ವಿಜಯಪುರ: ಹೆಣ್ಣು (Girl) ಲಕ್ಷ್ಮಿ ಇದ್ದ ಹಾಗೆ. ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳೇ ಒಳ್ಳೆಯವರು. ತಂದೆ-ತಾಯಿಯನ್ನು ಸಾಕುವವರೇ ಅವರು ಎಂದು ಸಚಿವ ಎಂಬಿ ಪಾಟೀಲ್ (MB Patil) ಭ್ರೂಣ ಹತ್ಯೆ (Foeticide) ವಿರುದ್ಧ ಕಿಡಿಕಾರಿದ್ದಾರೆ.
ವಿಜಯಪುರದಲ್ಲಿ (Vijayapura) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭ್ರೂಣ ಹತ್ಯೆ ಅತ್ಯಂತ ಹೀನ, ಅಕ್ಷಮ್ಯ ಕೃತ್ಯ. ಈ ಕೃತ್ಯ ಮಾಡುವವರಿಗೆ ತಕ್ಕ ಪಾಠ, ಕಠಿಣ ಶಿಕ್ಷೆಯಾಗುವ ನಿಟ್ಟಿನಲ್ಲಿ ಕ್ರಮವಾಗಬೇಕು. ಭ್ರೂಣ ಹತ್ಯೆ ಮಾಡುವವರ ವಿರುದ್ಧ ಸರ್ಕಾರ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುತ್ತದೆ. ಅಲ್ಲದೇ ನಿರ್ದಾಕ್ಷಿಣ್ಯ ಕ್ರಮಕ್ಕೆ ನನ್ನ ಬೆಂಬಲ, ಒತ್ತಾಯವಿದೆ ಎಂದರು. ಇದನ್ನೂ ಓದಿ: ಹೆಚ್ಚುವರಿ ಅಂಬುಲೆನ್ಸ್ ಖರೀದಿಗೆ ಹಣ ಒದಗಿಸ್ತೇವೆ: ಸಿದ್ದರಾಮಯ್ಯ
Advertisement
Advertisement
ಇದೇ ವೇಳೆ ಪಂಚರಾಜ್ಯ ಚುನಾವಣೆ (Five State Election) ಇಂದು ಮತಗಟ್ಟೆ ಸಮೀಕ್ಷೆ ಬಹಿರಂಗ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕನಿಷ್ಠ ಮೂರು ರಾಜ್ಯದಲ್ಲಿ ನಾವು ಗೆಲುವು ಸಾಧಿಸಿ ಅಧಿಕಾರಕ್ಕೆ ಬರುತ್ತೇವೆ. ನಾಲ್ಕರಲ್ಲೂ ಅಧಿಕಾರಕ್ಕೆ ಬರುವ ಸಾಧ್ಯತೆ ಇದೆ. ಇಂದು ಸಂಜೆ ಎಕ್ಸಿಟ್ ಪೋಲ್ (Exit Poll) ಬರಲಿದೆ. ಎಕ್ಸಿಟ್ ಪೋಲ್‌ನಲ್ಲಿ ನಾಲ್ಕು ರಾಜ್ಯಗಳಲ್ಲಿ ಗೆಲ್ಲುವ ನಿರೀಕ್ಷೆ ಇದೆ ಎಂದು ಹೇಳಿದರು. ಇದನ್ನೂ ಓದಿ: 108 ಅಂಬುಲೆನ್ಸ್‌ನವ್ರು ಖಾಸಗಿ ಆಸ್ಪತ್ರೆಗಳ ಜೊತೆ ಒಪ್ಪಂದ ಮಾಡಿಕೊಳ್ತಾರೆ: ಡಿಕೆಶಿ ಅಸಮಾಧಾನ
Advertisement
Advertisement
ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಢ, ಮಿಜೋರಾಂಗಳಲ್ಲಿ ಈಗಾಗಲೇ ಮತದಾನ ಮುಕ್ತಾಯವಾಗಿದೆ. ತೆಲಂಗಾಣದಲ್ಲಿ ಇಂದು ಮತದಾನ ನಡೆಯುತ್ತಿದೆ. ಈ ಮೂಲಕ ಪಂಚರಾಜ್ಯ ಚುನಾವಣೆಗೆ ತೆರೆ ಬೀಳಲಿದ್ದು, ಡಿಸೆಂಬರ್ 3 ರಂದು ಫಲಿತಾಂಶ ಪ್ರಕಟವಾಗಲಿದೆ. ಇದನ್ನೂ ಓದಿ: ಜಾತಿಗಣತಿ ವರದಿ ಬಂದ ಬಳಿಕವೇ ಅನುಷ್ಠಾನಕ್ಕೆ ತೀರ್ಮಾನ – ಶಿವರಾಜ್ ತಂಗಡಗಿ