ನವದೆಹಲಿ: 2026ರ ಮೊದಲ ನಾಲ್ಕು ತಿಂಗಳಲ್ಲಿ ಜಾಗತಿಕ ತಂತ್ರಜ್ಞಾನ(Global Tech Layoffs) ವಲಯದಲ್ಲಿ ಸುಮಾರು 80,000 ಉದ್ಯೋಗ(Jobs) ಕಡಿತಗಳು ಸಂಭವಿಸಿವೆ ಎಂದು ವರದಿಯಾಗಿದೆ.
ಟ್ರೇಡಿಂಗ್‌ಪ್ಲಾಟ್‌ಫಾರ್ಮ್ಸ್‌ನ ವರದಿಯ ಪ್ರಕಾರ ಕೋವಿಡ್ ನಂತರ ಕಂಪನಿಗಳು ನೇಮಕಾತಿ ಸಂಖ್ಯೆಯನ್ನು ಕಡಿತಗೊಳಿಸಿದೆ. ಈಗ ಕಡಿತದ ಭಾಗವಾಗಿ ಉದ್ಯೋಗಿಗಳನ್ನು ವಜಾಗೊಳಿಸುತ್ತಿದೆ ಎಂದು ಹೇಳಿದೆ.
ಈ ವರ್ಷದ ಒಟ್ಟು ಉದ್ಯೋಗ ಕಡಿತದಲ್ಲಿ ಸುಮಾರು ಶೇ. 50 ರಷ್ಟು ಕೃತಕ ಬುದ್ಧಿಮತ್ತೆ (AI) ಮತ್ತು ಆಟೋಮೇಷನ್ ಅಳವಡಿಕೆಯಿಂದಾಗಿ ಸಂಭವಿಸಿದೆ. ಒಟ್ಟು ಜಾಗತಿಕ ಉದ್ಯೋಗ ಕಡಿತದ ಶೇ.77 ರಷ್ಟು ಅಮೆರಿಕಾದಲ್ಲೇ ಸಂಭವಿಸಿದೆ. 62 ಕಂಪನಿಗಳಲ್ಲಿ 61,000 ಕ್ಕೂ ಹೆಚ್ಚು ಉದ್ಯೋಗಳಿಗೆ ಮನಗೆ ಹೋಗಿದ್ದಾರೆ.
ಒರಾಕಲ್ (Oracle) ಕಂಪನಿಯು ಜಾಗತಿಕವಾಗಿ ಅತಿ ಹೆಚ್ಚು ಅಂದರೆ ಸುಮಾರು 25,000 ರಿಂದ 30,000 ಉದ್ಯೋಗಗಳನ್ನು ಕಡಿತಗೊಳಿಸಿದೆ. ಇದರಲ್ಲಿ ಭಾರತವೊಂದರಲ್ಲೇ ಸುಮಾರು 10,000 ರಿಂದ 12,000 ಉದ್ಯೋಗಿಗಳು ಬಾಧಿತರಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.

ಅಮೆಜಾನ್ (Amazon) ಫೆಬ್ರವರಿ ತಿಂಗಳಿನಲ್ಲಿ ಸುಮಾರು 16,000 ಉದ್ಯೋಗಿಗಳನ್ನು ತೆಗೆದುಹಾಕಿದೆ. ಕಾರ್ಯಾಚರಣೆಯ ದಕ್ಷತೆಯನ್ನು ಹೆಚ್ಚಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಮೆಟಾ (Meta) ಮೇ 20 ರಿಂದ ತನ್ನ ಮೊದಲ ಹಂತದ ಉದ್ಯೋಗ ಕಡಿತವನ್ನು ಆರಂಭಿಸಲು ಯೋಜಿಸಿದ್ದು, ಸುಮಾರು 8,000 ಸಿಬ್ಬಂದಿ ಮೇಲೆ ಇದು ಪರಿಣಾಮ ಬೀರಲಿದೆ. ಸಣ್ಣ ಪ್ರಮಾಣದ ಕಂಪನಿಗಳನ್ನು ಸೇರಿಸಿದರೆ ಈ ಸಂಖ್ಯೆ ಇನ್ನೂ ಹೆಚ್ಚಿರಬಹುದು.
ಆಸ್ಟ್ರೇಲಿಯಾದಲ್ಲಿ ಸುಮಾರು 4,450 ಉದ್ಯೋಗ ಕಡಿತವಾಗಿದೆ. ಯುರೋಪ್‌ನ ಆಸ್ಟ್ರಿಯಾ, ಸ್ವೀಡನ್ ಮತ್ತು ನೆದರ್‌ಲ್ಯಾಂಡ್ಸ್‌ನಂತಹ ದೇಶಗಳು ಸೆಮಿಕಂಡಕ್ಟರ್ ಉತ್ಪಾದನೆ, ಟೆಲಿಕಾಂ ಮತ್ತು ಐಟಿ ಸೇವೆಗಳಲ್ಲಿನ ಒತ್ತಡಗಳಿಗೆ ಸಂಬಂಧಿಸಿದ ಗಮನಾರ್ಹ ಕಡಿತಗಳನ್ನು ಕಂಡಿವೆ. ಇದನ್ನೂ ಓದಿ: ಇನ್ಫೋಸಿಸ್‌ನಲ್ಲೂ ಕಾರ್ಪೋರೇಟ್ ಜಿಹಾದ್ ಆರೋಪ – ಮಹಾ ಸಚಿವರಿಗೆ ದೂರು
ವಲಯವಾರು ನೋಡುವುದಾದರೆ ಕ್ಲೌಡ್, ಕಂಪ್ಯೂಟಿಂಗ್ ಮತ್ತು ಸಾಫ್ಟ್‌ವೇರ್-ಆಸ್-ಎ-ಸರ್ವಿಸ್ (SaaS) ಕಂಪನಿಗಳು ಅತಿ ಹೆಚ್ಚು ಸುಮಾರು 28,000 ರಷ್ಟು ನೌಕರರಗೆ ಗೇಟ್‌ಪಾಸ್ ನೀಡಿದೆ. ನಂತರ ಇ-ಕಾಮರ್ಸ್ ಸಂಸ್ಥೆಗಳು ಸುಮಾರು 19,000 ಉದ್ಯೋಗ ಕಡಿತಗಳನ್ನು ಮಾಡಿವೆ.
ಈ ವರ್ಷದ ಅಂತ್ಯದ ವೇಳೆಗೆ ಜಾಗತಿಕವಾಗಿ ಉದ್ಯೋಗ ಕಡಿತದ ಸಂಖ್ಯೆ 3 ಲಕ್ಷವನ್ನು ದಾಟಬಹುದು ಎಂದು ವಿಶ್ಲೇಷಕರು ಅಂದಾಜಿಸಿದ್ದಾರೆ.

