ಹಾಸನ: ಜಿಲ್ಲೆಯ ಸಕಲೇಶಪುರ (Sakaleshpura) ತಾಲೂಕಿನಲ್ಲಿ ನಡೆದಿರುವ ಅಪ್ರಾಪ್ತ ಬಾಲಕಿ (Girl) ಮೇಲೆ ಪೈಶಾಚಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಘಟನೆಗೆ ಸಂಬಂಧಿಸಿ ಕಾಫಿ ತೋಟದ ಮಾಲೀಕ ಸುದರ್ಶನ್, ಸ್ವಾಗತ್, ಪಾಪಣ್ಣ ಹಾಗೂ ಓರ್ವ ಅಪ್ರಾಪ್ತ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ನಾಲ್ವರು ಕಿರಾತಕರಿಂದ ಅಪ್ರಾಪ್ತೆ ಮೇಲೆ ನಿರಂತರ ಅತ್ಯಾಚಾರ (Rape) ಎಸಗಿದ್ದಾರೆ. ಬಾಲಕಿ ಕಾಫಿ ತೋಟದಲ್ಲಿ ಪೋಷಕರೊಂದಿಗೆ ನೆಲೆಸಿದ್ದಳು.
ಕೂಲಿ ಅರಸಿ ಬಂದು ತೋಟದ ಲೈನ್ ಮನೆಯಲ್ಲಿದ್ದ ಕಾರ್ಮಿಕನ ಮಗಳ ಮೇಲೆ ತೋಟದ ಮಾಲೀಕ ನೀಚ ಕೃತ್ಯ ಎಸಗಿದ್ದಾನೆ. ಅಪ್ರಾಪ್ತೆ ಮೇಲೆ ಕ್ರೌರ್ಯ ಮೆರೆದ ನಾಲ್ವರು ಪಾಪಿಗಳು ಅಂದರ್ ಆಗಿದ್ದಾರೆ. ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. (Arrest) ಇದನ್ನೂ ಓದಿ: ಅನೈತಿಕ ಸಂಬಂಧವಿದೆ ಎಂದು ಅನುಮಾನಿಸಿ ಗೆಳತಿಗೆ ಕೋಲಿನಿಂದ ಥಳಿಸಿ ಕೊಂದ
ಬಾಲಕಿ ಅನಾರೋಗ್ಯದಿಂದ ಆಸ್ಪತ್ರೆಗೆ ಬಂದಾಗ ಗರ್ಭಿಣಿಯಾಗಿರುವ ವಿಚಾರ ತಿಳಿದು ಪರಿಶೀಲನೆ ನಡೆಸಿದಾಗ ಈ ಪೈಶಾಚಿಕ ಕೃತ್ಯ ಬಯಲಾಗಿದೆ. ಬಾಲಕಿಯನ್ನು ಪುಸಲಾಯಿಸಿ ವಂಚಿಸಿ ಪಾಪಿಗಳು ಅತ್ಯಾಚಾರ ಎಸಗಿದ್ದಾರೆ. ನಾಲ್ವರ ವಿರುದ್ಧವೂ ಪೋಕ್ಸೋ ಸೇರಿ ವಿವಿಧ ಕಾನೂನಿನಡಿ ಕೇಸ್ ದಾಖಲಾಗಿದೆ. ಸಂತ್ರಸ್ತ ಬಾಲಕಿಗೆ ಮಕ್ಕಳ ಕಲ್ಯಾಣ ಸಮಿತಿ ಆಶ್ರಯ ನೀಡಿದ್ದು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸಿಡಬ್ಲೂಸಿ ನೇತೃತ್ವದಲ್ಲಿ ದೂರು ನೀಡಿದ್ದು, ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಇದನ್ನೂ ಓದಿ: ಶಾರೀಕ್ ಆರೋಗ್ಯದಲ್ಲಿ ಶೇ.80ರಷ್ಟು ಚೇತರಿಕೆ – ನಡೆದಾಡುವ ಸ್ಥಿತಿಗೆ ಬಂದ ಉಗ್ರ