– ಕುರಿ, ಮೇಕೆ ಹಿಂಡಿನ ದಳಪತಿ
ಮೈಸೂರು: ಮನುಷ್ಯರ ನಡುವಿನ ಸಂಬಂಧಗಳು ಅಳಿಸಿ ಹೋಗುತ್ತಿರುವ ಇಂದಿನ ದಿನಗಳಲ್ಲಿ ಪ್ರಾಣಿಗಳ ಸಂಬಂಧಗಳು ಮನುಷ್ಯನಿಗೆ ಮಾದರಿಯಾಗಿ ಕಂಡು ಬರುತ್ತಿದೆ.
ನಂಜನಗೂಡಿನ ಕೋಣನಪುರ ಗ್ರಾಮದಲ್ಲಿ ಮೇಕೆ ಹಾಗೂ ವಾನರ ಸ್ನೇಹ ಸೋಜಿಗ ಹುಟ್ಟಿಸುತ್ತಿದೆ. ಕೋಣನಪುರದ ಬಸಪ್ಪ ಅವರಿಗೆ ಸೇರಿದ ಕುರಿ ಮೇಕೆಗಳ ಹಿಂಡಿನ ಜೊತೆ ಬೆರೆತಿರುವ ಕೋತಿಯೊಂದು ಅಚ್ಚರಿ ಮೂಡಿಸಿದೆ. ಈ ಕೋತಿ ಕಳೆದ ನಾಲ್ಕು ವರ್ಷಗಳಿಂದ ಬಸಪ್ಪ ಅವರ ಮನೆಯಲ್ಲೇ ಆಶ್ರಯ ಪಡೆದುಕೊಂಡಿದ್ದು, ಕುರಿ ಆಡುಗಳ ಜೊತೆ ತಾನೂ ಒಂದಾಗಿದೆ.
Advertisement
Advertisement
ಚಿಕ್ಕ ವಯಸ್ಸಿನಲ್ಲಿ ತಾಯಿಯಿಂದ ಬೇರ್ಪಟ್ಟ ಕೋತಿ ಬಸಪ್ಪರ ಕೈ ಸೇರಿತ್ತು. ಆಡಿನ ಹಾಲನ್ನ ಕುಡಿದು ಬೆಳೆದ ಕೋತಿ ಆಡನ್ನೇ ತಾಯಿಯಂತೆ ಕಾಣುತ್ತಿದೆ. ಹುಲ್ಲು ಮೇಯಲು ಹೋಗುವ ವೇಳೆ ಮೇಕೆಗಳ ಮೇಲೆ ಸವಾರಿ ಮಾಡಿಕೊಂಡೇ ಹೋಗುತ್ತದೆ. ಈ ವೇಳೆ ಕೋತಿ ಯಾರನ್ನೂ ಹತ್ತಿರ ಸುಳಿಯಲು ಬಿಡುವುದಿಲ್ಲ. ಯಾವುದೇ ಮೇಕೆಯಾಗಲಿ ಕುರಿಯಾಗಲಿ ಹಿಂಡಿನಿಂದ ತಪ್ಪಿಸಿಕೊಳ್ಳಲು ಅವಕಾಶ ಕೊಡುವುದಿಲ್ಲ.
Advertisement
Advertisement
ಬಸಪ್ಪ ಅವರಿಗೆ ಮನೆ ಮಗನಂತೆ ಈ ಕೋತಿ ಕಾರ್ಯನಿರ್ವಹಿಸುತ್ತದೆ. ಜೊತೆಗೆ ಕುರಿ ಮತ್ತು ಮೇಕೆ ಹಿಂಡಿನ ದಳಪತಿಯಾಗಿದೆ. ಹಿಂಡಿನ ಬಳಿ ಹೊಸಬರು ಬಂದರೆ ಹೆದರಿಸಿ ಓಡಿಸುತ್ತದೆ. ಗ್ರಾಮದ ಜನತೆಗೂ ಕೋತಿರಾಯನ ಸೇವೆ ಅಚ್ಚರಿ ಮೂಡಿಸಿದೆ.