ವಾಷಿಂಗ್ಟನ್: ಭಾರತೀಯ ಮಹಿಳೆಯರ ಮೇಲೆ ವಿದೇಶಿ ಮಹಿಳೆಯೊಬ್ಬಳು ಹಲ್ಲೆ ಮಾಡಿರುವ ಘಟನೆ ಟೆಕ್ಸಾಸ್‍ನ ಪ್ಲಾನೊದಲ್ಲಿನ ಸಿಕ್ಸ್ಟಿ ವೈನ್ಸ್ ರೆಸ್ಟೋರೆಂಟ್‍ನ ಹೊರಗೆ ನಡೆದಿದೆ. ಭಾರತೀಯ ಮಹಿಳೆಯರ ಮೇಲೆ ಜನಾಂಗೀಯ ಟೀಕೆಗಳನ್ನು ಮಾಡುತ್ತಿರುವ ಅಮೆರಿಕನ್ ಮಹಿಳೆಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
Advertisement
ಐದೂವರೆ ನಿಮಿಷವಿರುವ ವೀಡಿಯೋದಲ್ಲಿ, ಅಮೆರಿಕನ್ ಮಹಿಳೆ, ಭಾರತೀಯ ಮಹಿಳೆಯೊಬ್ಬರ ಮುಖಕ್ಕೆ ಹೊಡೆಯುತ್ತಿರುವ ದೃಶ್ಯ ಇದೆ. ಅಲ್ಲದೇ ಇನ್ನಿಬ್ಬರು ಭಾರತೀಯ ಮಹಿಳೆಯರ ಫೋನ್‍ಗಳನ್ನು ಕಸಿದುಕೊಂಡು, ನಿಮ್ಮನ್ನು ಶೂಟ್ ಮಾಡುವುದಾಗಿ ಬೆದರಿಕೆಯೊಡ್ಡಿಕೆಯೊಡ್ಡಿದ್ದಾಳೆ. ‘ಕಪ್ಪು ಜನರಾದ ನೀವು ನಮ್ಮ ದೇಶವನ್ನು ಹಾಳು ಮಾಡಿತ್ತಿದ್ದೀರಾ ಎಂದು ಅವಾಚ್ಯ ಶಬ್ಧಗಳಿಂದ ನಿಂದಿಸಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಇದನ್ನೂ ಓದಿ: ಸಲ್ಮಾನ್ ನೆಚ್ಚಿನ ಹಿರಿಯ ನಿರ್ದೇಶಕ ಸಾವನ್ ಕುಮಾರ್ ನಿಧನ: ಬಿಟೌನ್ ಕಂಬನಿ
Advertisement
Despicable. This woman in Texas can’t control her racism and hate of Indian people, harasses four women on street because of their accent and then physically assaults them…Shame: pic.twitter.com/vgPqPk0Woc
— Joyce Karam (@Joyce_Karam) August 25, 2022
Advertisement
ಆರೋಪಿ ಮಹಿಳೆಯನ್ನು ಎಸ್ಮೆರಾಲ್ಡಾ ಅಪ್ಟನ್ ಎಂದು ಗುರುತಿಸಲಾಗಿದ್ದು, ಗುರುವಾರ ಪೊಲೀಸರು ಆಕೆಯನ್ನು ಬಂಧಿಸಿ, ಹಲ್ಲೆ ಮತ್ತು ಜೀವ ಬೆದರಿಕೆಗಳ ಆರೋಪದಡಿ ಪ್ರಕರಣ ದಾಖಲಿಸಿದ್ದಾರೆ. 10,000 ಡಾಲರ್ (7,98 ಲಕ್ಷ ರೂಪಾಯಿ) ಮೌಲ್ಯದ ಬಾಂಡ್ ಇರಿಸಬೇಕು ಎಂದು ಷರತ್ತು ವಿಧಿಸಲಾಗಿದೆ. ಸದ್ಯ ಈ ಸಂಬಂಧ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಅನಾರೋಗ್ಯದಿಂದ ಪತ್ನಿ ಸಾವು – ಮನನೊಂದು ಬೆಂಕಿ ಹಚ್ಚಿಕೊಂಡು ಪತಿ ಆತ್ಮಹತ್ಯೆ
Advertisement
ಮಹಿಳೆಯೊಬ್ಬರು ಸೋಶಿಯಲ್ ಮೀಡಿಯಾದಲ್ಲಿ ಈ ವೀಡಿಯೋವನ್ನು ಹಂಚಿಕೊಂಡಿದ್ದು, ಸ್ನೇಹಿತರೊಂದಿಗೆ ಡಿನ್ನರ್‍ಗಾಗಿ ಹೋಗಿದ್ದೆವು. ನಾವು ಸಿಕ್ಸ್ಟಿ ವೈನ್ಸ್ ರೆಸ್ಟೋರೆಂಟ್‍ನಿಂದ ಕಾರು ಪಾರ್ಕಿಂಗ್ ಸ್ಥಳಕ್ಕೆ ಹೋಗುತ್ತಿರುವಾಗ ಕುಡಿದ ಅಮಲಿನಲ್ಲಿದ್ದ ಮಹಿಳೆ ದ್ವೇಷಪೂರಿತ ಜನಾಂಗೀಯ ನಿಂದನೆಯೊಂದಿಗೆ ನಮ್ಮ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದಾಳೆ ಎಂದು ಆರೋಪಿಸಿದ್ದಾರೆ.