ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಪವಿತ್ರ ಸ್ಥಳವಾಗಿದ್ದು, ಇಲ್ಲಿಗೆ ಅನೇಕ ಭಕ್ತರು ಭೇಟಿ ನೀಡುತ್ತಾರೆ. ಆದರೆ ವಿದೇಶಿಗರಿಗೆ ಮಾತ್ರ ಈ ಸ್ಥಳ ಮೋಜು ಮಸ್ತಿಯ ತಾಣವಾಗಿ ಪರಿಣಮಿಸಿದೆ. ಬೀಚ್‍ನಲ್ಲಿ ಮದ್ಯ ಸೇವಿಸಿ, ನಗರದಲ್ಲಿ ಮನಬಂದಂತೆ ವರ್ತಿಸುತ್ತಿದ್ದಾರೆ.
ನಗರದ ಇಂಟರ್ ನ್ಯಾಷನಲ್ ಬಾರ್ ಆಂಡ್ ರೆಸ್ಟೋರೆಂಟ್‍ನಲ್ಲಿ ಇಂದು ವಿದೇಶಿಗನೊಬ್ಬ ನಾಲ್ಕು ಬಾಟಲ್ ಮದ್ಯ ಸೇವಿಸಿದ್ದಾನೆ. ಬಳಿಕ ಕುಡಿದ ಅಮಲಿನಲ್ಲಿಯೇ ಅಲ್ಲಿಂದ ಹೊರ ಬಂದು ತೂರಾಡಿ, ಬಾರ್ ಮುಂಭಾಗದ ಚರಂಡಿಗೆ ಬಿದ್ದು ಒದ್ದಾಡಿದ್ದಾನೆ. ಇದನ್ನು ನೋಡಿದ ಪೊಲೀಸರು ಹಾಗೂ ಸ್ಥಳೀಯರು ಆತನನ್ನು ರಕ್ಷಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಕಾರವಾರದ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ.
Advertisement
Advertisement
ಈ ಹಿಂದೆ ವಿದೇಶಿ ಪ್ರಜೆಯೊಬ್ಬ ಮದ್ಯದ ಮತ್ತಿನಲ್ಲಿ ಡ್ರಗ್ಸ್ ಸೇವಿಸಿ, ಗೋಕರ್ಣದ ಬೀದಿ ಬೀದಿಗಳಲ್ಲಿ ಬೆತ್ತಲಾಗಿ ನಡೆದಾಡಿ ಭಾರೀ ಆವಾಂತರ ಸೃಷ್ಟಿಸಿದ್ದ. ಗೋಕರ್ಣದ ಓಂ ಬೀಜ್‍ಗೆ ಬರುವ ಬಹುತೇಕ ವಿದೇಶಿಗರು ತಿಂಗಳುಗಟ್ಟಲೇ ಇಲ್ಲಿಯೇ ನೆಲೆಸಿ, ಮೋಜು ಮಸ್ತಿ ಮಾಡುತ್ತಿರುತ್ತಾರೆ. ಕಂಠಪೂರ್ತಿ ಮದ್ಯ ಸೇವಿಸಿ, ಡ್ರಗ್ಸ್ ಅಥವಾ ಅಕ್ರಮವಾಗಿ ದೊರಕುವ ಗಾಂಜಾ ಸೇವಿಸಿ ಮನ ಬಂದಂತೆ ವರ್ತಿಸುತ್ತಿರುತ್ತಾರೆ. ವಿದೇಶಿಗರ ಈ ವರ್ತನೆಯಿಂದಾಗಿ ಸ್ಥಳೀಯರ ಬೇಸರ ವ್ಯಕ್ತಪಡಿಸಿದ್ದು, ಇದಕ್ಕೆ ಸೂಕ್ತ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv