LatestLeading NewsMain PostNational

ಆಗಸದಲ್ಲೇ ಬಿರುಕು ಬಿಟ್ಟ ವಿಮಾನದ ಕಿಟಕಿ ಗಾಜು – ತುರ್ತು ಭೂಸ್ಪರ್ಶ

Advertisements

ನವದೆಹಲಿ: ಗೋ ಏರ್ ಸಂಸ್ಥೆಯ ವಿಮಾನದ ಕಿಟಕಿ ಗಾಜು ಆಗಸದಲ್ಲೇ ಬಿರುಕು ಬಿಟ್ಟ ಪರಿಣಾಮ ಗೋಫಸ್ಟ್ ವಿಮಾನ ತುರ್ತು ಭೂಸ್ಪರ್ಶ ಮಾಡಿರುವ ಬಗ್ಗೆ ವರದಿಯಾಗಿದೆ.

ದೆಹಲಿ-ಗುವಾಹತಿ ನಡುವೆ ಸಂಚರಿಸುತ್ತಿದ್ದ ಗೋ ಏರ್ ಸಂಸ್ಥೆಯ GoAir A320 aircraft VT-WGA ವಿಮಾನದ ವಿಂಡ್‍ಶೀಲ್ಡ್ ಆಗಸದಲ್ಲಿರುವಾಗಲೇ ಬಿರುಕು ಬಿಟ್ಟಿದೆ. ಕೂಡಲೇ ಎಚ್ಚೆತ್ತ ಸಿಬ್ಬಂದಿ ವಿಮಾನವನ್ನು ಜೈಪುರಕ್ಕೆ ತಿರುಗಿಸಿ ತುರ್ತು ಭೂಸ್ಪರ್ಶ ಮಾಡಿದ್ದಾರೆ ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ತುರ್ತು ಭೂಸ್ಪರ್ಶಿಸಿದ 2 ಗೋಫಸ್ಟ್ ವಿಮಾನ

ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದು, ಪರ್ಯಾಯ ವ್ಯವಸ್ಥೆ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಎರಡು ದಿನಗಳಲ್ಲಿ ಗೋ ಏರ್ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಮೂರನೇ ಘಟನೆ ಇದಾಗಿದೆ. ವಾರಗಳ ಅಂತರದಲ್ಲಿ ಗೋ ಫಸ್ಟ್‌ನ ಮುಂಬೈ-ಲೇಹ್ ಮತ್ತು ಶ್ರೀನಗರ-ದೆಹಲಿ ಪ್ರಯಾಣಿಸುತ್ತಿದ್ದ ವಿಮಾನಗಳು ತಾಂತ್ರಿಕ ದೋಷದಿಂದಾಗಿ ತುರ್ತು ಭೂಸ್ಪರ್ಶ ಮಾಡಿತ್ತು. ಇಂದಿನ ಘಟನೆ ಸೇರಿ ಇದೀಗ ಒಂದೇ ಸಂಸ್ಥೆಯ ಪ್ರಯಾಣಿಕ ವಿಮಾನ ದಿನಗಳ ಅಂತರದಲ್ಲಿ ತುರ್ತು ಭೂಸ್ಪರ್ಶ ಮಾಡುತ್ತಿರುವುದು ಮೂರನೇ ಘಟನೆಯಾಗಿದೆ. ಇದನ್ನೂ ಓದಿ: ಪೊಲೀಸ್‌ ಕಾನ್‌ಸ್ಟೇಬಲ್‌ ಮೇಲೆ ಟ್ರಕ್‌ ಹತ್ತಿಸಿ ಕೊಲೆ – 24 ಗಂಟೆಯಲ್ಲಿ 3ನೇ ದುರ್ಘಟನೆ

Live Tv

Leave a Reply

Your email address will not be published.

Back to top button