisement
ಬಡಾವಣೆ ಪೊಲೀಸ್ (Police) ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: ಕಾಂತಾರ 2ಗೆ ಬಿಗ್ ರಿಲೀಫ್ – ಅಧಿಕಾರಿಗಳಿಂದ ಕ್ಲೀನ್ ಚಿಟ್