LatestLeading NewsMain PostNational

ಪೊಲೀಸ್‌ ಕಾನ್‌ಸ್ಟೇಬಲ್‌ ಮೇಲೆ ಟ್ರಕ್‌ ಹತ್ತಿಸಿ ಕೊಲೆ – 24 ಗಂಟೆಯಲ್ಲಿ 3ನೇ ದುರ್ಘಟನೆ

Advertisements

ಗಾಂಧೀನಗರ: ತಡೆಯಲು ಮುಂದಾದ ಗುಜರಾತ್‌ ಪೊಲೀಸ್‌ಗೆ ಟ್ರಕ್‌ ಹತ್ತಿಸಿ ಕೊಲೆ ಮಾಡಿರುವ ಘಟನೆ ಗುಜರಾತ್‌ನಲ್ಲಿ ನಡೆದಿದೆ. ಕಳೆದ 24 ಗಂಟೆಯಲ್ಲಿ ಪೊಲೀಸ್‌ ಅಧಿಕಾರಿಗಳನ್ನು ಹತ್ಯೆ ಮಾಡಿದ ಮೂರನೇ ಘಟನೆ ಇದಾಗಿದೆ.

ಪೊಲೀಸ್‌ ಕಾನ್‌ಸ್ಟೇಬಲ್‌ ಕಿರಣ್‌ ರಾಜ್‌ ಹತ್ಯೆಯಾದವರು. ಗುಜರಾತ್‌ನ ಬೋರ್ಸಾದ್‌ನಲ್ಲಿ ಪೊಲೀಸ್ ಪೇದೆ ಮೇಲೆ ಟ್ರಕ್‌ ಹತ್ತಿಸಿ ಕೊಲೆ ಮಾಡಲಾಯಿತು. ಇದನ್ನೂ ಓದಿ: DSP‌ ಮಾದರಿಯಲ್ಲೇ ಮಹಿಳಾ PSI ಹತ್ಯೆ?- ತಪಾಸಣೆಗೆ ಮುಂದಾದ ಅಧಿಕಾರಿಗೆ ವಾಹನ ಡಿಕ್ಕಿ ಹೊಡೆದು ಸಾವು

ವಾಹನದಲ್ಲಿ ರಾಜಸ್ಥಾನದ ನಂಬರ್‌ ಪ್ಲೇಟ್‌ ಹೊಂದಿದ್ದ ಅನುಮಾನಾಸ್ಪದ ಟ್ರಕ್ ಅನ್ನು ನಿಲ್ಲಿಸಲು ಕಾನ್‌ಸ್ಟೇಬಲ್‌ ಪ್ರಯತ್ನಿಸಿದ್ದಾರೆ. ಆದರೆ ಟ್ರಕ್ ಚಾಲಕ ನಿಲ್ಲಿಸುವ ಬದಲು ವೇಗವನ್ನು ಹೆಚ್ಚಿಸಿ ಅವರ ಮೇಲೆ ಹತ್ತಿಸಿದ್ದಾರೆ. ನಂತರ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಗಂಭೀರ ಗಾಯಗೊಂಡಿದ್ದ ಕಾನ್‌ಸ್ಟೇಬಲ್‌ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಟ್ರಕ್ ಚಾಲಕನನ್ನು ಗುರುತಿಸಲಾಗಿದ್ದು, ಆತನನ್ನು ಬಂಧಿಸಲು ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಅಕ್ರಮ ಗಣಿಗಾರಿಕೆ- ತಡೆಯಲು ಹೋದ DSP ಮೇಲೆ ಟ್ರಕ್ ಹರಿಸಿ ಬರ್ಬರ ಹತ್ಯೆ

ಅಕ್ರಮವಾಗಿ ನಡೆಯುತ್ತಿದ್ದ ಕಲ್ಲು ಗಣಿಗಾರಿಕೆಯನ್ನು ತಡೆಯಲು ಹೋದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಮೇಲೆ ಕಲ್ಲು ತುಂಬಿದ ಟ್ರಕ್ ಹರಿಸಿ ಬರ್ಬರ ಹತ್ಯೆ ಮಾಡಿದ ಘಟನೆ ಹರಿಯಾಣದಲ್ಲಿ ನಡೆದಿತ್ತು. ಈ ಘಟನೆ ಬೆನ್ನಲ್ಲೇ ಮತ್ತೊಬ್ಬರು ಅಧಿಕಾರಿಯನ್ನು ಹತ್ಯೆ ಮಾಡಿರುವ ಘಟನೆ ಈಚೆಗೆ ನಡೆದಿತ್ತು. ಅಂತೆಯೇ ಜಾರ್ಖಂಡ್‌ನಲ್ಲಿ ತಪಾಸಣೆಗೆ ಮುಂದಾದ ಮಹಿಳಾ ಪೊಲೀಸ್ ಸಬ್‌ ಇನ್‌ಸ್ಪೆಕ್ಟರ್‌ಗೆ ವಾಹನದಿಂದ ಡಿಕ್ಕಿ ಹೊಡೆದು ಹತ್ಯೆ ಮಾಡಿರುವ ಘಟನೆಯೂ ಬೆಳಕಿಗೆ ಬಂದಿದೆ.

Live Tv

Leave a Reply

Your email address will not be published.

Back to top button