ನವದೆಹಲಿ: ಗೋ ಏರ್ ಸಂಸ್ಥೆಯ ವಿಮಾನದ ಕಿಟಕಿ ಗಾಜು ಆಗಸದಲ್ಲೇ ಬಿರುಕು ಬಿಟ್ಟ ಪರಿಣಾಮ ಗೋಫಸ್ಟ್ ವಿಮಾನ ತುರ್ತು ಭೂಸ್ಪರ್ಶ ಮಾಡಿರುವ ಬಗ್ಗೆ ವರದಿಯಾಗಿದೆ.
Advertisement
ದೆಹಲಿ-ಗುವಾಹತಿ ನಡುವೆ ಸಂಚರಿಸುತ್ತಿದ್ದ ಗೋ ಏರ್ ಸಂಸ್ಥೆಯ GoAir A320 aircraft VT-WGA ವಿಮಾನದ ವಿಂಡ್‍ಶೀಲ್ಡ್ ಆಗಸದಲ್ಲಿರುವಾಗಲೇ ಬಿರುಕು ಬಿಟ್ಟಿದೆ. ಕೂಡಲೇ ಎಚ್ಚೆತ್ತ ಸಿಬ್ಬಂದಿ ವಿಮಾನವನ್ನು ಜೈಪುರಕ್ಕೆ ತಿರುಗಿಸಿ ತುರ್ತು ಭೂಸ್ಪರ್ಶ ಮಾಡಿದ್ದಾರೆ ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ತುರ್ತು ಭೂಸ್ಪರ್ಶಿಸಿದ 2 ಗೋಫಸ್ಟ್ ವಿಮಾನ
Advertisement
Delhi-Guwahati Go First flight diverted to Jaipur after windshield cracks mid-air, third incident of technical snag in 2 days
Read @ANI Story | https://t.co/WRwBiefb4e#GoAir #DGCA #GoFirst pic.twitter.com/egX5oFK0Gt
— ANI Digital (@ani_digital) July 20, 2022
Advertisement
ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದು, ಪರ್ಯಾಯ ವ್ಯವಸ್ಥೆ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಎರಡು ದಿನಗಳಲ್ಲಿ ಗೋ ಏರ್ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಮೂರನೇ ಘಟನೆ ಇದಾಗಿದೆ. ವಾರಗಳ ಅಂತರದಲ್ಲಿ ಗೋ ಫಸ್ಟ್‌ನ ಮುಂಬೈ-ಲೇಹ್ ಮತ್ತು ಶ್ರೀನಗರ-ದೆಹಲಿ ಪ್ರಯಾಣಿಸುತ್ತಿದ್ದ ವಿಮಾನಗಳು ತಾಂತ್ರಿಕ ದೋಷದಿಂದಾಗಿ ತುರ್ತು ಭೂಸ್ಪರ್ಶ ಮಾಡಿತ್ತು. ಇಂದಿನ ಘಟನೆ ಸೇರಿ ಇದೀಗ ಒಂದೇ ಸಂಸ್ಥೆಯ ಪ್ರಯಾಣಿಕ ವಿಮಾನ ದಿನಗಳ ಅಂತರದಲ್ಲಿ ತುರ್ತು ಭೂಸ್ಪರ್ಶ ಮಾಡುತ್ತಿರುವುದು ಮೂರನೇ ಘಟನೆಯಾಗಿದೆ. ಇದನ್ನೂ ಓದಿ: ಪೊಲೀಸ್ ಕಾನ್‌ಸ್ಟೇಬಲ್ ಮೇಲೆ ಟ್ರಕ್ ಹತ್ತಿಸಿ ಕೊಲೆ – 24 ಗಂಟೆಯಲ್ಲಿ 3ನೇ ದುರ್ಘಟನೆ