ಮಂಡ್ಯ: ತನ್ನ ಮಗಳಿಗೆ (Daughter) ಉತ್ತಮ ವಿದ್ಯಾಭ್ಯಾಸ ಕೊಟ್ಟು ಮುಂದೆ ಒಳ್ಳೆ ಕಡೆ ಸಂಬಂಧ ನೋಡಿ ಮದುವೆ ಮಾಡಬೇಕೆಂದು ಆ ತಂದೆ ಕನಸು ಕಟ್ಟಿಕೊಂಡಿದ್ದ. ಆದರೆ ಆ ಮಗಳು ಇದೀಗ ಹದಿಯರೆಯದ ವಯಸ್ಸಿನಲ್ಲೇ ಪ್ರೀತಿಯ (Love) ಬಲೆಗೆ ಬಿದ್ದು, ಪ್ರೀತಿಸಿದವನ ಜೊತೆ ಓಡಿ ಹೋಗಿದ್ದಾಳೆ. ಇದೀಗ ಆ ತಂದೆ (Father) ಮಗಳು ನನ್ನ ಮರ್ಯಾದೆ ಕಳೆದು ಹೋದಳು ಎಂದು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
Advertisement
ಹೆತ್ತ ಮಕ್ಕಳನ್ನು ಚೆನ್ನಾಗಿ ಓದಿಸಬೇಕು, ಅವರು ಒಳ್ಳೆಯ ಕೆಲಸಕ್ಕೆ ಸೇರಬೇಕು. ಮುಂದೆ ಒಳ್ಳೆಯ ಕಡೆ ಸಂಬಂಧ ನೋಡಿ ಮದುವೆ ಮಾಡಿ ಅವರ ಸಂಸಾರ ಚೆನ್ನಾಗಿ ನಡೆಯಬೇಕೆಂಬ ನೂರಾರು ಕನಸುಗಳನ್ನು ಹೆತ್ತವರು ಕಂಡಿರುತ್ತಾರೆ. ಇದೇ ರೀತಿಯ ಕನಸ್ಸನ್ನು ಮಂಡ್ಯ ಜಿಲ್ಲೆಯ ಕೆಆರ್ ಪೇಟೆ (KR Pete) ತಾಲೂಕಿನ ಬಾಚಹಳ್ಳಿ ಗ್ರಾಮದ ರೈತ ರವಿ ಕೂಡ ಕಂಡಿದ್ದ. ರವಿಯ ಮಗಳು ಬೂಕನಕೆರೆಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದು, ಇನ್ನೂ ಈ ವಯಸ್ಸಿನಲ್ಲೇ ಬಾಚಹಳ್ಳಿ ಗ್ರಾಮದ ಅಭಿ ಎಂಬಾತನ ಪ್ರೀತಿಯ ಬಲೆಗೆ ಬಿದ್ದು ಮನೆ ಬಿಟ್ಟು ಹೋಡಿ ಹೋಗಿದ್ದಾಳೆ.
Advertisement
Advertisement
ರವಿ ತನ್ನ ಮಗಳನ್ನು ಚೆನ್ನಾಗಿ ಓದಿಸಿ ಒಳ್ಳೆಯ ಹುಡುಗನನ್ನು ಹುಡುಕಿ ಮದುವೆ ಮಾಡಬೇಕು ಎಂದುಕೊಂಡಿದ್ದ. ಆದರೆ ಈತನ ಮಗಳ 18 ವರ್ಷ ತುಂಬದೇ ಅದೇ ಗ್ರಾಮದಲ್ಲಿ ಮನೆಯಲ್ಲೇ ಇದ್ದ ಅಭಿಯ ಪ್ರೀತಿಯ ಬಲೆಗೆ ಬಿದ್ದು ಓಡಿ ಹೋಗಿರುವುದು ಹೆತ್ತವರಿಗೆ ಆಘಾತ ತಂದಿದೆ. ಈ ಇಬ್ಬರು ಪ್ರೇಮಿಗಳು ಓಡಿ ಹೋದಾಗ ಕೆಆರ್ ಪೇಟೆ ಪೊಲೀಸ್ ಠಾಣೆಗೆ ದೂರನ್ನು ಸಹ ನೀಡಿದ್ದಾರೆ. ಆದರೆ ಐದು ದಿನವಾದ್ರು ಪೊಲೀಸರು ಓಡಿ ಹೋದ ಪ್ರೇಮಿಗಳನ್ನು ಹುಡುಕುವಲ್ಲಿ ಆಸಕ್ತಿ ತೋರಿಸಲಿಲ್ಲ. ಇದನ್ನೂ ಓದಿ: ಗೋಲ್ಡ್ ರಿಕವರಿಗೆ ಬಂದ ತಮಿಳುನಾಡು ಪೊಲೀಸರು ಚಿಕ್ಕಬಳ್ಳಾಪುರದಲ್ಲಿ ಲಾಕ್
Advertisement
ಇತ್ತ ಮಗಳು ಓಡಿ ಹೋಗಿ ತನ್ನ ಮರ್ಯಾದೆ ಕಳೆದಳು ಎಂದು ರವಿ ಮನನೊಂದು ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಸಾವಿಗೆ ಮಗಳು ಒಂದು ಕಡೆ ಕಾರಣವಾದ್ರೆ ಇನ್ನೊಂದು ಪೊಲೀಸರ ಬೇಜವಾಬ್ದಾರಿ ಕಾರಣ ಎಂದು ರವಿ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ರವಿಯ ಮೃತದೇಹವನ್ನು ಪೊಲೀಸ್ ಠಾಣೆ ಮುಂದೆ ಇಟ್ಟು ಪ್ರತಿಭಟನೆ ನಡೆಸಿದ್ರು. ಬಳಿಕ ಮಂಡ್ಯ ಎಸ್ಪಿ ಯತೀಶ್ ಸ್ಥಳಕ್ಕೆ ಭೇಟಿ ನೀಡಿ ಜನರನ್ನು ಸಮಾಧಾನಪಡಿಸಿ ರವಿ ಮೃತದೇಹವನ್ನು ಅಂತ್ಯಕ್ರಿಯೆ ಮಾಡಿಕೊಳ್ಳುವಂತೆ ಕೇಳಿಕೊಂಡ ನಂತರ ಪ್ರತಿಭಟನೆ ಹಿಂಪಡೆದರು.
ಒಟ್ಟಾರೆ ಹದಿಹರೆಯದ ವಯಸ್ಸಿನಲ್ಲಿ ಪ್ರೀತಿ ಪ್ರೇಮದ ಬಲೆಗೆ ಬಿದ್ದು ಮನೆ ಬಿಟ್ಟು ಓಡಿ ಹೋದ ಮಗಳು ತಂದೆಯ ಸಾವಿಗೆ ಕಾರಣವಾಗಿರುವುದು ಹೃದಯ ವಿದ್ರಾವಕ ಘಟನೆಯಾಗಿದೆ. ಇದನ್ನೂ ಓದಿ: ಬಸ್‍ನಿಂದ ಬಿದ್ದು ಯುವತಿಯ ಮೆದುಳು ನಿಷ್ಕ್ರಿಯ – ಸಾವಿನಲ್ಲೂ 9 ಜನರ ಬಾಳಿಗೆ ಬೆಳಕಾದಳು