ಬೆಂಗಳೂರು: ನಾಮಪತ್ರ ಸಲ್ಲಿಕೆಗೆ ಮೂರು ದಿನ ಬಾಕಿಯಿದ್ರೂ, ಟಿಕೆಟ್ ಕೈ ತಪ್ಪಿದ ಸಿಟ್ಟು ಶಮನವಾಗಿಲ್ಲ.
5 ಕೋಟಿ ರೂಪಾಯಿ ಕೊಟ್ಟು ಟಿಕೆಟ್ ಗಿಟ್ಟಿಸಿಕೊಂಡಿದ್ದೇನೆ ಅಂತ ಅಭ್ಯರ್ಥಿ ಸಂಗರಾಜ ದೇಸಾಯಿಯವರೇ ಕಾರ್ಯಕರ್ತರ ಜೊತೆಗೆ ಹೇಳ್ತಿದ್ದಾರೆ ಅಂತ ಟಿಕೆಟ್ ವಂಚಿತ ಮಾಜಿ ಸಚಿವ ಎಸ್‍ಕೆ ಬೆಳ್ಳುಬ್ಬಿ ಆರೋಪಿಸಿದ್ದಾರೆ. ಅಲ್ಲದೇ ಸಂಜೆಯೊಳಗೆ ನನಗೆ ಬಸವನಬಾಗೇವಾಡಿಯಿಂದ ಟಿಕೆಟ್ ಕೊಡಬೇಕು. ಇಲ್ಲಾಂದ್ರೆ ನನ್ನ ಹಾದಿ ನನಗೆ ಅಂತ ಹೈಕಮಾಂಡ್‍ಗೆ ಎಚ್ಚರಿಸಿದ್ದಾರೆ.
Advertisement
Advertisement
ಇತ್ತ ಮಸ್ಕಿಯಿಂದ ಟಿಕೆಟ್ ವಂಚಿತ ಯಡಿಯೂರಪ್ಪ ಆಪ್ತ ಮಹಾದೇವಪ್ಪಗೌಡ ಕೈ ಹಿಡಿದಿದ್ದು, ಅಳಿಯ ಕಾಂಗ್ರೆಸ್ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್ ಪರ ಪ್ರಚಾರ ಮಾಡ್ತಾರೆ. ಮಾಜಿ ಸಂಸದ, ಕುರುಬ ಸಮುದಾಯದ ನಾಯಕ ಕೆ ವಿರುಪಾಕ್ಷಪ್ಪ ಟಿಕೆಟ್ ಸಿಗದ ಸಿಟ್ಟಲ್ಲಿ ಬಿಜೆಪಿ ಬಿಟ್ಟಿದ್ದಾರೆ. ರಾಯಣ್ಣ ಬ್ರಿಗೇಡ್ ಅಧ್ಯಕ್ಷರೂ ಆಗಿರೋ ಅವರು ಸಿಂಧನೂರಿಂದ ಪಕ್ಷೇತರರಾಗಿ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ. ಇದನ್ನೂ ಓದಿ: ಕೆಜೆಪಿಗೆ ಹೋಗದ ಸೇಡಿನಿಂದಾಗಿ ನನಗೆ ಟಿಕೆಟ್ ತಪ್ಪಿಸಿದ್ರು- ಬಿಎಸ್‍ವೈ ವಿರುದ್ಧ ಮಾಜಿಸಚಿವ ಬೆಳಮಗಿ ಗರಂ
Advertisement
Advertisement
ಸಾಗರ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಬಿಜೆಪಿಗೆ ಗುಡ್‍ಬೈ ಹೇಳಿದ್ದ ಬೇಳೂರು ಗೋಪಾಲಕೃಷ್ಣ ಕಾಂಗ್ರೆಸ್ ಸೇರ್ತಾರೆ. ಇನ್ನು ಬಿಜೆಪಿಗೆ ಗುಡ್‍ಬೈ ಹೇಳಿರೋ ಮಾಜಿ ಸಚಿವ ರೇವೂ ನಾಯಕ್ ಬೆಳಮಗಿ ಇಂದೇ ಜೆಡಿಎಸ್‍ಗೆ ಹೋಗ್ತಾರೆ ಅನ್ನೋ ಮಾಹಿತಿ ಪಬ್ಲಿಕ್ ಟಿವಿಗೆ ಲಭಿಸಿದೆ.