– 2047 ವರೆಗೂ 24×7 ಕೆಲಸ.. ಇದು ಮೋದಿಯ ಗ್ಯಾರಂಟಿ
– ನನ್ನ ಕಣ ಕಣವೂ ನಿಮಗಾಗಿ, ದೇಶಕ್ಕಾಗಿ ಎಂದ ಪ್ರಧಾನಿ
ನವದೆಹಲಿ: ನಾನು ನನಗಾಗಿ ಹುಟ್ಟಿಲ್ಲ, ಜೀವಿಸುತ್ತಿಲ್ಲ. ನಿಮ್ಮ ಸೇವೆಗೆ ದೇವರು ನನ್ನ ಕಳುಹಿಸಿದ್ದಾನೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದರು.
ದೆಹಲಿಯಲ್ಲಿ (New Delhi) ಚುನಾವಣಾ ಸಮಾವೇಶದಲ್ಲಿ ಮಾತನಾಡಿದ ಅವರು, ನಿಮ್ಮ ಸೇವೆಗೆ ದೇವರು ನನ್ನ ಕಳಿಹಿಸಿದ್ದಾನೆ. 50-60 ವರ್ಷದ ಹಿಂದೆ ಮನೆ ಬಿಟ್ಟಾಗ ನಾನು ಕೆಂಪು ಕೋಟೆಯಲ್ಲಿ ಧ್ವಜ ಹಾರಿಸುವ ನಿರೀಕ್ಷೆ ಇರಲಿಲ್ಲ. 50-60 ವರ್ಷ ಬಿಡುವಾಗ ಎಲ್ಲವನ್ನು ಬಿಟ್ಟಿದ್ದೆ. ಈಗ 140 ಕೋಟಿ ಜನರು ನನ್ನ ಕುಟುಂಬವಾಗಿದೆ. ನಾನು ನನಗಾಗಿ ಹುಟ್ಟಿಲ್ಲ, ಜೀವಿಸುತ್ತಿಲ್ಲ. ನಿಮ್ಮಗಾಗಿ, ನಿಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಜೀವಿಸುತ್ತಿದ್ದೇನೆ ಎಂದು ತಿಳಿಸಿದರು. ಇದನ್ನೂ ಓದಿ: ಎಲ್ಲಾ ನಾಯಕರು ಬಿಜೆಪಿ ಕಚೇರಿಗೆ ಬರ್ತೀವಿ.. ಎಲ್ಲರನ್ನೂ ಒಟ್ಟಿಗೆ ಜೈಲಿಗೆ ಹಾಕಿ: ಕೇಜ್ರಿವಾಲ್ ಕಿಡಿ
ನನಗೆ ಯಾರೂ ಉತ್ತರಾಧಿಕಾರಿಗಳಿಲ್ಲ. 140 ಕೋಟಿ ಜನರು ನನ್ನ ಉತ್ತರಾಧಿಕಾರಿಗಳು. ಹೀಗಾಗಿ ನಾನು ನಿಮಗಾಗಿ ಹಗಲು ರಾತ್ರಿ ಶ್ರಮಪಡುತ್ತಿದ್ದೇನೆ. ನನ್ನ ಕಣ ಕಣವು ನಿಮಗಾಗಿ, ದೇಶಕ್ಕಾಗಿ. ನಿಮ್ಮ ಕನಸುಗಳೇ ನನ್ನ ಸಂಕಲ್ಪ. ನಿಮ್ಮ ಕನಸು ನನಸಾಗಲಿ ಎಂದೇ ಈ ಜೀವನವನ್ನು ಬಲಿದಾನ ಮಾಡುತ್ತಿದ್ದೇನೆ. 2047 ವರೆಗೂ 24×7 ಇದು ಮೋದಿಯ ಗ್ಯಾರಂಟಿ. ದೇಶವನ್ನು ಬಲಿಷ್ಠ ಮಾಡಲು ಬಲಿಷ್ಠ ಸರ್ಕಾರ ಬೇಕು. ನನಗೂ ಬಲಿಷ್ಠ ಜೊತೆಗಾರರು ಬೇಕು. ಹೀಗಾಗೀ ನಮ್ಮ ಅಭ್ಯರ್ಥಿಗಳಿಗೆ ಮತ ನೀಡಿ ಎಂದು ಜನರಲ್ಲಿ ಮನವಿ ಮಾಡಿದರು.
2024 ರ ಈ ಚುನಾವಣೆ ಭಾರತವನ್ನು ಮೂರನೇ ಆರ್ಥಿಕತೆ ಮಾಡುವುದು. 2024 ರ ಚುನಾವಣೆ ಭಾರತದಲ್ಲಿ ಬಡವರು, ಮಧ್ಯಮವರ್ಗ ಜನರ ಸುಲಭಗೊಳಿಸುವುದು, ಅವರ ಜೀವನದಲ್ಲಿ ಖುಷಿ ತರುವುದು. ಈ ಚುನಾವಣೆ ಬಡವ ಮತ್ತು ಮಧ್ಯಮ ವರ್ಗದ ಆಸ್ತಿಯನ್ನು ಕಿತ್ತುಕೊಳ್ಳುವರಿಂದ ರಕ್ಷಿಸಿಕೊಳ್ಳಲು. ಈ ಚುನಾವಣೆ ಯುವ ಸಮುದಾಯಕ್ಕೆ ಹೊಸ ಅವಕಾಶಗಳನ್ನು ಸೃಷ್ಠಿಸಲು. ಈ ಚುನಾವಣೆ ಕುಟುಂಬ ರಾಜಕೀಯ ಅಂತ್ಯಗೊಳಿಸಲು ಎಂದರು. ಇದನ್ನೂ ಓದಿ: ದೆಹಲಿಯಲ್ಲಿ ಮತದಾನ ಜಾಗೃತಿ ಮೂಡಿಸಿದ ಕರ್ನಾಟಕದ ವಿದ್ಯಾರ್ಥಿನಿ
ಬಲಿಷ್ಠವಾದ ದೇಶ ಕಟ್ಟಲು ಈ ಚುನಾವಣೆ ಮುಖ್ಯವಾಗಿದೆ. ಭಾರತವನ್ನು ಬಲಹೀನ ಮಾಡುವವರ ವಿರುದ್ಧ ಈ ಚುನಾವಣೆ. ದೇಶಕ್ಕೆ ಒಂದು ಬಲಿಷ್ಠ ಸರ್ಕಾರದ ಅವಶ್ಯಕತೆ ಇದೆ. ದೆಹಲಿ ವಿಶ್ವಕ್ಕೆ ಒಂದು ಆಕರ್ಷಣೀಯ ಕೇಂದ್ರವಾಗಬೇಕು. ಇದಕ್ಕಾಗಿ ಮೋದಿ ಸರ್ಕಾರ ಆಡಳಿತಕ್ಕೆ ಬರಬೇಕು ಎಂದು ಹೇಳಿದರು.