ಬೆಂಗಳೂರು: ಕಾಂಗ್ರೆಸ್‍ನಿಂದ (Congress) ಆಯ್ಕೆಯಾದ 9 ಮಂದಿ ಮುಸ್ಲಿಂ ಸಮುದಾಯದ ಅಭ್ಯರ್ಥಿಗಳಲ್ಲಿ 5 ಶಾಸಕರಿಗೆ ಸಚಿವ ಸ್ಥಾನ (Ministers) ಮತ್ತು ಒಬ್ಬರಿಗೆ ಉಪಮುಖ್ಯಮಂತ್ರಿ (DCM) ಸ್ಥಾನ ನೀಡಬೇಕು ಎಂದು ರಾಜ್ಯ ಸುನ್ನಿ ಉಲ್ಮಾ ಬೋರ್ಡ್ (Sunni Ulma Board) ಹಾಗೂ ಜಾಮೀಯ ಹಜರತ್ ಬಿಲಾಲ್ ಮುಖಂಡರು ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮುಖಂಡರು ಕಾಂಗ್ರೆಸ್ 15 ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿತ್ತು. ಅದರಲ್ಲಿ 9 ಮಂದಿ ಗೆದ್ದಿದ್ದಾರೆ. ಕರ್ನಾಟಕದಲ್ಲಿ 73 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸ್ಥಾನ ಗಿಟ್ಟಿಸಲು ಮುಸ್ಲಿಂ ಮತದಾರರು ಕಾರಣರಾಗಿದ್ದಾರೆ. ರಾಜ್ಯದ 88% ಮುಸ್ಲಿಂ ಮತದಾರರು ಕಾಂಗ್ರೆಸ್‍ಗೆ ಮತದಾನ ಮಾಡಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: ಗದ್ದುಗೆ ಏರಿದ ಕೈಗೆ ಅಣ್ಣಾಮಲೈ ಅಭಿನಂದನೆ
Advertisement
Advertisement
ಕರ್ನಾಟಕದ ಇತಿಹಾಸದಲ್ಲಿ ಯಾರು ಕೂಡ ಮುಸ್ಲಿಂ ಸಮುದಾಯದಿಂದ ಮುಖ್ಯಮಂತ್ರಿ ಆಗಿ ಆಯ್ಕೆಯಾಗಿಲ್ಲ. ಇದರಿಂದಾಗಿ ಡಿಸಿಎಂ ಸ್ಥಾನವನ್ನಾದರೂ ಕಾಂಗ್ರೆಸ್ ನೀಡಬೇಕು. 9 ಶಾಸಕರಲ್ಲಿ ಯಾರು ಹಿರಿಯರಿದ್ದಾರೆ ಅವರನ್ನು ಗುರುತಿಸಿ ಡಿಸಿಎಂ ಸ್ಥಾನ ನೀಡಲಿ ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ನನಗೆ ಅಧಿಕಾರದ ಆಸೆಯಿಲ್ಲ: ಲಕ್ಷ್ಮೀ ಹೆಬ್ಬಾಳ್ಕರ್