ಪುಣೆ: ಅಸಹಜ ವರ್ತನೆ ತೋರುತ್ತಿದ್ದ 50 ವರ್ಷದ ಮಹಿಳೆಯನ್ನು ಬರೋಬ್ಬರಿ 15 ವರ್ಷ ಕೋಣೆಯೊಳಗೆ ನಗ್ನವಾಗಿಯೇ ಕೂಡಿ ಹಾಕಿದ್ದ ಮಹಿಳೆಯೊಬ್ಬರನ್ನು ರಕ್ಷಿಸಿದ ಘಟನೆ ಬುಧವಾರ ಉತ್ತರ ಗೋವಾದ ಕಾಂಡೋಲಿಂ ಗ್ರಾಮದಲ್ಲಿ ನಡೆದಿದೆ.
ಮಹಿಳೆಯನ್ನು ಸುನಿತಾ ವರ್ಲೆಕರ್ ಎಂದು ಗುರುತಿಸಲಾಗಿದ್ದು, ಈಕೆಯ ಸಹೋದರನ ಕುಟುಂಬದವರೇ ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಸದ್ಯ ಸುನಿತಾರನ್ನು ಮಹಿಳಾ ಹಕ್ಕುಗಳ ಆಯೋಗದ ಕಾರ್ಯಕರ್ತೆಯರು ರಕ್ಷಿಸಿದ್ದಾರೆ.
Advertisement
ಏನಿದು ಘಟನೆ?: ಸುನಿತಾ ಅಸಹಜ ವರ್ತನೆ ತೋರುತ್ತಿದ್ದಾರೆ ಅಂತಾ ಆಕೆಯ ಸಹೋದರ ಹಾಗೂ ಕುಟುಂಬಸ್ಥರು ಕತ್ತಲ ಕೋಣೆಯೊಳಗೆ ಕೂಡಿ ಹಾಕಿದ್ದರು. ಈ ಕುರಿತು ಸರ್ಕಾರೇತರ ಸಂಸ್ಥೆ(ಎನ್‍ಜಿಒ)ದವರು ಮಾನವ ಹಕ್ಕುಗಳ ಆಯೋಗದ ಕಾರ್ಯಕರ್ತೆಯರಿಗೆ ಮಾಹಿತಿ ರವಾನಿಸಿದ್ದು, ಸದ್ಯ ಕಾರ್ಯಕರ್ತೆಯರು ಸ್ಥಳಕ್ಕೆ ದೌಡಾಯಿಸಿ ಮಹಿಳೆಯನ್ನು ರಕ್ಷಿಸಿದ್ದಾರೆ. ಬಳಿಕ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ನಂತರ ಪಣಜಿ ಮೂಲದ ಮನೋಚಿಕಿತ್ಸೆ ಮತ್ತು ಮಾನವ ನಡತೆ ಸುಧಾರಣೆ ಕೇಂದ್ರಕ್ಕೆ ಸೇರಿಸಲಾಗಿದೆ.
Advertisement
ಸುನಿತಾರಿಗೆ ಕರೆಂಟಿಲ್ಲದ ಕತ್ತಲ ಕೋಣೆಯೊಳಗೆ ಒಡೆದ ಗೋಡೆಯ ಸಂದಿಯ ಮೂಲಕ ಆಹಾರವನ್ನು ಕೊಡುತ್ತಿದ್ದರು. ತೊಡಲು ಬಟ್ಟೆಯನ್ನು ಕೂಡ ಕೊಡುತ್ತಿರಲಿಲ್ಲ. ಒಟ್ಟಿನಲ್ಲಿ ಹೊರಗಡೆ ಪ್ರಪಂಚವನ್ನೇ ಕಾಣದ ಸುನೀತಾ ಕೋಣೆಯೊಳಗೆ ನಗ್ನವಾಗಿಯೇ ಇದ್ದು, ಎಲ್ಲವನ್ನೂ ಅಲ್ಲೇ ಮಾಡುತ್ತಿದ್ದರು. ಹೀಗಾಗಿ ಕೋಣೆಯೊಳಗೆ ಗಬ್ಬು ವಾಸನೆ ಮೂಗಿಗೆ ಬಡಿಯುತ್ತಿತ್ತು ಎಂದು ಎಸ್‍ಪಿ ಕಾರ್ತಿಕ್ ಕಶ್ಯಪ್ ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.
Advertisement
ಆಕೆಯ ಸಹೋದರ ಮೋಹನ್ ದಾಸ್ ಹಾಗೂ ಕುಟುಂಬಸ್ಥರೇ ಮಹಿಳೆಯನ್ನು ಕೋಣೆಯೊಳಗೆ ಬಂಧಿಸಿದ್ದಾರೆ. ಹೀಗಾಗಿ ಸುಜಾತಾಳನ್ನು ಅಕ್ರಮವಾಗಿ ಕೋಣೆಯಲ್ಲಿ 15 ವರ್ಷಗಳಿಂದ ಕೂಡಿಟ್ಟ ಅಪರಾಧಕ್ಕಾಗಿ ಆಕೆಯ ಅಣ್ಣ ಮೋಹನ್ದಾಸ್ ಮತ್ತು ಆತನ ಮನೆಯವರ ವಿರುದ್ಧ ಪೊಲೀಸರು ಐಪಿಸಿ ಸೆಕ್ಷನ್ 342(ಅಕ್ರಮ ಬಂಧನ)ದ ಅಡಿಯಲ್ಲಿ ಕೇಸು ದಾಖಲಿಸಿಕೊಂಡಿದ್ದಾರೆ. ಆದರೆ ಈ ಸಂಬಂಧ ಈಗಿನ್ನೂ ಅವರು ಯಾರನ್ನೂ ಬಂಧಿಸಿಲ್ಲ. ತನಿಖೆ ಇನ್ನೂ ಪ್ರಾಥಮಿಕ ಹಂತದಲ್ಲೇ ಇದೆ ಎಂದು ಕಶ್ಯಪ್ ತಿಳಿಸಿದ್ದಾರೆ.